________________
೩೦೨ | ಪಂಪಭಾರತಂ
ವ|| ಅಂತು ಬರ್ಪಾಗಳ
ತರಳ|| ಸರಿಗೆಯೊಳ್ ಸಮದಕ್ಷಮಾಲಿಕೆ ಪೊನ್ನ ಮುಂಜಿ ತೊಳಪ್ಪ ಕ ಪುರದ ಭಸ್ಮರಜಪುಂಡಕಮೊಪ್ಪೆ ಪಿಂಗ ಜಟಾಳಿ ತಾ | ವರೆಯ ಸೂತ್ರದೊಳಾದ ಜನ್ನವಿರಂ ದುಕೂಲದ ಕೋವಣಂ ಕರಮೊಡಂಬಡೆ ನೋಟಕರ್ಕಳನಾ ತಪಸ್ವಿ ಮರುಳ್ಳಿದಂ ||
ಕಂ ಬಟ್ಟಗೊಡೆ ಚಂದ್ರಕಾಂತಿಯ
ನಟ್ಟುಂಬರಿಗಳ ಪೊದಳ ಕೃಷ್ಣಾಜಿನಮೊಂ ದಿಟ್ಟಳಮಸಯ ಬೆಡಂಗಂ
ಪುಟ್ಟಸ ಗಾಡಿಗಳೊಳೆಸೆವ ವೀಣಾಕ್ವಣಿತಂ ||
ಬೆರಲೊಳ್ ಬೀಣೆಯ ತಂತಿಗ
ಊರಸಿದ ಕೆಂಗಲೆಗಳಕ್ಷಮಾಲೆಯೊಳೆಸೆದಂ | ತಿರ ಪೊಸೆಯ ಮುತ್ತು ಪವಳಂ
ಬೆರಸಿದವೋಲಾಯ್ತು ಚೆನ್ನ ತಪಸಿಯ ಕೆಯೊಳ್ ||
ವ|| ಅಂತು ಸಾಕ್ಷಾತ್ ಬ್ರಹ್ಮಂ ಬರ್ಪಂತ ಬಂದು
ಕಂ।।
ಅಡಿಯಿಟ್ಟನೆಳೆಯೊಳಿವನಂ
ಬೆಡೆಯೊಳ್ ಪರಿಜನಸಮೇತಮಿದಿರೆಲ್ಲರಸಂ | ಪೊಡವಡ ತಪಸ್ವಿ ಕೆಯ್ಯಂ
ಪಿಡಿದ ಪಲರ್ಮ ಪರಸಿದಂ ಪರಕೆಗಳಂ ||
Co
33
ಬರುತ್ತಿದ್ದ ಹಾಗೆ ಋಷಿಶ್ರೇಷ್ಠನಾದ ನಾರದನು ಪ್ರಕಾಶಿಸಿದನು. ೮. (ಚಿನ್ನದ) ಸರಿಗೆಯಲ್ಲಿ ಮಾಡಿದ ಜಪಸರ, ಹೊನ್ನಿನ ಉಡಿದಾರ, ಹೊಳೆಯುವ ಕರ್ಪೂರದ ಧೂಳಿನಿಂದ ಮಾಡಿದ ವಿಭೂತಿಯ ಮೂರು ಗೆರೆಗಳು, ಪಿಂಗಳಬಣ್ಣದ ಜಟೆಯ ಸಮೂಹ, ತಾವರೆಯ ನೂಲಿನಿಂದ ಮಾಡಿದ ಯಜ್ಯೋಪವೀತ, ರೇಷ್ಮೆಯ ಕೌಪೀನ, ಇವು ವಿಶೇಷವಾಗಿ ಒಪ್ಪುತ್ತಿರಲು ಆ ಋಷಿಯು ನೋಡುವವರನ್ನು ವಿಶೇಷವಾಗಿ ಆಕರ್ಷಿಸಿದನು. ೯. ಗುಂಡಾಗಿರುವ ಕೊಡೆಯು ಚಂದ್ರನ ಕಾಂತಿಯನ್ನು ಅಟ್ಟಿ ಓಡಿಸುವಂತಿತ್ತು. ಶರೀರದಲ್ಲಿ ಹರಡಿದ್ದ ಜಿಂಕೆಯ ಚರ್ಮವು ಮನೋಹರವಾಗಿತ್ತು. ಸೊಗಸಾಗಿ ಧ್ವನಿಮಾಡುವ ವೀಣೆಯ ನಾದವು ಬೆಡಗನ್ನು ಹುಟ್ಟಿಸಿತು. ೧೦. ಬೆರಳುಗಳಲ್ಲಿ ವೀಣೆಯ ತಂತಿಗಳನ್ನು ಉಜ್ಜಿದ ಕೆಂಗಲೆಗಳು ಜಪಮಾಲೆಗಳಲ್ಲಿ ಸೇರಿ ಹೆಣೆದುಕೊಂಡಿರಲು ಆ ಚೆಲುವಾದ ತಪಸ್ವಿಯ ಕಯ್ಯಲ್ಲಿ ಮುತ್ತೂ ಹವಳಗಳೂ ಬೆರಸಿದ ಹಾಗಾಯಿತು. ವ|| ಹಾಗೆ ಸಾಕ್ಷಾತ್ ಬ್ರಹ್ಮನೇ ಬರುವ ಹಾಗೆ ಬಂದು ೧೧. ಭೂಮಿಯಲ್ಲಿ ಇವನು ಕಾಲಿಟ್ಟನೆಂಬ ಸಮಯದಲ್ಲಿಯೇ ಧರ್ಮರಾಜನು ಪರಿವಾರಸಮೇತವಾಗಿ ಇದಿರಾಗಿ ಎದ್ದುಹೋಗಿ ನಮಸ್ಕರಿಸಲು ತಪಸ್ವಿಯಾದ