________________
ಪಂಚಮಾಶ್ವಾಸಂ | ೨೮೯ ವ|| ಎನೆ ಸೊಗಯಿಸುವ ಖಾಂಡವವನಮಂ ವನರುಹನಾಭಂ ವಿಕ್ರಮಾರ್ಜುನಂಗೆ ತೋಬಲ್ಕು ತೋಡಿ -
ಮಗ ಅಲರಂ ನೋಯಿಸದೊಯ್ಯನೊಯ್ಯನಳಿಗಳ್ ಬಂಡುಣ್ಣುವಾಟಂದು ಬಂ
ದಲೆಯಣದು ಗಾಳಿ ಸೂರ್ಯಕಿರಣಾನೀಕಕ್ಕಮಂದಪೊಡಂ | ಸಲವಿಲ್ಲುತ ಸಿದ್ಧ ಖೇಚರರೆ ತಾಮಾಕ್ಟೇರಿಯಾಗಿ೦ತು ನಿ ಚಲುನೋರಂತಿರೆ ಕಾವರೀ ದೊರತು ಕಾಪೀ ನಂದನಕ್ಕಿಂದ್ರನಾ || ೮೧
ಉll
ಒಮ್ಮೆ ತೊಟ್ಟು ನೋಡಿ ಬನಮಂ ಮಘವಂ ಶಚಿ ಪೂತ ಚೂತಮಂ ನರ್ಮದಶೋಕವಲ್ಲರಿಯ ಪಲ್ಲವಮೊಂದನೆ ಕೊಯ್ದು ರಾಗದಿಂ | ಸೋರ್ಮುಡಿಯೊಳ್ ತಗುಳಿದೂಡ ಸೂಚನೆ ಬಾರಿಸಿದಂ ದಲೆಂದೂಡಿಂ ಕೂರ್ಮೆಯ ಮಾತು ಮೆಚ್ಚುವನಿತರ್ಕ ಬಳಾರಿ ಮುರಾಸುರಾರಿಯೇಂ | ೮೨
ಕಂ|| ಇಂತಪ್ಪ ಬನಮನಿದನಿ
ಎಂತನಲನನೂಡಲೆಂದು ಪೂಣ್ಣಯ್ ಮುಂ ಪೂ | ಇಂತೂಡು ಪೂಡು ಶಿತಶರ ಸಂತತಿಯಂ ಬಿಲ್ಗೊಳೇಕೆ ನೀಂ ತಡೆದಿರ್ಪಮ್ ||
೮೩
ಧೂಳಿನಲ್ಲಿ ಹೊರಳಾಡಿರುವ ಹೆಣ್ಣುದುಂಬಿಗಳ ಗುಂಪುಗಳಿಂದಲೂ ಬಕ, ಹಂಸ, ಕೋಗಿಲೆ ಮೊದಲಾದ ಪಕ್ಷಿಸಮೂಹದ ಶಬ್ದರಾಶಿಯಿಂದಲೂ ಆನಂದ ವನ್ನುಂಟುಮಾಡುವ ಆ ಖಾಂಡವವನವು ಪರಸ್ಪರ ಆಸಕ್ತರಾದ ದೇವದಂಪತಿ ಗಳಿಂದಲೂ ಸುಂದರವಾಗಿ ಕಂಡಿತು. ವ|| ಖಾಂಡವವನವನ್ನು ಶ್ರೀಕೃಷ್ಣನು ವಿಕ್ರಮಾರ್ಜುನನಿಗೆ ಸುತ್ತಾಡಿ ತೋರಿಸಿದನು. ೮೧. ಇಲ್ಲಿ ದುಂಬಿಗಳು ಹೂವನ್ನು ನೋಯಿಸದೆ ಮಕರಂದಪಾನಮಾಡುತ್ತವೆ. ಗಾಳಿಯು ನುಗ್ಗಿ ವೇಗವಾಗಿ ಬೀಸುವುದಿಲ್ಲ, ಸೂರ್ಯನ ಕಿರಣಸಮೂಹಗಳೂ ಎಂದೂ ಇಲ್ಲಿಗೆ ಪ್ರವೇಶಿಸುವುದಿಲ್ಲ, ಗರ್ವಿಷ್ಠರಾದ ಸಿದ್ದಖೇಚರರೇ ರಕ್ಷಕರಾಗಿ ಇದನ್ನು ನಿತ್ಯವೂ ಒಂದೇ ಕ್ರಮದಿಂದ ಕಾಯುತ್ತಿದ್ದಾರೆ. ಇಂದ್ರನ ಖಾಂಡವವನಕ್ಕೆ ರಕ್ಷಣೆ ಈ ರೀತಿಯಾಗಿ ಬಲಿಷ್ಠವಾಗಿದೆ. ೮೨. ಒಂದು ಸಲ ಇಂದ್ರನು ಶಚೀದೇವಿಯೊಡಗೂಡಿ ವನವನ್ನು ಸುತ್ತಾಡಿ ಬರುತ್ತಿದ್ದಾಗ ಹೂವಿನಿಂದ ಕೂಡಿದ ಮಾವಿನ ಮರವನ್ನು ಆಶ್ರಯಿಸಿದ್ದ ಅಶೋಕ ಬಳ್ಳಿಯನ್ನು ನೋಡಿ ಅದರ ಚಿಗುರನ್ನು ಶಚಿಯು ಕೊಯ್ದು ಪ್ರೀತಿಯಿಂದ ತನ್ನ ದೀರ್ಘವಾದ ತುರುಬಿನಲ್ಲಿ ಮುಡಿದುಕೊಳ್ಳಲು ಇಂದ್ರನು ಸೂಳ್ ಎಂದು ಶಬ್ದಮಾಡಿ ತಡೆದನು ಎಂಬುದು ನಿಜ ಎಂದು ಹೇಳುವಾಗ ಆ ವನದ ವಿಷಯದಲ್ಲಿ ಅವನ ಅಭಿಮಾನ ಎಷ್ಟಿರಬೇಕು ? ಪ್ರೀತಿಯ ಮಾತನ್ನು ಕೇಳಿ ಮೆಚ್ಚುವುದಕ್ಕೆ ಇಂದ್ರನು ಕೃಷ್ಣನೆಂದು ತಿಳಿದೆಯಾ? '೮೩. ಹೀಗಿರುವ ಈ ವನವನ್ನು ಅಗ್ನಿ ಉಣಲೆಂದು ಹೇಗೆ ಪ್ರತಿಜ್ಞೆಮಾಡಿದೆ? ಮೊದಲು ಪ್ರತಿಜ್ಞೆಮಾಡಿದ ಹಾಗೆ ಉಣಿಸು, ಏಕೆ ತಡಮಾಡುತ್ತೀಯೆ? ಬಿಲ್ಲಿನಲ್ಲಿ ಹರಿತವಾದ