________________
ಚತುರ್ಥಾಶ್ವಾಸಂ | ೨೪೧ ವಗೆ ಎಂದಿಂತು ನಲ್ಗಳಂ ನೆನೆದು ಕಣ್ಣಾಪನೆ ಕಾದು ಚಿಂತಾಸಮುದ್ರಾಂತರ ಪರಿವೃತನಾಗಿ ಸೈರಿಸಲಾಗಿದೆ ಪೋಬಲಂ ತೋಲಲ್ಲು ನೋಟ್ಟಿ ಬಗೆದಂದು ರಾಜಮಂದಿರದಿಂ ಪೋಲಮಟ್ಟು ಬರೆ ತನ್ನಂ ಕಾಣಲೊಡಮಣಿದು ನುಡಿಯಿಸಿ ಮೆಚ್ಚಿ ಮೇಳದ ನಾಗರಿಕ ವಿಟ ವಿದೂಷಕ ಪೀಠಮರ್ದಕರ್ಕಳ್ವರಸು ಕಾಮದೇವನೋಲಗಕ್ಕೆ ಬರ್ಪಂತೆ ಸೂಳೆಗೇರಿಯೊಳಗನೆ ಬರ್ಪುದುಮಲ್ಲಿ
ಮರ ಮೃಗಭೂಋದ್ಧ ವಿಳಾಸಿನೀ ಕಬರಿಕಾ ಬಂಧಂಗಳಂ ಪೊತ್ತು ಮ *
ಜ್ಜಿಗೆಯೊಳ್ ಭಾವಿಸಿ ಧೂಪದೊಳ್ ಪೊರೆದು ತತ್ಕಾಂತಾ ರತಿ ಸೈದ ಬಿಂ | ದುಗಳೊಳ್ ನಾಂದು ಕುರುಳಳೊಳ್ ಸುಟಿದು ಮುಂದೊಂದಿರ್ದ ಸೌಭಾಗ್ಯ ಘಂ ಟೆಗಳೊಂದಿಂಚರದೊಳ್ ಪಳಂಚಿ ಸುದತ್ತಂದೊಂದು ಮಂದಾನಿಳಂ || ೮೦
ವ|| ಆಗಳಾಜುಂ ಋತುಗಳ ಪೂಗಳನೊಂದುಮಾಡಿ ಪೂವಿನಂಬುಗಳಂ ಪಣ್ಣಲೆಂದು ಕಾಮದೇವ ಮಾಡಿದೋಜನ ಸಾಲೆಯರ್ಹಂತಿರ್ದ ಪೂವಿನ ಸಂತೆಯೊಳ್ ವಸಂತಕಾಂತೆಯರಂತೆ
ವll ಎತ್ತಿದ ತೋಳ ಮೊತ್ತಮೊದಲಂಗಜ ಲಂಪಟ ನಿದ್ದೆಗೆತ್ತಿದಂ
ತತ್ತಮಪೂರ್ವಮಾಗೆ ಪೊಸವಾಸಿಗಮಂಗಜ ಚಕ್ರವರ್ತಿಗಂ | ದೆತ್ತಿದ ಮಿಾನಕೇತನಮನೊತ್ತರಿಸುತ್ತಿರೆ ಚಲ್ಲವಾಡಿ ಪೂ ವೆತ್ತುವ ಮಾಲೆಗಾರ್ತಿಯರನೆಂದರಿಕೇಸರಿ ನಿಂದು ನೋಡಿದಂ ||
೮೧
ಪ್ರೇಮವಾದರೋ ಸಹಿಸಲಶಕ್ಯವಾದುದು. ಮನಸ್ಸನ್ನವಳಿಗೆ ತಿಳಿಸೋಣವೆಂದರೆ ಆಪ್ತ ಸ್ನೇಹಿತರಿಲ್ಲ: ಸುಭದ್ರೆಯಾದರೋ ಯವ್ವನದಿಂದ ಮದಿಸಿರುವವಳು; ಅವಳಿಗೆ ಲಜ್ಜೆಯ ತಡೆ ವಿಶೇಷವಾಗಿದೆ. ಪ್ರೀತಿಸಿ ಸಂವಾದಸರಣಿಯನ್ನುಂಟು ಮಾಡೋಣವೆಂದರೆ ಮಧ್ಯವರ್ತಿಗಳಾದ ಸಖಿಯರಿಲ್ಲ. ಆದುದರಿಂದ ಸುಭದ್ರೆಗೆ ಸಂಬಂಧಿಸಿದ ನನ್ನ ಪ್ರೇಮವು ನಿಜವಾಗಿಯೂ ಕಾಡಿನಲ್ಲಿ ಅತ್ತಂತೆಯೇ ಆಗಿದೆ. ವ| ಹೀಗೆ ಅರ್ಜುನನು ಪ್ರಿಯಳನ್ನು ಜ್ಞಾಪಿಸಿಕೊಂಡು ಅವಳು ತನ್ನನ್ನು ನೋಡುವುದನ್ನು ನಿರೀಕ್ಷಿಸುತ್ತಾ ಚಿಂತಾಸಮುದ್ರದ ಮಧ್ಯದಿಂದ ಸುತ್ತುವರಿಯಲ್ಪಟ್ಟವನಾಗಿ ಸಹಿಸಲಾರದೆ (ಮನಃಶಾಂತಿಗಾಗಿ) ನಗರವನ್ನಾದರೂ ಸುತ್ತ ನೋಡಿ ಬರೋಣವೆಂದು ಮನಸ್ಸು ಮಾಡಿದನು. ಅರಮನೆಯಿಂದ ಹೊರಟು ಬರುತ್ತಿದ್ದಂತೆಯೇ ತನ್ನನ್ನು ಕಂಡು ತಕ್ಷಣವೇ ಗುರುತಿಸಿ ಮಾತನಾಡಿ ಮೆಚ್ಚಿದ ಜೊತೆಗಾರರಾದ ನಾಗರಿಕ (ಜಾಣನಾದ ಪಟ್ಟಣದವನು) ವಿಟ (ಸ್ತ್ರೀಲೋಲರಾದ ರಾಜಕುಮಾರರ ಸ್ನೇಹಿತ) ವಿದೂಷಕ (ಹಾಸ್ಯಗಾರ) ಪೀಠಮರ್ದಕ (ಸ್ತ್ರೀ ಸಂಪಾದನೆಯಲ್ಲಿ ರಾಜಕುಮಾರರಿಗೆ ಸಹಾಯ ಮಾಡುವವನು) ರೊಡಗೂಡಿ ಮನ್ಮಥನ ಸಭಾಸ್ಥಾನಕ್ಕೆ ಬರುವಂತೆ ಸೂಳೆಗೇರಿ ಯೊಳಭಾಗದಲ್ಲಿ ಬಂದನು. ೮೦. ಅಲ್ಲಿಯ ಸುಂದರ ಸ್ತ್ರೀಯರ ತುರುಬಿನಲ್ಲಿ ವಿಶೇಷ ವಾಗಿ ಲೇಪಿಸಿಕೊಂಡಿದ್ದ ಕಸ್ತೂರಿಯ ಕಂಪನ್ನು ಧರಿಸಿ ಮಲ್ಲಿಗೆಯ ಹೂವಿನ ಸುಗಂಧ ದಲ್ಲಿ ಸೇರಿಕೊಂಡು ಧೂಪಗಂಧದಲ್ಲಿ ವ್ಯಾಪಿಸಿ ಆ ಸ್ತ್ರೀಯರ ರತಿಕ್ರೀಡೆಯಿಂದಾದ ಬೆವರ ಹನಿಯಲ್ಲಿ ತೊಯ್ದು ಮುಂಗುರುಳುಗಳಲ್ಲಿ ಸುತ್ತಾಡಿ ವೇಶ್ಯಾಗೃಹದ ಮುಂದೆ ಕಟ್ಟಿದ ಇಂಪಾದ ಘಂಟಾನಾದವನ್ನು ತಗುಲಿ ಒಂದು ಮಂದಮಾರುತವು