________________
೨೮೮ ) ಪಂಪಭಾರತಂ ತವದೊಣೆಗಳುಮಂ ತಂದನ್ನ ಪ್ರತಿಜ್ಞೆಯಂ ತೀರ್ಚುವೊಡಮಿಂದ್ರನಂ ಗೆಲ್ಗೊಡಮಿವನಮೋಘಂ ಕೆಯೊಳಲ್ವೇಚ್ಚುಮೆಂದೊಡತಿರಥಮಥನನಗ್ನಿದೇವಂಗೆ ಪೊಡವಟ್ಟು ಕೆಯೊಂಡು ಬೃಹಂದಳನೆಂಬ ಸಾರಥಿವರಸು ರಥವನೇಜಲೊಡಂಉll ಪಾವಕನಟ್ಟಿ ಖಾಂಡವವನುಂಡವನರ್ಜುನನೂಡಿದಪ್ಪನೆ
ರಾವತವಾಹನಂ ನೆದು ಸಾಧನ ಸಂಯುತನಾಂಪನಲ್ಲಿ ನಾ | ನಾ ವಿಧ ಯುದ್ಧಮುಂಟೆನುತ ಶೈಬ್ಯ ಬಳಾಹಕ ಮೇಘವರ್ಣ ಸು. ಗ್ರೀವ ಹಯಂಗಳಿಂದೆಸೆವುದ ರಥಮಂ ಹರಿ ತಾನುಮೇದಂ || ೭೮ ವ|| ಅಂತು ದಾರುಕಂ ರಥಮಂ ಚೋದಿಸಲೊಡಂಕಂ|| ಚೋದಿಸುವುದುಮಿರ್ವರ ರಥ
ಚೋದಕರವರೆರಡು ರಥದ ಗಾಲಿಯ ಕೋಳಿ೦ 1 ದಾದ ರಜಃಪಟಲಂ ಕವಿ
ದಾದಮೆ ತೀವಿದುದು ದಿವಿಜವಧುವಿರ ಕಸ್ತೂಲ್ - ೭೯ ವ! ಅಂತೆಯ್ಲಿ ಯಮುನಾನದಿಯ ತೆಂಕಣ ದೆಸೆಯೊಳ್ ನೂಳು ಯೋಜನದಗಲದೊಳ ಮನಿತ ನೀಳದೊಳಂ ನೆಯದುಮll ಕಕುಭಾಶೋಕ ಕದಂಬ ಲುಂಗ ಲವಲೀ ಭೂಜಾರ್ಜುನಾನೋಕಹ
ಪ್ರಕರಂ ಪುಷ್ಟಿತ ಹೇಮಪಂಕಜ ರಜಸ್ಸಂಸಕ್ತ ಶೃಂಗಾಂಗನಾ | ನಿಕರಂ ಸಾರಸ ಹಂಸ ಕೋಕಿಳ ಕುಳಧಾನೋತ್ಪರಂ ಚಲ್ಪನಾ ಯು ಕರಂ ಸಕ್ತನಿಳಿಂಪ ದಂಪತಿಗಳಿಂದಾ ನಂದನಂ ನಂದನಂ 1 ೮೦
ರಚಿತವಾದ ಗಾಂಡೀವವೆಂಬ ಬಿಲ್ಲನ್ನೂ ದಿವ್ಯವಾದ ಬಾಣಗಳಿಂದ ಪೂರ್ಣವಾಗಿ ತುಂಬಿದ ಅಕ್ಷಯತೂಣೀರಗಳನ್ನೂ (ಬತ್ತಳಿಕೆಗಳನ್ನೂ ತಂದು ತನ್ನ ಪ್ರತಿಜ್ಞೆಯನ್ನು ತೀರಿಸುವುದಕ್ಕೂ ಇಂದ್ರನನ್ನು ಗೆಲ್ಲುವುದಕ್ಕೂ ಅಮೋಘವಾದ ಇವುಗಳನ್ನು ಸ್ವೀಕರಿಸಬೇಕು ಎಂದು ಹೇಳಲು ಅತಿರಥಮಥನನಾದ ಅರ್ಜುನನು ಅಗ್ನಿದೇವನಿಗೆ ನಮಸ್ಕಾರಮಾಡಿ ಅವನ್ನು ಸ್ವೀಕರಿಸಿ ಬೃಹಂದಳನೆಂಬ ಸಾರಥಿಯೊಡನೆ ರಥವನ್ನು ಹತ್ತಿದನು. ೭೮. ಅಗ್ನಿಯು ಖಾಂಡವವನ್ನು ಸುಟ್ಟು ಉಣ್ಣುತ್ತಾನೆ, ಅರ್ಜುನನು ಉಣಿಸುತ್ತಾನೆ. ಐರಾವತವಾಹನನಾದ ಇಂದ್ರನು ಸೈನ್ಯಸಮೇತನಾಗಿ ಪ್ರತಿಭಟಿಸುತ್ತಾನೆ. ಇಲ್ಲಿ ನಾನಾವಿಧವಾದ ಯುದ್ಧವುಂಟು ಎನ್ನುತ್ತ ಶೈ, ಬಳಾಹಕ, ಮೇಘವರ್ಣ, ಸುಗ್ರೀವವೆಂಬ ಕುದುರೆಗಳಿಂದ ಪ್ರಕಾಶಮಾನವಾದ ರಥವನ್ನು ಕೃಷ್ಣನು ತಾನೂ ಹತ್ತಿದನು. ವ ದಾರುಕನು ರಥವನ್ನು ನಡೆಸಿದನು. ೭೯.ಸಾರಥಿಗಳು ಚೋದಿಸಲು ಎರಡು ರಥದ ಗಾಲಿಗಳ ಆಕ್ರಮಣದಿಂದಾದ ಧೂಳಿನ ಸಮೂಹವು ಮುತ್ತಿ ಮುಸುಕಿ ದೇವಸ್ತೀಯರ ಕಣ್ಣಲ್ಲಿ ವಿಶೇಷವಾಗಿ ತುಂಬಿತು. ವll ಯಮನಾನದಿಯ ದಕ್ಷಿಣದಿಕ್ಕಿನಲ್ಲಿ ನೂರು ಯೋಜನದಗಲವೂ ಅಷ್ಟೆ ಉದ್ದವೂ ಆಗಿತ್ತು ಆ ಖಾಂಡವವನ. ೮೦. ಕೆಂಪುಮ, ಅಶೋಕ, ಕದಂಬ, ಮಾತುಲುಂಗ, ಅರನೆಲ್ಲಿ, ಬಿಳಿಯಅತ್ತಿ ಮೊದಲಾದ ಮರಗಳ ಸಮೂಹಗಳಿಂದಲೂ ಪುಷ್ಪಭರಿತವಾದ ಹೊಂದಾವರೆಯ