________________
೨೩
ತೃತೀಯಾಶ್ವಾಸಂ | ೧೮೧ ಕಂtt ತುಂಬಿದ ರಕ್ತತಯಿಂ ನಿಜ
ಬಿಂಬಂ ವಾರುಣಿಯನೊಸೆದು ಸೇವಿಸೆ ನಾಣ್ಯ | ಬೃಂಟೋಲ್ ತೇಜಂ ಮಸುಳ್ಳಿನ
ಮಂಬರಮಂ ಬಿಸುಟನಾಗಳಂಬುಜಮಿತ್ರಂ |
ವ|| ಆಗಳ್ - ಸಂಧ್ಯಾವಂದನೆಗೆ ಧರ್ಮಪುತ್ರಾರ್ಜುನ ನಕುಲ ಸಹದೇವರ್ ಪೋದರನ್ನೆಗಮಿತ್ತ ಬೀಡಿನೊಳಿರ್ದ ಕೊಂತಿಯ ಭೀಮನ ಕರ್ಣೋಷಾಂತದೊಳ್
ಕಂ! ಸಾರೆಯೊಳ ಮಹಾ ದ್ವಿಜ - ನಾರಿಯ ಮಮತಾವಿಪೂರಿತೋರ್ಜಿತ ರವದಿಂ | ಕಾರುಣ್ಯಾಕ್ರಂದನಮನಿ ವಾರಿತಮೊರ್ಮೊದಲೆ ಬಂದು ತೀಡಿತ್ತಾಗಳ್ ||
: ೨೪ ವ|| ಆದಂ ಕೇಳೇನಾನುಮೊಂದು ಕಾರಣವಾಗಲೆಲ್ಯುಮಿಾ ಪುಯ್ಯಲನಾರಯ್ತು ಬರ್ಪೆನೆಂದು ಭೀಮನನಿರಿಸಿ ಕೊಂತಿ ತಾನೆ ಪೋಗಿಚಂ || ಅಚಿ ಕುಡಲಾದ ಕೂಸು ನೆಲದೊಳ್ ಪೊರಳುತ್ತಿರೆ ಧರ್ಮಪತ್ನಿ ಬಾ
ಯದು ಕೊರಲ್ ಪಾಯ್ತು ಪರಿದಾಡುವ ಬಾಲಕನಾದ ಶೋಕದಿಂ | ಗಲಗಲ ಕಣ್ಣನೀರ್ ಸುರಿಯ ಚಿಂತಿಪ ಪಾರ್ವನ ಶೋಕದೊಂದು ಪೊಂ ಪುಟಿಯನೆ ನೋಡಿ ನಾಡೆ ಕರುಣಂ ತನಗಾಗಿರೆ ಕೊಂತಿ ಚಿಂತೆಯಿಲll ೨೫
೨೩. ತುಂಬಿಕೊಂಡಿರುವ ಕೆಂಪು ಬಣ್ಣದಿಂದ (ಅನುರಕ್ತತೆಯಿಂದ) ತನ್ನ ಬಿಂಬವು ಪಶ್ಚಿಮದಿಕ್ಕನ್ನು ಪ್ರೀತಿಸಿ ಸೇವೆಮಾಡಲು (ಪ್ರೀತಿಸಿ ಮದ್ಯಪಾನವನ್ನು ಮಾಡಲು) ನಾಚಿಕೆಗೆಟ್ಟವನಂತೆ ಕಾಂತಿ ಮಂಕಾಗುತ್ತಿರಲು ಕಮಲಮಿತ್ರನಾದ ಸೂರ್ಯನು ಅಂಬರವನ್ನು (ಆಕಾಶವನ್ನೂ - ಬಟ್ಟೆಯನ್ನೂ) ಬಿಸಾಡಿದನು. (ಸೂರ್ಯನು ಅಸ್ತಮಿಸಿದನು ಎಂಬುದು ಭಾವ). ವ|| ಆಗ ಸಂಧ್ಯಾವಂದನೆಗಾಗಿ ಧರ್ಮರಾಜ ಅರ್ಜುನ ನಕುಲ ಸಹದೇವರು ಹೋದರು. ಅಷ್ಟರಲ್ಲಿ ಈ ಕಡೆ ಬೀಡಿನಲ್ಲಿದ್ದ ಕುಂತಿ ಮತ್ತು ಭೀಮನ ಕಿವಿಗೆ ೨೪, ಸಮೀಪದಲ್ಲಿದ್ದ ಮಹಾಬ್ರಾಹ್ಮಣತಿಯ ಮಮತೆಯಿಂದಲೂ ಕರುಣೆಯಿಂದಲೂ ಕೂಡಿದ ಅಳುವ ಶಬ್ದವು ತಡೆಯಿಲ್ಲದೆ ಇದ್ದಕ್ಕಿದ್ದ ಹಾಗೆ ಬಂದು ಸೋಂಕಿತು. ವ|| ಅದನ್ನೂ ಕೇಳಿ ಇದಕ್ಕೆ ಏನಾದರೂ ಕಾರಣವಿದ್ದೇ ಇರಬೇಕು. ಈ ಪ್ರಲಾಪವನ್ನು ವಿಚಾರಮಾಡಿ ಬರುತ್ತೇನೆ ಎಂದು ಭೀಮನನ್ನು ಅಲ್ಲಿ ಬಿಟ್ಟು ಕುಂತಿಯು ಹೋಗಿ ನೋಡಿದಳು. ೨೫, ಮದುವೆ ಯಿಲ್ಲದ ಅವನ ಮಗಳು ಅಳುತ್ತಿದ್ದಳು, ಅವನ ಹೆಂಡತಿಯು ನೆಲದ ಮೇಲೆ ಹೊರಳಾಡುತ್ತಿದ್ದಳು. ಕೊರಳನ್ನು ತಬ್ಬಿಕೊಂಡು ಅತ್ತು ಓಡಾಡುವ ಬಾಲಕನು ತನಗುಂಟಾದ ದುಃಖದಿಂದ ಗಳಗಳನೆ ಕಣ್ಣೀರನ್ನು ಸುರಿಸುತ್ತಿದ್ದನು. ಚಿಂತಿಸುತ್ತಿದ್ದ ಬ್ರಾಹ್ಮಣನ ದುಃಖಾತಿಶಯವನ್ನು ನೋಡಿ ತನಗೆ ವಿಶೇಷ ಕರುಣೆಯುಂಟಾಗಿರಲು