________________
ತೃತೀಯಾಶ್ವಾಸಂ | ೧೭೫ ಕಂtು ಆಗಸದೊಳಗೊಂದು ಮಹೀ
ಭಾಗದೋಳಿನ್ನೊಂದು ದಾಡೆಯಾಗಿರೆ ಮನದಿಂ | ಬೇಗಂ ಬರ್ಪಳ ದಿಟ್ಟಿಗ ಭಾಗಳೆ ಪದುವು ಗೆಂಟಲ್ ಮಾರುತಿಯಂ ||
ವ|| ಅಂತೊಂದ೦ಬುವೀಡಿನೆಡೆಯೊಳ್ ಕಾಮನಂಬುವೀಡಿಂಗೊಳಗಾಗಿ ತಾಂ ಕಾಮರೂಪಯಪ್ಪುದಂ ದಿವ್ಯಕನ್ಯಕಾಸ್ವರೂಪಮಂ ಕೆಯ್ಯೋಂಡು ತನ್ನತ್ತ ಮೊಗದೆ ಬರ್ಪಳಂ ಕಂಡು:: ಕಂ ಖೇಚರಿಯೋ ಭೂಚರಿಯೊ ನಿ
ಶಾಚರಿಯೋ ರೂಪು ಬಣ್ಣಿಸಲ್ಮಾರ್ಗಮವಾ | ಗೋಚರಮಿಾ ಕಾನನಮುಮ ಗೋಚರಮಿವಳಿಲ್ಲಿಗೇಕೆ ಬಂದಳೂ ಪೇಟಿಂ ||
ವll ಎಂಬನ್ನೆಗಮಾಕೆ ಮದನನ ಕೆಯ್ಯಂ ಬರ್ದುಂಕಿದರಲಂಬು ಬರ್ಪಂತೆ ಬಂದು ಭೀಮಸೇನನ ಕೆಲದೊಳ್ ಕುಳ್ಳಿರೆ ನೀನಾರ್ಗನೆಂಬೆಯೇಕೆ ಬಂದೆಯೆಂದೊಡಾಕೆಯಂದಳೆರಡನೆಯ ದೊಲ್ಲು ನಿನ್ನೊಳೆರಡು ನುಡಿಯಲಾಗದೆನಗೆ ಯಾ ಬನಂ ಹಿಡಿಂಬವನೆಂಬುದಿದನಾಳ್ವಂ ಹಿಡಿಂಬನೆಂಬಸುರನೆಮ್ಮಣ್ಣನಾನುಂ ಹಿಡಿಂಬೆಯನೆಂಬನಾತನ ಬೆಸದಿಂ ನಿಮ್ಮಿನಿಬರುಮಂ
ಎಂದು ೧೩. ಆಕಾಶದಲ್ಲಿ ಒಂದು ಭೂಮಿಯಲ್ಲಿ ಒಂದು ದವಡೆಯಾಗಿರಲು (ಅಂದರೆ ದೊಡ್ಡದಾಗಿ ಬಾಯಿ ತೆರೆದುಕೊಂಡು) ಮನೋವೇಗವನ್ನು ಮೀರಿ ಬರುತ್ತಿದ್ದ ಅವಳ ದೃಷ್ಟಿಗಳು ದೂರದಿಂದಲೇ ಭೀಮನನ್ನು ಸೇರಿಕೊಂಡವು. ವll ಹಾಗೆ ಒಂದು ಬಾಣ ಹೋಗುವಷ್ಟು ದೂರದಲ್ಲಿಯೇ ಕಾಮಬಾಣಕ್ಕೆ ಅಧೀನಳಾಗಿ ತಾನು ಇಷ್ಟ ಬಂದ ರೂಪವನ್ನು ಧರಿಸುವ ಸಾಮರ್ಥ್ಯವುಳ್ಳವಳಾದುದರಿಂದ ಸುಂದರಳಾದ ಕನ್ನಿಕೆಯ ಆಕಾರವನ್ನು ತಾಳಿ ಭೀಮನು ಕಡೆಗೇ ಬಂದಳು. ತನ್ನ ಕಡೆಗೆ ಬರುತ್ತಿದ್ದ ಅವಳನ್ನು ನೋಡಿದನು. ೧೪. ಭೀಮನು ಇವಳು ಅಂತರಿಕ್ಷದಲ್ಲಿ ಸಂಚರಿಸುವ ವಿದ್ಯಾಧರಿಯೋ ಭೂಮಿಯಲ್ಲಿ ಸಂಚಾರಮಾಡುವ ಮನುಷ್ಯಸ್ತೀಯೋ, ಇಲ್ಲ ರಾತ್ರಿಯಲ್ಲಿ ಸಂಚಾರಮಾಡುವ ರಾಕ್ಷಸಿಯೋ! ಇವಳ ರೂಪವನ್ನು ವರ್ಣಿಸುವುದಕ್ಕೆ ಯಾರಿಗೂ ಮಾತಿನಿಂದ ಸಾಧ್ಯವಿಲ್ಲ. ಈ ಕಾಡೂ ಕೂಡ ಯಾರಿಗೂ ಪರಿಚಿತವಿಲ್ಲದುದು. ಇವಳಿಲ್ಲಿಗೇಕೆ ಬಂದಳು ಎಂದು ಯೋಚಿಸಿದನು. ವ|| ಅಷ್ಟರಲ್ಲಿ ಅವಳು ಮನ್ಮಥನ ಕಮ್ಮಿಂದ ಬದುಕಿ ಪುಷ್ಪಬಾಣದ ಹಾಗೆ ಭೀಮಸೇನನ ಪಕ್ಕದಲ್ಲಿ ಬಂದು ಕುಳಿತುಕೊಂಡಿರಲು ಭೀಮಸೇನನು ಅವಳನ್ನು ಕುರಿತು ನೀನು ಯಾರ ಮಗಳು ? ನಿನ್ನ ಹೆಸರೇನು? ಯಾತಕ್ಕೆ ಬಂದಿದ್ದೀಯೆ ಎನ್ನಲು (ಆಕೆ ಅವನನ್ನು ಕುರಿತು) ಸಂದೇಹವಿಲ್ಲದೆ ದೃಢವಾಗಿ ಪ್ರೀತಿಸಿ ಬಂದ ನಿನ್ನಲ್ಲಿ ಸುಳ್ಳನ್ನು ಹೇಳಬಾರದು. ಈ ಕಾಡು ಹಿಡಿಂಬವನವೆಂಬುದು. ಇದನ್ನು ಆಳುವ ಹಿಡಿಂಬನೆಂಬ ರಾಕ್ಷಸನು ನಮ್ಮಣ್ಣ: ನನ್ನ ಹೆಸರೂ 'ಹಿಡಿಂಬೆಯೆಂದು; ಅವನ ಆಜ್ಞೆಯ ಪ್ರಕಾರ ನಿಮ್ಮಿಷ್ಟು ಜನವನ್ನು