________________
೨೪೨ / ಪಂಪಭಾರತಂ
ವ|| ನೋಡಿ ನಾಡಾಡಿಯಲ್ಲದಾಕೆಗಳ ಜೋಡೆಗೆಝಂಗಳಂ ಕಂಡಿದು ಮನೆಯಾಣನಂ ಮಾರುವದಮಲ್ಲದೆ ಪೂ ಮಾರುವದಮಲ್ಲೊಂದು ಮುಗುಳಗೆ ನಗುತುಂ ಬರ್ಪನೊಂದೆಡೆಯೊಳ್ ಮನೆಯಾನ ಕಣ್ಣೆಮೆಯ ಕಾಂಡಪಟಮಾಗೆಯುಂ ಬಗೆಯಾಣನ ಕಣ್ಣಿಮೆಯ ದೂದವಿಯಾಗಿಯುಂ ಬಗೆದೆಡೆಯನಲ್ಲೂ ಬಗೆದ ಬಗೆಯಂ ಬಗೆದಂತ ತೀರ್ಚಿ ಪೋಪ ಜೋಡೆಯರಂ ಕಂಡು ವಿಕ್ರಮಾರ್ಜುನನಿಂತೆಂದಂ
ಮ||
611
ಕುಜಪಂ ಪುರ್ವಿನ ಜರ್ವ ತೋ ಬಗೆಯಂ ಕಣ್ಣನ್ನೆಗಳ ಪೇಟೆ ತ ನೈಕಂ ತನ್ನ ಮನಕ್ಕೆ ಕೂಡ ಕೆಲಕಂ ಗಂಡಂಗಮೊಳಂ ಕರಂ | ಮೆವಾ ಪ್ರೌಢಯ ಜೋಡೆಯಕ್ಕು ಮಡೆಯೊಳ್ ದೂಂಟಿಂದ ದೂಂಟಿಂಗೆ ಪ ರ್ವಂ ಪೊಯ್ಲಿ ಕೆಲಕ್ಕೆ ನಾಣ್ನೆ ತಲೆಗುತ್ತಿರ್ಪಾಕೆಯೇಂ ಜೋಡೆಯೇ ||೮೨
ಕೂರಿದುವಪ್ಪ ಕಣಲರ್ಗಳಳ್ಳೆರ್ದೆಯೊಳ್ ತಡಮಾಡೆ ತಾಮ ಕಣ್ ಪೇರಿಸೆ ಪುರ್ವು ನಾಲಗೆವೊಲಾಗ ಮನಂಬುಗಿಸ ಬಲ್ಲೊಡಾ | ಜಾರೆಯ ಜಾರ ಪಾನೆ ಕರಂ ಪಿರಿದುಂ ಗಱಪುತ್ತುಮಿರ್ಪಳಂ ಸಾರಿಕೆಯೆಂಬರಲ್ಲದಭಿಸಾರಿಕೆಯೆಂಬರೆ ಬುದ್ಧಿಯುಳ್ಳವರ್ 11
೮೩
ಸುಳಿದಾಡಿತು. ವ|| ಆಗ ಆರು ಋತುಗಳ ಹೂವುಗಳನ್ನೂ ಒಟ್ಟುಗೂಡಿಸಿ ತನ್ನ ಪುಷ್ಪಬಾಣಗಳನ್ನು ಸಿದ್ಧಪಡಿಸಬೇಕೆಂದು ಕಾಮದೇವನು ಮಾಡಿದ ಅಕ್ಕಸಾಲೆಯ ಮನೆಯ ಹಾಗಿದ್ದ ಹೂವಿನ ಸಂತೆಯು ಕಂಡಿತು. ಹೂವಿನ ಸಮೂಹದ ಮಧ್ಯೆ ಇರುವ ವಸಂತ ಋತುವಿನ ಅಧಿದೇವತೆಯಂತೆ ಮಾಲೆಗಾತಿಯರು ೮೧. ಎತ್ತಿದ ಬಾಹುಮೂಲವು ಮನ್ಮಥನು ಗಾಳಿಪಟವಾಡಿಸುವಂತೆ ಆಡಿಸಲು ಎತ್ತಿದ ಅಪೂರ್ವ ಸೌಂದರ್ಯದಿಂದ ಕೂಡಿರಲು ಹೊಸದಾಗಿ ಕಟ್ಟಿದ ಹಾರವು ಮನ್ಮಥ ಚಕ್ರವರ್ತಿ ಗೆಂದೆತ್ತಿದ ಮೀನಧ್ವಜವನ್ನು ತಿರಸ್ಕರಿಸುತ್ತಿರಲು ಸರಸಸಲ್ಲಾಪಗಳಿಂದ ಹೂವನ್ನು ಎತ್ತಿ ತೋರಿಸುತ್ತಿರುವ ಅವರನ್ನು ಅರಿಕೇಸರಿಯು ನಿಂತು ನೋಡಿದನು. ವ|| ಸಾಮಾನ್ಯ ರಲ್ಲದ ಅವರ ಜಾರಕೃತ್ಯವನ್ನು ಕಂಡು ಇದು ಮನೆಯ ಗಂಡನನ್ನು ಮಾರುವ ರೀತಿಯಲ್ಲದೆ ಹೂವನ್ನು ಮಾರುವ ರೀತಿಯಲ್ಲವೆಂದು ಹುಸಿನಗೆಯನ್ನು ನಗುತ್ತ ಮುಂದೆ ನಡೆದನು. ಒಂದು ಕಡೆಯಲ್ಲಿ ಮನೆಯೊಡೆಯನ ಕಣ್ಣರೆಪ್ಪೆಯನ್ನು ತೆರೆಯನ್ನಾಗಿಯೂ ಮನದೊಲವಿನ ಮಿಂಡನ ಕಣ್ಣ ದೃಷ್ಟಿಯನ್ನೇ ಸಖಿಯನ್ನಾಗಿಯೂ ಭಾವಿಸಿಕೊಂಡು ಸಂಕೇತಸ್ಥಳವನ್ನು ಸೇರಿ ಇಷ್ಟಾರ್ಥವನ್ನು ಯೋಚಿಸಿದಂತೆಯೇ ತೀರಿಸಿಕೊಂಡು ಹೋಗುವ ಜಾರೆಯರನ್ನು ಕಂಡು ವಿಕ್ರಮಾರ್ಜುನನು ಹೀಗೆಂದನು೮೨. ತಮ್ಮ ಸಂಕೇತಸ್ಥಳವನ್ನು ಹುಬ್ಬುಹಾರಿಸು ವುದರಿಂದಲೂ ತಮ್ಮ ಮನಸ್ಸಿನ ಬಗೆಯನ್ನು (ಇಷ್ಟಾರ್ಥವನ್ನು ಕಣ್ಣಿನ ಸನ್ನೆಗಳಿಂದಲೂ ಪ್ರಕಾಶಪಡಿಸುತ್ತ ತನ್ನ ಪ್ರೀತಿಯು ತನ್ನ ಮನಸ್ಸಿಗೆ ತೃಪ್ತಿಯಾಗಿರಲು ತನ್ನ ಪಕ್ಕದವರಲ್ಲಿಯೂ ತನ್ನ ಗಂಡನಲ್ಲಿಯೂ ಸದ್ಭಾವವನ್ನೂ ಪ್ರಕಾಶಪಡಿಸುತ್ತಿರುವ ಆ ಚತುರಳೇ ನಿಜವಾದ ಜಾರೆಯಾಗುವವಳು. ಪಕ್ಕಪಕ್ಕಗಳಲ್ಲಿ ಹೆಜ್ಜೆ ಹೆಜ್ಜೆಗೂ ಡಂಗುರ ಬಡಿಯಿಸಿಕೊಂಡು ಅಕ್ಕಪಕ್ಕದವರಿಗೆ ನಾಚಿಕೊಂಡು ತಲೆತಗ್ಗಿಸುವಾಕೆ ಜಾರೆಯಾಗಬಲ್ಲಳೇ? ೮೩. ತನ್ನ ತೀಕ್ಷ್ಮವಾದ ಕಣ್ಣೆಂಬ ಹೂವುಗಳು ವಿಟನ ದುರ್ಬಲ ವಾದ ಎದೆಯನ್ನು ನಿಧಾನವಾಗಿ ತನ್ನಷ್ಟಕ್ಕೆ ತಾನೆ