________________
ತೃತೀಯಾಶ್ವಾಸಂ | ೧೮೫ ಪಗಳಂ ಪೊಯ್ಲಿ ಸಾಹಸಭೀಮನ ಸಾಹಸಮನಳವಲ್ಲದೆ ಪೊಗಟ್ಟು ತಮಾಳನುಮನಿಷ್ಟ ದೈವಮುಮಂ ಕೊಂಡಾಡುವಂತಯ್ಯರುಮಂ ಕೊಂಡಾಡ ಕೆಲವು ದಿವಸಮಿರ್ಪನ್ನೆಗಮೊಂದು ದಿವಸಮಶಿಶಿರಕಿರಣನಪರಜಲನಿಧಿತಟನಿಕಟವರ್ತಿಯಾದನಾಗಳೊರ್ವ ಪಾರ್ವ೦ ವಿಸ್ತೀರ್ಣಜೀರ್ಣ ಕರ್ಪಟಾವೃತಕಟಿತಟನುಮಾಗಿ ಬಂದು ಕಣುಚಲೆಡವೇಡೆ ತನಗವರ್ ಪಾಸಲೊಟ್ಟ ಕೃಷ್ಣಾಜಿನನಮಂ ಪಾಸಿ ಪಟ್ಟಿರ್ದನಂ ಧರ್ಮಪುತ್ರನಾವ ನಾಡಿಂ ಬಂದಿರೆಲ್ಲಿಗೆ ಪೊದಪಿರೆಂದೂಡುತ್ತರಾಪಥದೆ ಹಸ್ತಿನಪುರದಿಂ ಬಂದವೆಂದೂಡಲ್ಲಿ ಪಾಂಡವರ ಪಡೆಮಾತಾವುದು ಧೃತರಾಷ್ಟ್ರ ಸುಯೋಧನ ರಿರ್ಪಂದವಾವುದೆಂದು- ಬೆಸಗೊಳೆಮ ಮನದೊಳ್ ಕೂರದ ಪಾಂಡುರಾಜಸುತರುಂ ಲಾಕ್ಷಾಗೃಹೋಗ್ರಾಗ್ನಿಯಾ
ನನದೊಳ್ ಮತ್ತಿದರೆನ್ನ ಪುಣ್ಯಮಟೆಯರ್ ವೇಮಾಜ(ಗಿರಿನ್ನಾರೂ ಬೇ | ರನೆ ಕಿತ್ತಿಕ್ಕಿದನೀಗಳಾಯ್ತು ಧರೆ ನಿರ್ದಾಯಾದಮಂದಾ ಸುಯೋ
ಧನನಾಳುತ್ತಿರೆ ಸಂದ ಹಸಿನಪುರಂ ಸಂತಂ ಬಸಂತಂ ಕರಂ || ೩೨
ವlು ಅದಲ್ಲದೆಯುಂ ಯಜ್ಞಸೇನನೆಂಬ ಮೊದಲ ಪಸರ ಪಾಂಚಾಳದೇಶದರಸಂ ದ್ರುಪದನೆಂಬಂ ದ್ರೋಣನೂಳಾದ ಪರಿಭವಮಂ ನನದಾತನಂ ಕೊಲ್ವಗ್ರನೊರ್ವ ಮಗನುಮಂ * ವಿಕ್ರಮಾರ್ಜನಂಗೆ ಪೆಂಡಿತಿಯಪ್ಪನ್ನಳೊರ್ವ ಮಗಳುಮಂ ಪಡೆದಲ್ಲದಿರನೆಂದು ಪೂಣ್ಣು ಪೋಗಿ
ಮಾಡಿಸಿ ಸಾಹಸಭೀಮನ ಪರಾಕ್ರಮವನ್ನು ಅಳತೆಯಿಲ್ಲದಷ್ಟು ಹೊಗಳಿ ತಮ್ಮ ಸ್ವಾಮಿಯನ್ನು ಇಷ್ಟದೈವವನ್ನು ಕೊಂಡಾಡುವಂತೆ ಅಯ್ದು ಜನರನ್ನೂ ಕೊಂಡಾಡಿದರು. ಅಲ್ಲಿ ಪಾಂಡವರು ಕೆಲವು ದಿನವಿರುವಷ್ಟರಲ್ಲಿ ಒಂದು ದಿನ ಸೂರ್ಯಾಸ್ತಸಮಯದಲ್ಲಿ ಒಬ್ಬ ಬ್ರಾಹ್ಮಣನು ವಿಶೇಷವಾಗಿ ಹರಿದು ಹೋದ ಬಟ್ಟೆಯಿಂದ ಮುಚ್ಚಿದ ಸೊಂಟ ಪ್ರದೇಶವನ್ನುಳ್ಳವನಾಗಿ ಬಂದು ಮಲಗಲು ಸ್ಥಳವನ್ನು ಕೇಳಿದನು. ಅವರು ಕೊಟ್ಟ ಜಿಂಕೆಯ ಚರ್ಮವನ್ನೇ ಹಾಸಿಕೊಂಡು ಮಲಗಿದ್ದ ಅವನನ್ನು ಧರ್ಮರಾಜನು ಯಾವ ನಾಡಿನಿಂದ ಬಂದಿರಿ, ಎಲ್ಲಿಗೆ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದನು. ಅವನು ಉತ್ತರಾಪಥದ ಹಸ್ತಿನಾಪಟ್ಟಣದಿಂದ ಬಂದೆವು ಎಂದನು. ಧರ್ಮರಾಜನು ಅಲ್ಲಿ ಪಾಂಡವರ ಸುದ್ದಿಯೇನು? ಧೃತರಾಷ್ಟ್ರ ದುರ್ಯೊಧನರಿರುವ ರೀತಿ ಯಾವುದು ಎಂದು ಕೇಳಿದನು. ೩೨. ಅದಕ್ಕೆ ಅವನು ನನ್ನ ಶತ್ರುಗಳಾದ ಪಾಂಡುಸುತರು ಅರಗಿನ ಮನೆಯ ಭಯಂಕರವಾದ ಬೆಂಕಿಯ ಮುಖದಲ್ಲಿ ನಾಶವಾದರು. ಇದು ನನ್ನ ಅದೃಷ್ಟ, ಅಸಾಧ್ಯರಾದವರೂ ಮೋಸಹೋಗದಿರುವವರು ಯಾರಿದ್ದಾರೆ ಎನ್ನುವ ಹಾಗೆ ಈ ವೈರಿಗಳನ್ನು ಬೇರುಸಹಿತ ಕಿತ್ತುಹಾಕಿದ್ದೇನೆ, ಈಗ ಈ ರಾಜ್ಯವು ದಾಯಾದಿಗಳಿಲ್ಲದ ಹಾಗಾಯಿತು- ಎಂದು ದುರ್ಯೊಧನನು ರಾಜ್ಯಭಾರಮಾಡುತ್ತಿದ್ದಾನೆ, ಪ್ರಸಿದ್ಧವಾದ ಹಸ್ತಿನಪುರವು ಯಾವಾಗಲೂ ಪೂರ್ಣವಾಗಿ ಸಂತೋಷಭರಿತವಾಗಿದೆ ಎಂದನು. ವ|| ಅಷ್ಟೇ ಅಲ್ಲದೆ ಯಜ್ಞಸೇನನೆಂಬ ಮೊದಲಿನ ಹೆಸರಿನಿಂದ ಕೂಡಿದ ಪಾಂಚಾಲದೇಶದ ರಾಜನಾದ ದ್ರುಪದನೆಂಬುವನು ದ್ರೋಣನಿಂದಾದ ಸೋಲನ್ನು ನೆನೆಸಿಕೊಂಡು ಅವನನ್ನು ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದೇ ಇರುವುದಿಲ್ಲ ಎಂದು ಪ್ರತಿಜ್ಞೆ