________________
೧೮೪ | ಪಂಪಭಾರತಂ
ವ|| ಅಂತು ತನ್ನ ತಂದ ಬಂಡಿಯ ಕೂಲ್ಲಮಂ ಪತ್ತೆಂಟು ತುತ್ತಿನೊಳೆ ಸಮಯ ತುತ್ತುವುದು ಕಂಡು ರಕ್ಕಸನಿವನ ಪಾಂಗಂ ಮೆಚ್ಚಲಾಯನೆನ್ನುಮಿಂತು ಸಮೆಯ ತುತ್ತುಗುಮೆಂದು ಬಕಂ ಬಕವೇಷದಿಂ ಪಂಗಣ ದಸೆಗೆ ಮೆಲ್ಲನೋಸರಿಸಿ ಬಂದುಕಂti ಎರಡುಂ ಕೆಲನುಮನೆರಡು
ಕರ ಪರಿಘದಿನಡಸಿ ಗುರ್ದಿ ಪಂಪಿಂಗುವನಂ | ಮುರಿದಡಸಿ ಪಿಡಿದು ಘಟ್ಟಿಸಿ
ಪಿರಿಯಣಿಯೊಳ್ ಪೊಯ್ಸನಸಗವೊಯ್ದಂ ಭೀಮಂ | ವ|| ಅಂತು ಪೊಯೊಡೆ ಪೊಡೆಸಂಡಂ ಪೊಯ್ದಂತೆ ಮೇಗೊಗೆದು ಸೆಣಸೆ
ಬಾರಿಯನಿಟ್ಟು ಕೂಡ ಪೋಲಿಲಂ ತವೆ ತಿಂದನನಾರ್ತರಿಲ್ಲಣಂ ಬಾರಿಸಲಾರುಮಿನ್ ಜವನ ಬಾರಿಯೋಳಿಕ್ಕುವನೆಂದು ಪರ್ವ ಭೋ || ರ್ಭೋರನೆ ಬೀಸೆ ತದದನ ಗಹರದಿಂ ಬಿಸುನತರು ಭೂ
ರ್ಭೂರೆನೆ ಕೊಂದನಂಕದ ಬಳಾಧಿಕನಂ ಬಕನಂ ವೃಕೋದರಂII ೩೧ ವ|| ಅಂತು ಕೊಂದು ನೀಲಗಿರಿಯನೆ ಪಿಡಿದೆವಂತೆ ರಕ್ಕಸನ ಕರಿಯ ಪಿರಿಯೊಡಲ ನೆದು ತಂದು ಪೊಲೀಲ ನಡುವಿಕ್ಕಿದಾಗಳ್ ಪೊಬಲೆಲ್ಲಂ ಚೋದ್ಯಂಬಟ್ಟು ಬದ್ದವಣದ ಶಕ್ತಿ ಬರುವಂತೆ ಮೊದಲು ಅನ್ನವನ್ನು ಹೊಡೆಯುತ್ತೇನೆ (ತೃಪ್ತಿಯಾಗಿ ತಿನ್ನುತ್ತೇನೆ); ಆಮೇಲೆ ಆ ರಾಕ್ಷಸನನ್ನು ಹೊಡೆಯುತ್ತೇನೆ (ಧ್ವಂಸಮಾಡುತ್ತೇನೆ) ಎಂದು ಸಾಹಸ ಭೀಮನು ವ 11 ತಾನು ತಂದ ಬಂಡಿಯ ಅನ್ನವೆಲ್ಲವನ್ನೂ ಹತ್ತೆಂಟುತುತ್ತುಗಳಲ್ಲಿಯೇ ಮುಗಿಸುವ ಹಾಗೆ ಬಾಯಿಗೆ ತುಂಬಿಕೊಳ್ಳುವುದನ್ನು ರಾಕ್ಷಸನು ನೋಡಿ ಇವನ ರೀತಿಯನ್ನು ನಾನು ಮೆಚ್ಚಲಾರೆ. ನನ್ನನ್ನು ಇವನು ಪೂರ್ಣವಾಗಿ ನುಂಗಿ ಬಿಡುವಂತಿದೆ ಎಂದು ಬಕಪಕ್ಷಿಯ ರೂಪದಿಂದ ಹಿಂದುಗಡೆಗೆ ಸರಿದು ಬಂದು ೩೦. ಅವನ ಎರಡು ಪಕ್ಕಗಳನ್ನೂ ತನ್ನ ಗದೆಯಿಂತಿದ್ದ ಎರಡು ಕೈಗಳಿಂದ ಹಿಡಿದು ಗುದ್ದಿ ಹಿಂತಿರುಗಿದನು. ಹಾಗೆ ಹೋಗುತ್ತಿದ್ದವನನ್ನು ಭೀಮನು ಹಿಂತಿರುಗಿ ಘಟ್ಟಿಯಾಗಿ ಹಿಡಿದುಕೊಂಡು ದೊಡ್ಡ ಬಂಡೆಯ ಮೇಲೆ ಬಡಿದು ಅಗಸನ ಬಡಿತದಂತೆ ಬಡಿದನು. ವ|| ಹಾಗೆ ಹೊಡೆಯಲು, ಬಕನು ಪುಟಚೆಂಡನ್ನು ಹೊಡೆದಂತೆ ಮೇಲಕ್ಕೆ ಹಾರಿದನು. ೩೧. ಭೀಮನು ಸ್ವಲ್ಪ ಅವಕಾಶ ಮಾಡಿಕೊಂಡು ಅಲ್ಪಕಾಲದಲ್ಲಿ ಪಟ್ಟಣವನ್ನೇ ನಾಶಮಾಡಿದ ಇವನನ್ನು ಸ್ವಲ್ಪ ಮಾತ್ರವೂ ತಡೆಯಲು ಶಕ್ತರಾದವರು ಯಾರೂ ಇಲ್ಲ. ಇನ್ನು ಮೇಲೆ ಇವನನ್ನು ನಾನು ಯಮನ ಸರದಿಗೆ ಕಳುಹಿಸುತ್ತೇನೆ ಎಂದು ದೀರ್ಘವಾಗಿ ಭೋರ್ ಎಂದು ಶಬ್ದಮಾಡುತ್ತ ಅವನನ್ನು ಬೀಸಲು ಅವನ ಮುಖವೆಂಬ ಗುಹೆಯಿಂದ ಬಿಸಿರಕ್ತವು ಹರಿಯಿತು. ಪರಾಕ್ರಮಿಯಾದ ಆ ಬಕಾಸುರನನ್ನು ಅತಿಶಯವಾದ ಶಕ್ತಿಯುಳ್ಳ ಭೀಮನು ಕ್ಷಣಮಾತ್ರದಲ್ಲಿ ಕೊಂದುಹಾಕಿದನು. ವ|| ಹಾಗೆ ಕೊಂದು ನೀಲಪರ್ವತವನ್ನೇ ಹಿಡಿದೆಳೆಯುವಂತೆ ರಾಕ್ಷಸನ ಕರಿಯ ಹಿರಿಯ ಶರೀರವನ್ನು ಭೀಮನು ಎಳೆದುತಂದು ಪಟ್ಟಣದ ಮಧ್ಯಭಾಗದಲ್ಲಿ ಇಟ್ಟನು. ಪಟ್ಟಣವೆಲ್ಲ ಆಶ್ಚರ್ಯಪಟ್ಟು ಮಂಗಳವಾದ್ಯಗಳನ್ನು ಬಾಜನ