________________
೧೮೨ | ಪಂಪಭಾರತಂ
. ವlು ನಿನಗಿಂತೀ ಒರಿದು ಶೋಕಮೆಂತಾದುದೆಂಬುದುಮಾ ಪಾರ್ವಂ ಕೊಂತಿಗಿಂತಂದಂ ಬಕನೆಂಬನೊರ್ವಸುರನೀ ಪೊಬಲ ತೆಂಕಣ ಬೆಟ್ಟದೊಳಿರ್ಪನಾತಂಗೆ ನಿಚ್ಚವೊಂದು ಮನೆಯೋಳೆರಡಮ್ಮವೋಟಿಯೊಳ್ ಪೂಡಿದ ಪನ್ನಿರ್ಕಂಡುಗದಕ್ಕಿಯ ಕೂಟುಮನದರ್ಕ ತಕ್ಕ ಪರಿಕರಮುಮನೊರ್ವ ಮಾನಸಂ ಕೊಂಡು ಪೋಪನಂತಾತಂಬೆರಸದಲ್ಲಮಂ ತಿಂದು ತಣಿಯದ ಪಲ್ಲಂ ತಿಂಬನದೊಂದು ದಿವಸ ತಪ್ಪಿದೋಡೀ ಪೂಲನಿತುಮಂ ತಿಂಬಂ ನಾಳಿನ ಬಾರಿಯಮ್ಮ ಮೇಲೆ ಬಂದುದಮ್ಮ ಮನೆಯೊಳಾನುಮಮ್ಮ ಧರ್ಮಪತ್ನಿಯುಂ ಮಗನುಂ ಮಗಳುಮಿಂತೀ ನಾಲ್ವರೆ ಮಾನಸರೆಮ್ಮ ಪಂಡಿತಿಯನೀವೆನೆವೊಡಾಕೆಯಿಂ ಬಳೆಯಮಿಾ ಕೂಸುಗಳಂ ನಡಪುವರಿ ಮಗಳನೀವೆನವೊಡೆ ಕೊಡಗೂಸೆಂಬುದು ಪೆಜರೊಡವೆ ಮಗನನೀನೆನಪೊಡೆ ಸಂತತಿಚ್ಛೇದಮುಂ ಪಿಂಡಚ್ಛೇದಮುಮಕ್ಕುಮದವೆಂದೆನ್ನನೆ ಕುಡಲ್ವುಮಂಬುದುಂ ಕೊಂತಿಯಿಂತಂದಳಕಂ| ನಿಮಿಾ ನಾಲ್ವರೊಳೊರ್ವರು
ಮಿಮಿಡುಕಲೈಡ ಮಕ್ಕಳೊಳರೆನಗಯ್ಯರ್ | ತಮ್ಮೊಳಗೆಸೆವಯ್ಯರೊಳಂ |
ನಾಮಾಣದ ಬಕನ ಬಾರಿಗೊರ್ವನನೀವೆಂ 1 ವ|| ಎಂಬುದುಂ ಪಾರ್ವನಿಂತೆನಲ್ವೇಡ ಮಕ್ಕಳೊಳಾದ ಮೋಹವೆಲ್ಲಾ ಜೀವಕ್ಕಂ ಸಮಾನಮಂಬುದುಂ ನೀಮತಿಯಿರುಸಿರದಿರಿಮದರ್ಕೆ ತಕ್ಕ ಸವಕಟ್ಟಂ ಮಾಡಿಮಂದು ಬಂದು
ಕುಂತಿಯು ದುಃಖದಿಂದ ಬ್ರಾಹ್ಮಣನನ್ನು ಕುರಿತು ಪ್ರಶ್ನಿಸಿದಳು. ವlು ನಿನಗೆ ಇಷ್ಟು ದೊಡ್ಡ ದುಃಖ ಹೇಗಾಯಿತು ಎನ್ನಲು ಬ್ರಾಹ್ಮಣನು ಕುಂತಿಗೆ ಹೀಗೆ ಹೇಳಿದನು - ಬಕನೆಂಬ ರಾಕ್ಷಸನೊಬ್ಬನು ಈ ಪಟ್ಟಣಕ್ಕೆ ದಕ್ಷಿಣದಲ್ಲಿರುವ ಬೆಟ್ಟದಲ್ಲಿದ್ದಾನೆ. ಅವನಿಗೆ ನಿತ್ಯವೂ ಒಂದೊಂದು ಮನೆಯಿಂದ ಎರಡು ಕೋಣಗಳನ್ನು ಹೂಡಿರುವ ಗಾಡಿಯಲ್ಲಿ ತುಂಬಿದ ಹನ್ನೆರಡು ಖಂಡಗದಕ್ಕಿಯನ್ನೂ ಅದಕ್ಕೆ ಬೇಕಾಗುವಷ್ಟು ವ್ಯಂಜನಪದಾರ್ಥಗಳನ್ನೂ ಒಬ್ಬ ಮನುಷ್ಯನು ಕೊಂಡುಹೋಗುತ್ತಾನೆ. (ಬಕನು) ಅವನ ಸಮೇತ ಆ ಪದಾರ್ಥವೆಲ್ಲವನ್ನೂ ತಿಂದರೂ ತೃಪ್ತನಾಗದೆ ಕೋಪದಿಂದ ಹಲ್ಲನ್ನು ಕಡಿಯುತ್ತಾನೆ. ಒಂದು ದಿವಸ ತಪ್ಪಿದರೂ ಈ ಪಟ್ಟಣವೆಲ್ಲವನ್ನೂ ತಿಂದುಹಾಕುತ್ತಾನೆ. ನಾಳೆಯ ಸರದಿ ನನ್ನ ಮೇಲೆ ಬಂದಿದೆ. ನಮ್ಮ ಮನೆಯಲ್ಲಿ ನಾನೂ ನನ್ನ ಹೆಂಡತಿಯೂ ಮಗನೂ ಮಗಳೂ ಈ ನಾಲ್ವೇ ಜನ (ಇರುವವರು). ಹೆಂಡತಿಯನ್ನು ಕೊಡೋಣವೆಂದರೆ ಅವಳು ಹೋದಬಳಿಕ ಈ ಮಕ್ಕಳನ್ನು ಸಾಕುವವರಿಲ್ಲ; ಮಗಳನ್ನು ಕೊಡೋಣವೆಂದರೆ ಕನ್ಯ ಪರರ ವಸ್ತು; ಮಗನನ್ನು ಕೊಡೋಣವೆಂದರೆ ಸಂತತಿಯು ಹರಿದು ಹೋಗುತ್ತದೆ ಮತ್ತು ಪಿಂಡದಾನ ಮಾಡುವವರಿಲ್ಲದಾಗುತ್ತಾರೆ. ಆದುದರಿಂದ ನನ್ನನ್ನೇ ಕೊಡಬೇಕಾಗಿದೆ ಎಂದನು. ಅದಕ್ಕೆ ಕುಂತಿಯು ಹೀಗೆಂದಳು-೨೬. ನಿಮ್ಮ ಈ ನಾಲ್ಕು ಜನಗಳಲ್ಲಿ ಯಾರೂ ಇನ್ನು ಮೇಲೆ ಭಯಪಡಬೇಡಿ. ನನಗೆ ಅಯ್ತು ಜನ ಮಕ್ಕಳಿದ್ದಾರೆ. ಪ್ರಸಿದ್ದರಾದ ಆ ಅಯ್ಯರಲ್ಲಿ ಒಬ್ಬನನ್ನು ನಾನು ಬಕನ ಸರದಿಗೆ ತಪ್ಪದೆ ಕೊಡುತ್ತೇನೆ. ವ| ಅದನ್ನು ಕೇಳಿ ಬ್ರಾಹ್ಮಣನು 'ಹೀಗೆ ಹೇಳಬೇಡ. ಮಕ್ಕಳ ಮೇಲಿನ ಮೋಹವು ಎಲ್ಲ ಜೀವಕ್ಕೂ ಸಮಾನ ಎಂದನು. ಕುಂತಿಯು ನಿಮಗೆ ತಿಳಿಯದು; ಮಾತನಾಡಬೇಡಿ ಅದಕ್ಕೆ