________________
೩೦೦) ಪಂಪಭಾರತಂ ಸಭಾಮಂಟಪಮನೊಂದುಲಕ್ಕ ರಕ್ಕಸವಡೆಯಿಂ ಪೊತ್ತು ತರಿಸಿ ತನ್ನ ನಿಯಂ ಬಲೆಯಂ ಮಳೆಯಲೆಂದು ದೇವಲೋಕದಿಂ ತಂದು ಮುಂದಿಟ್ಟುಮl. ಇದeಂದಂ ಬಿಸವಂದನೊಂದು ತೆಂನಿಂತೆಂದೊಡಾರಮ್ಮೊಡಿಂ
ತಿದಳೊಳ್ ದಿವ್ಯ ಸರೋವರಂಗಳಿದಕ್ಲ್ ಕಲ್ಲಾವನೀಜಂಗಳಂ | ತಿದeಳೊಳ್ ನಾಟಕಶಾಲೆ ರಯ್ಯಮಿದುಳೊಳ್ ದೇವಾಪ್ಟರೋನೃತ್ಯವಿಂ ತಿದಂತಾಗಿದೆ ನೋಡಾರುಮಳೆಯ ಮಾಡಲ್ ಸಭಾಗೃಹಮಂ || ೩
ವ|| ಎಂದ ಪ್ರಾಣಮಂಬುದು ವಿಕ್ರಮಾರ್ಜುನನ ದಯೆಗೆಯ್ದು ಪ್ರಾಣವನ್ನ ಕೊಟ್ಟುದರ್ಕೆ ಮಾರ್ಕೊಳ್ಳದೆ ಕೊಳ್ಳಿಮೆಂದೊಡಂತೆಗೆಯೌಮೆಂದು ನಿಶ್ಚಯಿಸೆ ಧರ್ಮಪುತ್ರಂಗೋಲ ಗಂಗುಡಲಕ್ಕುದೆಂದದಂ ಧರ್ಮಪುತ್ರಂಗೆ ಕೊಟ್ಟು ಪರಾಕ್ರಮದವಳಂಗೆ ಶಶಾಂಕವಿಶದಯಶಮ ತೆರಳುರುಳಿಗೊಂಡಂತಿರ್ದ ಶಂಖಮಂ ಬಾಸಣಿಗೆಗಳೆದುಕಂ! ಇದನಿಂದ್ರನಟ್ಟಿದಂ ನಿನ
ಗಿದ ಪೆಸರ್ ದೇವದತ್ತಮೆಂಬುದು ನಿನಗ | ಭ್ಯುದಯಕರಂ ಶಂಖಂ ರಿಪು
ಹೃದಯಕವಾಟಪುಟವಿಘಟನಂ ನೋಡರಿಗಾ || ವ|| ಎಂದದಂ ವಿಕ್ರಮಾರ್ಜುನಂಗೆ ಕೊಟ್ಟು ಮುನ್ನಂ ಷೋಡಶರಾಜರೊಳಗೆ ಮಾಂಧಾತನೆಂಬಂ ವಿದ್ಯಾಧರನಾತನ ಗದೆಯಿದು ಬಚಿಯಮಾತನಂ ಲವಣನೆಂಬಸುರಂ ಕಾದಿ
ಸಭಾಮಂಟಪವನ್ನು ಲಕ್ಷರಾಕ್ಷಸಪಡೆಯಿಂದ ಹೊರಿಸಿಕೊಂಡು ಬಂದು ತನ್ನ ಸದ್ಗುಣವನ್ನೂ ಪರಾಕ್ರಮವನ್ನೂ ಪ್ರದರ್ಶಿಸುವುದಕ್ಕಾಗಿ ದೇವಲೋಕದಿಂದ ತಂದು ಅವರ ಮುಂದಿಟ್ಟನು. ೩. ಇದರ ಸೌಂದರ್ಯವು ಆಶ್ಚರ್ಯಕರವಾದುದು. ಒಂದು ರೀತಿಯದಲ್ಲ: ಇದರಲ್ಲಿ ದಿವ್ಯಸರೋವರಗಳಿವೆ, ಕಲ್ಪವೃಕ್ಷಗಳಿವೆ, ರಮ್ಯವಾದ ನಾಟಕಶಾಲೆಯಿದೆ, ದೇವಾಪ್ಸರೆಯರ ನೃತ್ಯವಿದೆ. ವಿಚಾರಮಾಡಿ ನೋಡುವುದಾದರೆ ಇದರಂತಹ ಸಭಾಮಂಟಪವನ್ನು ರಚಿಸಲು ಯಾರೂ ಸಮರ್ಥರಲ್ಲ. ವನನ್ನ ಪ್ರಾಣವೆಂಬುದು ವಿಕ್ರಮಾರ್ಜುನನು ದಯಮಾಡಿ ಕೊಟ್ಟ ಪ್ರಾಣ, ನಾನು ಕೊಟ್ಟಿದುದಕ್ಕೆ ಪ್ರತಿಯಾಡದೆ ಅಂಗೀಕಾರಮಾಡಬೇಕು ಎಂದನು. ಆಗಲೆಂದು ಅವರು ಒಪ್ಪಿದರು. ಇದು ಧರ್ಮರಾಜನು ಓಲಗಮಾಡಲು ಯೋಗ್ಯವಾದುದೆಂದು ಅದನ್ನು ಧರ್ಮರಾಜನಿಗೆ ಕೊಟ್ಟನು. ಪರಾಕ್ರಮಧವಳನಾದ ಅರ್ಜುನನಿಗೆ ಚಂದ್ರನಷ್ಟು ವಿಸ್ತಾರವಾದ ಯಶಸ್ಸಿನ ಉಂಡೆಯ ಹಾಗೆಯೂ ಇದ್ದ ಶಂಖವನ್ನು ಮುಸುಕು ತೆಗೆದು ೪. ಅರಿಗನೇ ನೋಡಿ, ಇದನ್ನು ನಿನಗೆ ಇಂದ್ರನು ಕಳುಸಹಿಸಿದನು. ಇದರ ಹೆಸರು ದೇವದತ್ತವೆಂದು, ಶತ್ರು ಹೃದಯಕವಾಟವನ್ನು ಭೇದಿಸುವ ಶಕ್ತಿಯುಳ್ಳದು, ಈ ಶಂಖವು ನಿನಗೆ ಶ್ರೇಯಸ್ಕರವಾದುದು ಇದನ್ನು ಸ್ವೀಕರಿಸು. ವ|| ಎಂದು ಅದನ್ನು ವಿಕ್ರಮಾರ್ಜುನನಿಗೆ ಕೊಟ್ಟು ಹಿಂದೆ ಷೋಡಶರಾಜರುಗಳಲ್ಲಿ ಮಾಂಧಾತನೆಂಬ ವಿದ್ಯಾಧರನಿದ್ದನು, ಅವನ ಗದೆಯಿದು; ಅವನನ್ನು ಲವಣನೆಂಬ ರಾಕ್ಷಸನು ಕಾದಿಕೊಂದು ಅದನ್ನು ತೆಗೆದುಕೊಂಡನು. ಅವನನ್ನು ರಾಮಚಂದ್ರನ ತಮ್ಮನಾದ