________________
ಪಂಚಮಾಶ್ವಾಸಂ | ೨೮೭ ವ|| ಎಂದು ಮರುಮಾತಿಂಗೆಡೆಯಿಲ್ಲದಂತಿರೆ ನುಡಿದ ಪಡೆಮಚ್ಚೆ ಗಂಡನ ಗಂಡವಾತುಮಂ ನನ್ನಿವಾತುಮಂ ಮುರಾಂತಕಂ ಮೆಚ್ಚಿ ಮ|| ಸಮಕಟ್ಟಂಗೊರೆಗಾರುಮಿಲ್ಲರಿಗ ಕೇಳೋ ನಿನ್ನೊಳ್ ಸಮಂ ಧಾತ್ರಿಯೊಳ್
ಹಿಮಕೃದ್ದೂಧರದಂತೆ ನಿನ್ನ ಗುಣಸಂದೋಹಂಗಳಂ ಕಾಣಲ | ಕುಮೆ ಮತ್ತೊರ್ವನೊಳಾಗದಂತೆನೆ ಸಮಸ್ತೋರ್ವಿಧರಾಶೇಷ ಶೇ
ಪ ಮಹಾ ನಾಗ ಫಣಾಮಣಿ ದ್ಯುತಿಯನೇಂ ಖದ್ಯೋತದೊಳ್ ಕಾಣ್ಣರೇ ||೭೬ ಚಂ|| ಮುನಿಯಿಸಿದಂ ಕರಂ ರಿಡಿಯನಪ್ಪುದು ಬೇಂನ ಬೇಟ್ಟ ವಸ್ತು ಕಾಂ
ಚನಗಿರಿಯಿಂದಮಗ್ಗಳಮನಿಪುದದಾದೊಡಮೇನೊ ಜೀವಮು | ಜೈನಮಿಟದರ್ಥಮುಳ್ಳಿನೆಗಮಿತ್ತು ನೆಗಯನಾಂಪುದೆಂಬ ಪೆಂ
ಪಿನ ಸಮಕಟ್ಟು ಕಥೆ ದೊರೆಯಾರರಿಕೇಸರಿ ನಿನ್ನವೋಲ್ ಪೇಜಂ || ೭೭
ವ|| ಎಂದು ತನಗೆ ಕೊಟ್ಟ ಕೋಡಿಂಗೊಡಂಬಟ್ಟಿ ದಿತಿಜಕುಲದಾವಾನಲನುಮನರಾತಿ ಕಾಲಾನಲನುಮನನಲನಿಷ್ಟಾರ್ಥಸಿದ್ದಿಯಕ್ಕುಮೆಂದು ಪರಸಿ ಮನಃಪವನವೇಗದಿಂ ಪಾಲ್ಗಡಲ ನೆಯ್ಲಿ ತನ್ನ ಬಯ್ದಿಟ್ಟ ದಿವ್ಯ ಸಂಭವಂಗಳಪ್ಪ ಶ್ವೇತಾಶ್ವಂಗಳೊಳ್ ಪೂಡಿದ ದಿವ್ಯ ರಥಮುಮಂ ದಧೀಚಿ ಗಂಡಸ್ಟಮಪ್ಪ ಗಾಂಡೀವವೆಂಬ ಬಿಲ್ಲುಮಂ ದಿವ್ಯಶರಂಗಳೊಳ್ ತೆಕ್ಕನೆ ತೀವಿದ
ಬೇರುಗಳನ್ನು ಮೂಲೋತ್ಪಾಟನೆ ಮಾಡದೆ, ಬಂದು ತನಗೆ ಶರಣಾಗತರಾದವರನ್ನು ರಕ್ಷಿಸದೆ, ತ್ಯಾಗದ ಒಳ್ಳೆಯ ಗುಣವನ್ನು ಮುದ್ರಿಸದೆ ತಪ್ಪಿ ಬಾಳುವ ಹುಳುವಿಗೆ ಸಮಾನವಾದ ಮನುಷ್ಯನು ಬ್ರಹ್ಮಾಂಡವೆಂಬ ಅತ್ತಿಯ ಹಣ್ಣಿನಲ್ಲಿರುವ ಹುಳುವಲ್ಲದೇ ಮನುಷ್ಯನೇ ಮುರಾಂತಕಾ? ವll ಎಂದು ಪ್ರತ್ಯುತ್ತರ ಕೊಡುವುದಕ್ಕೆ ಅವಕಾಶವಿಲ್ಲದಂತೆ ಮಾತನಾಡಿದ ಪಡೆಮೆಚ್ಚೆಗಂಡನಾದ ಅರ್ಜುನನ ಪರಾಕ್ರಮದ ಮಾತನ್ನೂ ಸತ್ಯವಾಕ್ಕನ್ನೂ ಮುರಾಂತಕನು ಮೆಚ್ಚಿದನು. ವರ ಎಲೈ ಅರಿಗನೇ ಕೇಳು, ಈ ಭೂಮಿಯಲ್ಲಿ ನಿನ್ನ ಹೋಲಿಕೆಗೂ ಸಮಾನತೆಗೂ ಬರುವವರು ಯಾರೂ ಇಲ್ಲ: ಹಿಮವತ್ಪರ್ವತದಂತಿರುವ ನಿನ್ನ ಗುಣರಾಶಿಯನ್ನು ಮತ್ತೊಬ್ಬನಲ್ಲಿ ಕಾಣಲಾಗುವುದಿಲ್ಲ ಸಮಸ್ತ ಭೂಮಂಡಲವನ್ನು ಧರಿಸಿರುವ ಆದಿಶೇಷನೆಂಬ ಮಹಾಸರ್ಪದ ಹೆಡೆಯಲ್ಲಿರುವ ರತ್ನಕಾಂತಿಯನ್ನು ಮಿಂಚುಹುಳುವಿನಲ್ಲಿ ಕಾಣಬಹುದೇ? ೭೭. ನಿನ್ನನ್ನು ರೇಗಿಸಿದವನು ವಿಶೇಷ ದೊಡ್ಡವನಹುದು. ಬೇಡುವವನು ಬೇಡಿದ ವಸ್ತು ಮೇರುಪರ್ವತಕ್ಕಿಂತಲೂ ಅತಿಶಯವಾದುದು. ಆದರೇನು ? ಪ್ರಾಣವಿರುವವರೆಗೂ ಶೌರ್ಯ ಪ್ರದರ್ಶನಮಾಡಿ ಧನವಿರುವವರೆಗೂ ದಾನಮಾಡಿ ಪ್ರಸಿದ್ದಿಯನ್ನು ಪಡೆಯಬೇಕೆಂಬ ಹಿರಿಯ ಗುರಿ ನಿನ್ನ ದೃಷ್ಟಿಗಿದೆ. ನಿನಗೆ ಸಮಾನರಾದವರು ಯಾರಿದ್ದಾರೆ? ವll ಎಂದು ತನಗೆ ಕೊಟ್ಟ ದಾನಕ್ಕೆ ಒಡಂಬಟ್ಟು ರಾಕ್ಷಸರ ಕುಲಕ್ಕೆ ಕಾಡುಗಿಚ್ಚಿನಂತಿರುವ ಕೃಷ್ಣನನ್ನೂ ಶತ್ರುಗಳಿಗೆ ಪ್ರಳಯಾಗ್ನಿಯಂತಿರುವ ಅರ್ಜುನನನ್ನೂ ಅಗ್ನಿಯು 'ನಿಮ್ಮ ಇಷ್ಟಾರ್ಥಸಿದ್ದಿಯಾಗಲಿ' ಎಂದು ಹರಸಿ ಮನೋವಾಯುವೇಗದಿಂದ ಕ್ಷೀರಸಮುದ್ರವನ್ನು ಸೇರಿ ಅಲ್ಲಿ ತಾನು ಬಚ್ಚಿಟ್ಟಿದ್ದ ದೈವಾಂಶಸಂಭೂತಗಳಾದ ಬಿಳಿಯ ಕುದುರೆಗಳನ್ನು ಹೂಡಿದ ದಿವ್ಯರಥವನ್ನೂ ದಧೀಚಿಯ ಕಪೋಲಪ್ರದೇಶದಿಂದ