________________
೨೮೬ | ಪಂಪಭಾರತ
ವl ಈತನಜಮುಖವ್ಯಾಘ್ರಂ ಶ್ವೇತ ಕೃಷ್ಣಕಾರಕನೀತನ ಮಾತು ಮಾತಲ್ಲವೆಂದೊಡಾ ಮಾತು ತನ್ನಂ ಮೂದಲಿಸಿದಂತಾಗೆ ವಿದ್ವಿಷವಿದ್ರಾವಣನಿಂತೆಂದಂಚಂಎರೆದನ ಪೆಂಪುವೇಡನಲಂ ಪೊಣರ್ವಾತನ ಪೆಂಪುವೇಡಾ
ಸುರಪತಿ ಕೊಟ್ಟ ತಾಣದಡವೇಚಿಕ್ಕೋಡಮಾ ಯಮುನಾನದೀ ತಟಾಂ | ತರಮೊಸೆದಿತ್ಯನಾನೆರೆಯ ಕೇಳಳಾಧರನೀನದರ್ಕೆ ಮಾ
ತೆರಡಣಮಾಡಲಾಗದಿರು ಸೈಪಿನೊಳಲ್ಲದೆ ಕೂಡಿ ಬರ್ಕುಮೇ || ೭೩ ಮl ದನುಜಾರೀ ದಿವಿಜೇಂದ್ರ ಶಾಶ್ವತಗುಣಾ ನಿನ್ನಳ್ಳದೇಂ ಬೇಡಿದಾ
ನನಲಂ ತೀರ್ಥ ಸಮಿಾಪಮಂಬುನಿವಹ ವ್ಯಾಳ ಕಾಳಿಂದಿಯಾ | ವನಮುಂ ಕೇಳುವು ಭೂತಮಯ್ಯುಮಣಿಗುಂ ಕೊಟ್ಟಿರ್ದುದಾದಂತಂ
ದಿನಗಿಂ ಮಾಣ್ಣುದು ಸೂಟಿ ಖಾಂಡವಮನಾಂ ತಳ್ಳಿಲ್ಲದಿ೦ದೂಡುವಂ ||೭೪ evoll ಒತ್ತಿ ತುಂಬಿ ನಿಂದ ರಿಪು ಭೂಜ ಸಮಾಜದ ಬೇರ್ಗಳಂ ನಭ
ಕೆತ್ತದೆ ಬಂದು ತನ್ನ ಮಜ್ವೊಕ್ಕೊಡೆ ಕಾಯದೆ ಚಾಗದೂಳಿನ | ಚಿತ್ರದ ಮಾಣು ಬಾ ಪುಲುಮಾನಸನೆಂಬನಜಾಂಡಮಂಬುದೂಂ ದತ್ತಿಯ ಪಡ್ಕೊಳಿರ್ಪ ಪುಲುವಲ್ಲದೆ ಮಾನಸನೇ ಮುರಾಂತಕಾ | ೭೫
ಚಮತ್ಕಾರದ ಮಾತನ್ನೂ ಕಾಣೆ ಎಂದನು. ಕೃಷ್ಣನು “ನೀನು ಏನುಮಾಡಿದೆ? ಇನ್ನು ಮೇಲೆ ಕೊಡುವ ಮಾತನ್ನೇ ಆಡಬೇಡ. ಇವನು ಊಟಮಾಡುವುದು ಖಾಂಡವವನವನ್ನು, ಈತನು ಅಗ್ನಿದೇವ; ಹಿಂದೆ ಇವನು ಹೀಗೆಯೇ ಸುಳ್ಳು ಹೇಳಿ ಆದಿಕಾಲದ ರಾಜರನ್ನೆಲ್ಲ ದೇವೇಂದ್ರನಲ್ಲಿ ಹೋರಾಡುವಂತೆ ಮಾಡಿದನು. ವ|| ಈತನು ಹೋತನ ಮುಖದ ಹುಲಿ (ಕಪಟಿ), ಬಿಳಿಯದನ್ನು ಕರಿಯದನ್ನಾಗಿ ಮಾಡುವವನು (ಮೋಸಗಾರ) ಈತನ ಮಾತು ಮಾತಲ್ಲ” ಎಂದನು. ಆ ಮಾತು ತನ್ನನ್ನು ಮೂದಲಿಸಿದ ಹಾಗಾಗಲು ವಿದ್ವಿಷ್ಟವಿದ್ರಾವಣನಾದ ಅರ್ಜುನನು ಹೀಗೆಂದನು. ೭೩. ಬೇಡಿದವನ ಹಿರಿಮೆಯನ್ನು ಹೇಳುವುದಾದರೆ ಅಗ್ನಿದೇವ, ಯುದ್ದಮಾಡುವವನ ಹಿರಿಮೆಯನ್ನು ಹೇಳುವುದಾದರೆ ಸಾಕ್ಷಾತ್ ದೇವೇಂದ್ರ, ಕೊಟ್ಟ ಸ್ಥಳವನ್ನು ಹೇಳುವುದಾದರೆ ಪವಿತ್ರವಾದ ಯಮುನಾನದೀದಡಪ್ರದೇಶ; ಪ್ರೀತಿಯಿಂದ ಕೊಟ್ಟವನು ನಾನು; ಪ್ರಾರ್ಥನೆಯನ್ನು ಕೇಳುವಾಗ ಸಾಕ್ಷಿಯಾಗಿದ್ದವನು ಭೂಧರನಾದ ನೀನು; ಅದಕ್ಕೆ ಸ್ವಲ್ಪವೂ ಎರಡುಮಾತನಾಡಕೂಡದು; ಇಂತಹ ಸಂದರ್ಭವು ಅದೃಷ್ಟದಿಂದಲ್ಲದೆ ಕೂಡಿಬರುತ್ತದೆಯೇ? ೭೪, ರಾಕ್ಷಸರಿಯಾದ ಶ್ರೀಕೃಷ್ಣನೇ, ದೇವೇಂದ್ರನಂತೆ ಶಾಶ್ವತವಾದ ಗುಣಗಳುಳ್ಳವನೇ, ನಿನ್ನ ಹೆದರಿಕೆಯೇನು? ಬೇಡಿದವನು ಅಗ್ನಿ, ಪುಣ್ಯತೀರ್ಥಕ್ಕೆ ಸಮೀಪದಲ್ಲಿ ಜಲರಾಶಿಯಿಂದ ಸಂಚರಿಸುತ್ತಿರುವ ಯಮುನಾನದಿಯ ಸಮೀಪವಿರುವ ಈ ಕಾಡುಗಳೂ ನಾನಾಡಿದ ಮಾತುಗಳನ್ನು ಕೇಳಿವೆ. ನಾನು ಮಾತುಕೊಟ್ಟಿರುವುದನ್ನು ಪಂಚಭೂತಗಳೂ ತಿಳಿದಿವೆ. ಆದುದರಿಂದ ಅದನ್ನು ತಪ್ಪುವುದು ನನಗೆ ಕ್ರಮವೇ ? ಖಾಂಡವವನವನ್ನು ನಾನು ತಡೆಯಿಲ್ಲದೆ ಉಣಿಸುತ್ತೇನೆ. ೭೫. ಮೇಲೆ ಬಿದ್ದು ಅಡ್ಡಗಟ್ಟಿ ನಿಂತ ಶತ್ರುಗಳೆಂಬ ಮರಗಳ ಸಮೂಹದ