________________
ಚತುರ್ಥಾಶ್ವಾಸಂ | ೨೪೩ ವ|| ಎಂದು ಪಾರಂಕುಸನಾ ಪಾಣ್ಣೆಯರ ಗೆದ್ದು ಗೆಝಂಗಳುಮಂ ತೋರ್ಪ ಸನ್ನೆಗಳುಮಂ ಆಡುವ ಮಿಟ್ಟುಗೊಡಂಗಳುಮಂ ಕಂಡು ಚೋದ್ಯಂಬಟ್ಟು
ಮ||
ಅಲರ್ಗಕ್ಯೂಳ್ ಸ್ಮರನಿರ್ದನಕ್ಕು ಮಡವೋಪಾ ಜೋಡ ಕಾಮಂಗ ಕಾ ದಲೆಯಕ್ಕುಂ ಪೆಂತೇನೂ ಪಾರದರದೊಳ್ ಸಂಸಾರ ಸರ್ವಸ್ವಮಂ | ಗೆಲೆವಂದಿಂಪಿನಲಂಪನಾಳ ಸವಿಯುಂಟಕ್ಕುಂ ಸಮಂತಾವಗಂ ತಲೆಯಂ ಮೂಗುಮನೊತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೇ ||೮೪
ವ|| ಎನುತ್ತುಂ ಬರ್ಪನೊಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಜಿನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಟ್ಟಿಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಮಳವಿಗಳದ ವಿಳಾಸಂಗಳೊಳಂ ತಂಡತಂಡದ ನೆರೆದಿರ್ದ ಪಂಡವಾಸದೊಳೆಂಡಿರು ಕಂಡು
ಚಂ
ಮನಸಿಜನೀಕಗಂಡು ರತಿಯಂ ಬಿಸುಟಂ ಹರನೀಕಗಂಡು ನೂ ತನ ಗಿರಿಜಾತೆಯಂ ತೋದನಾ ನರಕಾಂತಕನೀಕೆಗಂಡು ತೊ | ಟೂನ ನಿಜಲಕ್ಷ್ಮಿ ಯಂ ಮದನೆಂಬ ನೆಗಯನಪುಕೆಯು ಜ ವ್ವನದ ವಿಳಾಸದಂದದ ಬೆಡಂಗಿನ ಪೆಂಡಿರ ಪೆಂಡಿರಲ್ಲಿಯಾ |
೮೫
ಚಲಿಸುವಂತೆ ಮಾಡಿ ಹುಬ್ಬುಗಳು ನಾಲಗೆಯಂತೆ ಮಾತನಾಡಿಸಿ ಅವನ ಮನಸ್ಸನ್ನು ಪ್ರವೇಶಿಸುವಂತೆ ಮಾಡಲು ಬಲ್ಲವಳು ನಿಜವಾದ ವೇಶ್ಯ, ಜಾರತ್ವವನ್ನು ಕುರಿತು ವಿಶೇಷವಾಗಿ ಹರಟುತ್ತಿರುವಳನ್ನು ಗಿಣಿಯೆನ್ನುವರಲ್ಲದೆ ಅಭಿಸಾರಿಕೆ (ಪ್ರಿಯವನ್ನು ರಹಸ್ಯವಾಗಿ ಹುಡುಕಿಕೊಂಡು ಹೋಗುವ ಜಾತಿ)ಯೆಂದು ಬುದ್ಧಿಯುಳ್ಳವರು ಅನ್ನುತ್ತಾರೆಯೆ? ವ|| ಎಂದು ಜಾರೆಯರಿಗೆ ಅಂಕುಶಪ್ರಾಯನಾದ ಅರಿಕೇಸರಿಯ ಆ ಜಾರೆಯರು ಮಾಡುವ ಕಾರ್ಯವನ್ನೂ ತೋರುವ ಸನ್ನೆಗಳನ್ನೂ ಆಡುವ ಮೃತ್ಯುವಿನಂತಹ ಚೇಷ್ಟೆಯ ಮಾತುಗಳನ್ನೂ ಕಂಡು ಆಶ್ಚರ್ಯಪಟ್ಟು ೮೪. (ಜಾರಸ್ತ್ರೀಯರ) ಹೂವಿನಂತಿರುವ ಕಣ್ಣಿನಲ್ಲಿ ಮನ್ಮಥನಿದ್ದಿರಬೇಕು. ಸಂಕೇತಸ್ಥಾನ ವನ್ನು ಹುಡುಕಿಕೊಂಡು ಹೋಗುವ ಆ ಜಾರೆಯರು ಮನ್ಮಥನ ಪ್ರೀತಿಗೆ ಪಾತ್ರರಾಗಿದ್ದಿರ ಬೇಕು. ಹಾದರದಲ್ಲಿ ಸಂಸಾರಸಾರಸರ್ವಸ್ವವನ್ನೂ ಮೀರಿರುವ ಸುಖದ ಸೊಂಪನ್ನು ಹೊಂದಿರುವ ರುಚಿಯಿದ್ದಿರಬೇಕು. ಹಾಗಿಲ್ಲದ ಪಕ್ಷದಲ್ಲಿ ಯಾವಾಗಲೂ ಅವರು ತಲೆಯನ್ನೂ ಮೂಗನ್ನೂ ಒತ್ತೆಯಿಟ್ಟು ಸುಮ್ಮನೆ ವಿಟರಲ್ಲಿ ಕೂಡುವಷ್ಟು ದಡ್ಡರೆ ? ವ|| ಎಂದುಕೊಂಡು ಬರುತ್ತಿದ್ದವನು ಒಂದು ಸ್ಥಳದಲ್ಲಿ ಮನ್ಮಥನು ಸಾಕಿದ ಜಂಗಮಲತೆಗಳಂತೆಯೂ ಕಾಮನ ರಕ್ಷಣೆಯಲ್ಲಿರುವ ಕಲ್ಪಲತೆಗಳಂತೆಯೂ ಮನೋಜನೆಂಬ ಬೇಟೆಗಾರನ ದೀಹದ (ಒಂದು ಮೃಗವನ್ನು ಹಿಡಿಯುವುದಕ್ಕಾಗಿ ಉಪಯೋಗಿಸುವ ಮತ್ತೊಂದು ಮೃಗ) ಹುಲ್ಲೆಯಂತೆಯೂ ತಮ್ಮ ತಮ್ಮ ಮನೆಯ ಮುಂದಿನ ಪಚ್ಚೆಯ ರತ್ನದಿಂದ ನಿರ್ಮಿತವಾದ ಜಗಲಿಗಳಲ್ಲಿಯೂ ರತ್ನಖಚಿತವಾದ ಮನೆಯ ಮುಂದಿನ ಕೈಸಾಲೆಗಳಲ್ಲಿಯೂ ಅಳತೆಮೀರಿದ (ಅತ್ಯಧಿಕವಾದ) ವೈಭವಗಳಿಂದ ಕೂಡಿ ಗುಂಪು ಗುಂಪಾಗಿ ಕೂಡಿದ್ದ ವೇಶ್ಯಾವಾಟಿಯ (ಸೂಳೆಗೇರಿಯ) ಉತ್ತಮ ಸ್ತ್ರೀಯರನ್ನು ನೋಡಿದನು. ೮೫. ಇವಳ ಸೌಂದರ್ಯವನ್ನು ನೋಡಿ.