________________
ಷಷ್ಠಾಶ್ವಾಸಂ | ೩೦೫
ವ|| ಆಮುಮದಂ ನೋಡಲಾದೆಯುಂ ಪಾಂಡುರಾಜನೆನ್ನಿರ್ದಿರವನೆನ್ನ ಮಕ್ಕಳಜೆಪಿ ರಾಜಸೂಯಮೆಂಬ ಯಾಗಮಂ ಬೇಳ್ವಂತೆ ಮಾಡಿ ಬನ್ನಿಮೆನೆಯುಮದನಪಲೆಂದ ಬಂದಮಾ ಮಖದ ಮಾಹಾತ್ಮ ಮಂ ಪೇಡೆ ಮುನ್ನಂ ಕೃತಯುಗದೊಳ್ ಹರಿಶ್ಚಂದ್ರನೆಂಬ ಚಕ್ರವರ್ತಿ ಶತಕ್ರತುವಂ ನಿರ್ವತಿ್ರಸಿ ಚತುರರ್ಣವಪರೀತಮಹೀತಳಮೆಲ್ಲಮಂ ಧರಾಮರರ್ಕ ದಕ್ಷಿಣೆಗೊಟ್ಟನಪ್ಪುದಂದಮದು ಫಲದೊಳೀಗಳಾತನಲ್ಲಿಗಿಂದಂ ನಿಚ್ಚವೊಂದು ಪೊತ್ತು ಪೋಗಿ ಪೂಜಿಸಿ ಬರ್ವ೦ ನಿಮ್ಮಯ್ಯಂಗೆ ನೀಮುಮನಿತು ಮಹಿಮೆಯಂ ಮಾರವೊಡೆ
ಚoll
ಬಿರುದರನೊತ್ತಿ ಬೀರರನಡಂಗಿಸಿ ಕೊಂಕಿಗರಂ ಕಯಲ್ಲಿ ಚಿ ನರನಡಿಗೊತ್ತಿ ಮಂಡಳಿಕರಂ ಬೆಸಕೆಯಿ ಕಟುಂಬರಂ ನಿರಾ | ಕರಿಸಿ ಸಮಸ್ತವಾರಿಧಿಪರೀತಮಹೀತಳದರ್ಥಮೆಲ್ಲಮಂ
ತರಿಸಿ ನೆಗಡಿಯಂ ನಿಡೆಸಲಾರ್ಪೊಡೆ ಮಾಡಿರೆ ರಾಜಸೂಯಮಂ | ೧೮
ವ|| ಎಂದು ರಾಜಸೂಯಾಂತಂ ಕಳಹಮೆಂಬುದಂ ಬಗೆದು ತಾನುಂ ಕಲಹ
ಪ್ರಿಯನಪ್ಪುದಂದಮನಿತನೆ ನುಡಿದು ಮಾಣ್ಣ ಮುನೀಂದ್ರನಂ ನರೇಂದ್ರನಿಂತೆಂದಂಚoll ಬೆಳಗುವುದಿಂದ್ರಲೋಕದೊಳಗಯ್ಯನ ಮಾತನಮ್ಮ ಸಾಹಸಂ ಬೆಳಗುವುದೀ ಧರಾವಳಯದೊಳ್ ತಣಿವರ್ ದ್ವಿಜಮುಖರಪ್ಪುದ | ಗ್ಗಳಿಕೆ ಪೊದಳು ಪರ್ವುವುದು ಕೀರ್ತಿ ಪುರಾಕೃತಪುಣ್ಯದಿಂದ ಸಂ ಗಳಿಸುವುದೆಂದೊಡೀ ಮಖದೊಳೇನ್ ತೊದಳುಂಟೆ ಮುನೀಂದ್ರನಾಯಕಾ || ೧೯
ಕೊರತೆಯುಂಟಾಗಬಹುದೇ ? ವll ನಾವು ಅದನ್ನು ನೋಡಲಾರದಿದ್ದುದರಿಂದಲೂ ಪಾಂಡುರಾಜನೂ 'ನಾನಿರುವ ಸ್ಥಿತಿಯನ್ನು ತನ್ನ ಮಕ್ಕಳಿಗೆ ತಿಳಿಸಿ ರಾಜಸೂಯವೆಂಬ ಯಜ್ಞವನ್ನು ಮಾಡುವಂತೆ ಮಾಡಿ ಬನ್ನಿ' ಎಂದು ಹೇಳಿದುದರಿಂದಲೂ ಇದನ್ನು ತಿಳಿಸಬೇಕೆಂದೇ ಬಂದೆವು. ಆ ಯಾಗದ ಮಾಹಾತ್ಮವನ್ನು ಏನೆಂದು ಹೇಳಲಿ. ಮೊದಲು ಕೃತಯುಗದಲ್ಲಿ ಹರಿಶ್ಚಂದ್ರನೆಂಬ ಚಕ್ರವರ್ತಿ ನೂರು ಯಜ್ಞವನ್ನು ಮಾಡಿ ನಾಲ್ಕು ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಭಾಗವನ್ನೆಲ್ಲ ಬ್ರಾಹ್ಮಣರಿಗೆ ದಕ್ಷಿಣೆಯಾಗಿ ಕೊಟ್ಟನು. ಅದರ ಫಲವಾಗಿ ಈಗ ಆತನಲ್ಲಿಗೆ ದೇವೇಂದ್ರನು ಪ್ರತಿನಿತ್ಯವೂ ಒಂದು ಹೊತ್ತು ಹೋಗಿ ಪೂಜಿಸಿ ಬರುತ್ತಿದ್ದಾನೆ. ನಿಮ್ಮ ತಂದೆಗೆ ನೀವೂ ಅಷ್ಟು ವೈಭವವನ್ನು ಮಾಡಲಾರಿರಾ'-೧೮. ಬಿರುದುಳ್ಳ ರಾಜರನ್ನೆಲ್ಲ ಆಕ್ರಮಿಸಿ ವೀರರನ್ನೆಲ್ಲ ಅಡಗಿಸಿ ವಕ್ರವಾಗಿರುವವರನ್ನೆಲ್ಲ ಸಡಿಲಿಸಿ ಪರಾಕ್ರಮಿಗಳನ್ನು ಕಾಲಿನ ಕೆಳಕ್ಕೆ ಅದುಮಿ ಸಾಮಂತರನ್ನು ಆಜ್ಞಾಧೀನರನ್ನಾಗಿ ಮಾಡಿ ಅಸೂಯೆಗಾರರನ್ನು ಉಪೇಕ್ಷಿಸಿ ಸಮಸ್ತ ಸಮುದ್ರಗಳಿಂದ ಸುತ್ತುವರಿಯಲ್ಪಟ್ಟ ಭೂಮಂಡಲದ ದ್ರವ್ಯವನ್ನು ಬರಮಾಡಿಕೊಂಡು ನಿಮ್ಮ ಪ್ರಸಿದ್ಧಿಯನ್ನು ಸ್ಥಾಪಿಸಲು ಸಮರ್ಥರಾಗಿದ್ದರೆ ರಾಜಸೂಯಯಾಗವನ್ನು ಮಾಡಿರಿ. ವll ಎಂದು 'ರಾಜಸೂಯದ ಕಡೆಯಲ್ಲಿ ಜಗಳ ಎಂಬುದನ್ನು ಮನಗಂಡು ತಾನು ಕಲಹಪ್ರಿಯನಾದುದರಿಂದ ಅಷ್ಟನ್ನು ಮಾತ್ರ ಹೇಳಿ ನಿಲ್ಲಿಸಿದ ಮುನೀಂದ್ರನನ್ನು ನರೇಂದ್ರನಾದ ಧರ್ಮರಾಜನು ನಾರದನಿಗೆ ಹೀಗೆ ಹೇಳಿದನು-೧೯. ಇಂದ್ರಲೋಕದಲ್ಲಿ ನಮ್ಮ ತಂದೆಯ ಮಾತು ಬೆಳಗುವ ಹಾಗೆಯೇ ಈ ಭೂಮಂಡಲದಲ್ಲಿ ನಮ್ಮ ಶೌರ್ಯವೂ ಬೆಳಗುತ್ತದೆ. ಬ್ರಾಹ್ಮಣಶ್ರೇಷ್ಠರೂ