________________
ತೃತೀಯಾಶ್ಚಾಸಂ | ೧೮೩ * ತದ್ಧ ತಾಂತಮಲ್ಲಮಂ ಭೀಮಸೇನಂಗಳಪಿದೊಡೆ ನಾಳಿನುಣಿಸನನಗೆ ದೊರಕೊಳಿಸಿ ಬಂದುದು ಕರವೆಳ್ಳಿತಾಯ್ತಂದು ನಗುತಿರ್ಪನ್ನೆಗಂ ಮತ್ತಿನ ನಾಲ್ವರುಂ ಬಂದು ತದ್ವತ್ತಾಂತಮಲ್ಲಮಂ ಕೇಳು ನಮಗೀ ಪೋಲಲೊಳೊಂದು ಪರೋಪಕಾರಾರ್ಥಂ ಸಯ್ತಿನಿಂ ದೊರೆಕೊಂಡುದೆಂದಿರುಳೆಲ್ಲಂ ಬಕನ ಪಡೆಮಾತನೆ ನುಡಿಯುತ್ತಿರ್ಪನ್ನೆಗಂಕಂll ಓಡೆ ತಮೋಬಳಮಗಿದ
ಇಾಡ ನಿಶಾಚರಬಲಂ ರಥಾಂಗಯುಗಂಗಳ್ || ಕೂಡ ಬಗೆ ಕೂಡೆ ನೇಸಮ್
ಮೂಡಿದುದು ಬಕಂಗೆ ಮಿಲ್ಕು ಮೂಡುವ ತೆಜದಿಂ , .. '೨೮ ವ|| ಆಗಳ್ ಸಾಹಸಭೀಮಂ ತನ್ನ ಸಾಹಸಮಂ ತೋಯಲೆಂದು ಬಂದು ಪಾರ್ವನ ಮನೆಯ ಮುಂದಣ ಬಂಡಿಯ ಕೂಲಂ ಕೆಯ್ಯೋಂಡು ನಿಲ್ಲುದುಂ ಪಾರ್ವಂತಿಯುಂ ಪಾರ್ವನುಂ ಪರಸಿ ಸೇಸೆಯನಿಕ್ಕಿ ಕಳಿಪೆ ಪೋಟಲಿಂ ಬಂಡಿಯನಟ್ಟಿಕೊಂಡು ರಕ್ಕಸನಿರ್ದಡೆಗೆಝಂದುಕಂt ದಾಡೆಗಳನತೆಯೊಳಿಂಬಿಂ
ತೀಡುತ್ತುಂ ತೀವಮಾಗೆ ಬಂಡಿಯ ಬರವಂ | ನೋಡುತ್ತಿರ್ದಾ ಬಕನಂ ನಾಡೆಯ ಅಂತರದ ಕಂಡು ಮುಳಿದಂ ಭೀಮಃ || ೨೮ ಕಡೆಗಣೇಳೆ ರಕ್ಕಸನಂ ನಡೆ ನೋಡಿ ಕೊಲಿ ಸತ್ತಮಪ್ಟಂತಿರೆ ಮುಂ | ಪೊಡವಂ ಕೂಲಿಂ ಬಚಿಯಂ ಪೊಡವೆಂ ರಕ್ಕಸನನೆಂದು ಸಾಹಸಭೀಮಂ . , ೨೯
ಬೇಕಾದ ಸಿದ್ಧತೆಯನ್ನು ಮಾಡಿ ಎಂದು ಹೇಳಿ ಆ ವಿಷಯವೆಲ್ಲವನ್ನೂ ಭೀಮಸೇನನಿಗೆ ತಿಳಿಸಲು ನಾಳೆಯ ಊಟವನ್ನು ನನಗೆ ಸಿದ್ಧಪಡಿಸಿ ಬಂದುದು ಬಹಳ ಒಳ್ಳೆಯ ದಾಯಿತು ಎಂದು ಸಂತೋಷಿಸಿದರು. ಉಳಿದ ನಾಲ್ಕು ಜನರೂ ಬಂದು ಆ ವಿಷಯವೆಲ್ಲವನ್ನೂ ಕೇಳಿ ಈ ಪಟ್ಟಣದಲ್ಲಿ ಇತರರಿಗೆ ಉಪಕಾರಮಾಡುವ ಸಂದರ್ಭವು ಅದೃಷ್ಟದಿಂದ ಪ್ರಾಪ್ತವಾಯಿತು ಎಂದು ರಾತ್ರಿಯೆಲ್ಲ ಬಕನ ವಿಷಯವಾದ ಮಾತನ್ನೇ ಆಡುತ್ತಿದ್ದರು. ಅಷ್ಟರಲ್ಲಿ ೨೭. ಕತ್ತಲೆಯ ರಾಶಿಯು ಓಡಿತು ರಾಕ್ಷಸಸಮೂಹವು ಹೆದರಿ ನಡುಗಿತು. ಚಕ್ರವಾಕಮಿಥುನವು ಕೂಡಿಕೊಳ್ಳಲು ಮನಸ್ಸುಮಾಡಿತು. ಬಕನಿಗೆ ಸಾವು ಹುಟ್ಟುವ ರೀತಿಯಲ್ಲಿ ಸೂರ್ಯ ಹುಟ್ಟಿದನು. ವ|| ಆಗ ಸಾಹಸಭೀಮನು ಪರಾಕ್ರಮವನ್ನು ತೋರಬೇಕೆಂದು ಬಂದು ಬ್ರಾಹ್ಮಣನ ಮನೆಯ ಮುಂಭಾಗದಲ್ಲಿದ್ದ ಗಾಡಿಯ ಅನ್ನವನ್ನು ತೆಗೆದುಕೊಂಡು ನಿಂತನು. ಬ್ರಾಹ್ಮಣಿತಿಯೂ ಬ್ರಾಹ್ಮಣನೂ ಆಶೀರ್ವಾದಮಾಡಿ ತಲೆಯ ಮೇಲೆ ಅಕ್ಷತೆಯನ್ನು ಚೆಲ್ಲಿ ಕಳುಹಿಸಿದರು. ಪಟ್ಟಣದಿಂದ ಬಂಡಿಯನ್ನು ಹೊಡೆದುಕೊಂಡು ರಾಕ್ಷಸನಿದ್ದ ಸ್ಥಳಕ್ಕೆ ಭೀಮನು ಬಂದನು. ೨೮. ತನ್ನ ಕೋರೆಹಲ್ಲುಗಳನ್ನು ಕಲ್ಲಿನ ಮೇಲೆ ಹರಿತವಾಗುವ ಹಾಗೆ ನಿಧಾನವಾಗಿ ಮಸೆಯುತ್ತ ಬಂಡಿಯಬರವನ್ನೇ ಎದಿರುನೋಡುತ್ತಿದ್ದ ಬಕನು ಬಹಳ ದೂರದಿಂದಲೇ ಕಂಡು ರೇಗಿದನು. ೨೯. ಕಡೆಗಣ್ಣಿನಿಂದಲೇ ರಾಕ್ಷಸನನ್ನು ದೃಷ್ಟಿಸಿ ನೋಡಿ ಕೊಲ್ಲುವುದಕ್ಕೆ