________________
ಪಷ್ಠಾಶ್ವಾಸಂ / ೩೦೧ ಕೊಂದು ಕೊಂಡೊಡಾತನಂ ರಾಮಚಂದ್ರನ ತಮ್ಮ ಶತ್ರುಘ್ನಂ ಗಲ್ಲು ತನಗೆ ಕೊಂಡು ಸಮುದ್ರದ ನಡುವಣ ಮೈನಾಕಪರ್ವತದೊಳ್ ಮಡಗಿದೊಡೆನಗಿದು ವರುಣದೇವನಿತ್ತಂತಪ್ಪುದುಕಂll ಅಧಿಕರಿಪುನೃಪತಿಬಳನವ
ರುಧಿರಜಳನ್ನುರಿತರೌದ್ರಮಾ ಗದೆ ಪಸರಿಂ | ರುಧಿರಮುಖಿಯೆಂಬುದೆಂದದ
ನಧಿಕಬಳಸ್ಥಂಗೆ ಭೀಮಸೇನಂಗಿತ್ತಂ || ವಅಂತಿತ್ತು ಬಟಯಮವರ ದಾನಸನ್ಮಾನಾದಿಗಳಿಂ ಮಯಂ ರಾಗರಸಮಯನಾಗಿ ಸಂತಸಂಬಟ್ಟು ಪೋದನಿತ್ತ ಮತ್ತೊಂದು ದಿವಸಮಾ ಸಭಾಮಂಟಪದೊಳ್ ಧರ್ಮರಾಜಂ ತನ್ನ ನಾಲ್ವರ್ ತಮ್ಮಂದಿರೊಡನೆ ದೇವೇಂದ್ರಲೀಲೆಯಿಂದೋಲಗಂಗೊಟ್ಟರೆಯಿರಚಂ|| ಬೆಳಗುಗಳೆಲ್ಲವೊಂದುರುಳಿಯಾಗಿ ನಭಸ್ಥಳದಿಂದಮಾ ಮಹೀ
ತಳಕಿಟತರ್ಪುದೆಂದು ಮನುಜಾಕೃತಿಯಂದು ಮುನೀಂದ್ರನೆಂದು ಕ | ಗೂಳಿಸಿ ಮುನೀಂದ್ರರೊಳ್ ಕಮಳಸಂಭವನಂದನನೆಂದು ನೋಟಕರ್
ತಳವೆಳಗಾಗೆ ಸಾರೆವರೆ ನೀರದಮಾರ್ಗದಿನಂದು ನಾರದಂ | ತರಳ 11 ಬಳಸಿ ತನ್ನೊಡನೊಯ್ಯನೊಯ್ಯನೆ ಬರ್ಪ ದೇವರದೊಂದು ಗಾ
ವುಳಿಯನಿನ್ನಿರಿಮೆಂದು ತನ್ನನೆ ನಿಳ್ಳಿ ನೋಬ್ಬರ ಕಣ್ಣೆ ಕ || ಸ್ಕೊಳಪು ತನ್ನಯ ಮೆಯ್ಯ ಬೆಟ್ಟಿನೊಳಟ್ಟು ನಿಂದೊಡೆ ವಾಳೆಮಾನ್ ಪೊಳೆಯ ಧಾತ್ರಿಗೆ ವರ್ಷ ಗಂಗವೊಲೊಪ್ಪಿದಂ ಮುನಿಪುಂಗವಃ || ೭
ಶತ್ರುಘ್ನನು ಗೆದ್ದು ಸಮುದ್ರದ ಮಧ್ಯದಲ್ಲಿರುವ ಮೈನಾಕಪರ್ವತದಲ್ಲಿ ಮಡಗಿದನು. ಇದನ್ನು ವರುಣದೇವನು ನನಗೆ ಕೊಟ್ಟನು. ೫. ಇದು ಅನೇಕ ಶತ್ರುರಾಜರ ಸೈನ್ಯದ ಹೊಸರಕ್ತದಿಂದ ಕೂಡಿ ಭಯಂಕರ ಪ್ರಕಾಶಮಾನವಾಗಿದೆ. ರುಧಿರಮುಖಿಯೆಂಬುದು ಇದರ ಹೆಸರು ಎಂದು ಅದನ್ನು ಅಧಿಕಬಲನಾದ ಭೀಮಸೇನನಿಗೆ ಕೊಟ್ಟನು. ವ|| ಬಳಿಕ ಮಯನು ಪಾಂಡವರ ದಾನಸನ್ಮಾನಗಳಿಂದ ಸಂತುಷ್ಟನಾಗಿ ಹೋದನು. ಈ ಕಡೆ ಮತ್ತೊಂದು ದಿವಸ ಧರ್ಮರಾಜನು ತನ್ನ ನಾಲ್ವರು ತಮ್ಮಂದಿರೊಡನೆ ದೇವೇಂದ್ರನ ವೈಭವದಿಂದ ಸಭೆಯನ್ನು ನಡೆಸುತ್ತಿರಲು ೬. ಮೊದಲು ಕಾಂತಿಸಮೂಹವೆಲ್ಲ ಒಂದು ಉಂಡೆಯಾಗಿ ಆಕಾಶದಿಂದ ಈ ಭೂಮಂಡಲಕ್ಕೆ ಇಳಿಯುತ್ತಿರುವಂತೆಯೂ ಅನಂತರ ಅದು ಮನುಷ್ಯಾಕೃತಿಯಂತೆಯೂ ಇನ್ನೂ ಹತ್ತಿರ ಬರಲು ಮುನಿಶ್ರೇಷ್ಠನಂತೆಯೂ ಕಣ್ಣಿಗೆ ಕಾಣಿಸಿಕೊಂಡು (ಇನ್ನೂ ಹತ್ತಿರ ಬರಲು) ಬ್ರಹ್ಮನಂದನನಾದ ನಾರದನೆ ಬರುತ್ತಿದ್ದಾನೆ' ಎಂದು ನೋಡುತ್ತಿದ್ದವರು ಆಶ್ಚರ್ಯಪಡುವ ಹಾಗೆ ಆಕಾಶಮಾರ್ಗದಿಂದ ನಾರದನು ಸಮೀಪಕ್ಕೆ ಬಂದನು. ೭. ತನ್ನನ್ನು ಸುತ್ತಿಕೊಂಡು ತನ್ನೊಡನೆ ಸಾವಧಾನವಾಗಿ ಬರುತ್ತಿದ್ದ ದೇವತೆಗಳ ಸಮೂಹವನ್ನು ಇನ್ನು ನೀವು ನಿಲ್ಲಿರಿ' ಎಂದು ಹೇಳಿ ತನ್ನನ್ನೇ ಕುರಿತು ದಿಟ್ಟಿಸಿ ನೋಡುತ್ತಿದ್ದವರ ಕಣ್ಣಿಳುಪು ತನ್ನ ಶರೀರದ ಬಿಳುಪಿನಲ್ಲಿ ಸೇರಿ ಕೊಂಡಿರಲು ಹೊಳೆಯುವ ಬಾಳೆಮೀನಿನಿಂದ ಕೂಡಿದ ಗಂಗೆಯು ಭೂಮಿಗೆ ಇಳಿದು