________________
- ೧೫
೧೭೬ | ಪಂಪಭಾರತಂ ಕಂ| ಪಿಡಿದಡಸಿ ತಿನಲ್ ಬಂದಿ
ರ್ದಡೆಯೊಳ್ ನಿನಗಾಗಿ ಮದನನೆನ್ನನೆ ತಿನ ಕೇಳ್ 1. ಪಡೆನೋಡಲ್ ಬಂದವರಂ
ಗುಡಿವೊಳಿಸಿದರೆಂಬುದಾಯ್ತು ನಿನ್ನನ್ನೆಡೆಯೊಳ್ || ವ|| ಎಂದೀ ಮಜಲುಂದಿದರಾರ್ಗೆಂದೂಡನ್ನ ತಾಯ್ಕೆರುಮೊಡವುಟ್ಟಿದರೆಂದೊಡೆ ಹಿಡಿಂಬಂ ಬಂದವರಂ ತಿಂದೊಡಂ ತಿನ್ನೆ ನೀನೆನ್ನ ಹೆಗಲನೇಣು ಗಗನತಳಕುಯ್ಯನೆನೆ ಭೀಮಸೇನನಾ ಮಾತಿಂಗೆ ಮುಗುಳಗೆ ನಕ್ಕುಚಂtು ಅಚಿಪಿದೆಯಂತುಮಲ್ಲದ ನಿಶಾಚರಿಯ್ಯ ನಿನಗಪ್ಪುದಪ್ಪುದೀ
ಯಡೆನುಡಿ ಬರ್ಕೆ ನಿನ್ನ ಪಿರಿಯಣ್ಣನೆ ಪಣ್ಣನೆ ನೋQಮಾತನೊ | * ಡಟಿಯದ ಗಂಡವಾತನೆನುತಂತಿರೆ ತಂಗೆಯ ಮಾಣ್ಣುದರ್ಕವು
ಮೊಲಗಿ ಸಿಡಿದೊಂದು ಸಿಡಿಲೇಜ್‌ಯಿನೆಯ್ದರೆ ಎಂದು ಭೀಮನಂ ||೧೬
ವಗ ಕಂಡು ಕಣ್ಣಳಿಂ ಕೆಂಡದ ತಂಡಂಗಳುಮುರಿಯ ತಂಡಂಗಳುಂ ಸೂಸಿ ನೀನೊರ್ವಯನ್ನೊಳಗೇಂ ಕಾದುವ ಈ ಮಜಲುಂದಿದರನನಿಬರುಮನೊರ್ಮಯ ಪೊಸೆದು ಮುಕ್ಕುವನನೆ ಸಾಹಸಭೀಮಂ ಮಲ್ಲಂತಿಗೆಯನಷ್ಟೊಡಂ ಸಡಲಿಸದವನನವಯವದೊಳಿಂತೆಂದಂ
೧೫. ಹಿಡಿದು ಬಾಯಿಗೆ ತುರಿಕಿಕೊಂಡು ತಿನ್ನಲು ಬಂದ ಸಮಯದಲ್ಲಿ ಮನ್ಮಥನು ನನ್ನನ್ನೇ ತಿಂದುಬಿಟ್ಟಿದ್ದಾನೆ. “ಸೈನ್ಯವನ್ನು ನೋಡಲು ಬಂದವರ ಕೈಯಲ್ಲಿ ಬಾವುಟವನ್ನು ಹೊರಿಸಿದರು” ಎಂಬ ಗಾದೆಗೆ ಅನುಗುಣವಾಯಿತು ನಿನ್ನ ನನ್ನ ಸಂಬಂಧವು ವll ಎಂದು 'ಈ ಮೈಮರೆತು ಮಲಗಿರುವವರಾರು' ಎಂದು ಕೇಳಿದಳು. ಅವರು ನನ್ನ ತಾಯಿ ಮತ್ತು ಸಹೋದರರು ಎಂದು ಉತ್ತರಕೊಡಲು ಹಿಡಿಂಬನು ಬಂದು ಅವರನ್ನು ತಿನ್ನುವುದಾದರೆ ತಿನ್ನಲಿ; ನೀನು ನನ್ನ ಹೆಗಲನ್ನು ಏರಿಕೋ, ಆಕಾಶಪ್ರದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದಳು. ಅದಕ್ಕೆ ಭೀಮಸೇನನು ಹುಸಿನಗೆ ನಕ್ಕು ೧೬. ನೀನು ನನ್ನಲ್ಲಿ ಮೋಹಗೊಂಡಿದ್ದೀಯೆ; ಅಲ್ಲದೆ ನೀನು ರಾಕ್ಷಸಿಯಾಗಿದ್ದೀಯ; ಈ ಅಯೋಗ್ಯವಾದ ಮಾತು ನಿನಗೆ ತಕ್ಕುದಾಗಿದೆ. ನಿನ್ನ ಹಿರಿಯಣ್ಣನೇ ಬರಲಿ, ಅವನ ಊನವಾಗದ ವೀರ್ಯಾಲಾಪಗಳನ್ನು ಪರೀಕ್ಷಿಸಿ ನೋಡೋಣ ಎನ್ನುತ ಹಾಗೆಯೇ ಇರಲು ತಂಗಿಯು ಸಾವಕಾಶಮಾಡಿದುದಕ್ಕಾಗಿ ಹಿಡಿಂಬನು ಗರ್ಜನೆ ಮಾಡ್ಲಿ ಸಿಡಿಲವೇಗದಿಂದ ಹತ್ತಿರಕ್ಕೆ ಬಂದು ಭೀಮನನ್ನು-ವಗ ನೋಡಿ ಕಣ್ಣುಗಳಿಂದ ಕೆಂಡದ ಸಮೂಹವೂ ಉರಿಯು ಮೊತ್ತವೂ ಚೆಲ್ಲುತ್ತಿರಲು ನೀನೊಬ್ಬನೇ ನನ್ನಲ್ಲಿ ಹೇಗೆ ಕಾದುತ್ತೀಯೆ; ಈ ಮೈಮರೆತು ಮಲಗಿದವರನ್ನೆಲ್ಲ ಎಚ್ಚರಗೊಳಿಸು, ಇವರಿಷ್ಟು ಜನವನ್ನು ಒಂದೇ ಸಲ ಹೊಸೆದು ಮುಕ್ಕುತ್ತೇನೆ ಎಂದನು. ಸಾಹಸಭೀಮನು ತನ್ನ ಚಡ್ಡಿಯನ್ನು (ನಡುಕಟ್ಟು?) ಬಿಚ್ಚದೆ (ಸಡಲಿಸದೆ) ಉದಾಸೀನನಾಗಿಯೇ ಅವನನ್ನು