________________
೧೭೪ / ಪಂಪಭಾರತಂ
ತನ್ನೊಡವುಟ್ಟದರ್ಗಾದ ಪ್ರವಾಸಾಯಾಸಂಗಳಂ ದೆಸೆಗಂ ಮನ್ಯುಮಿಕ್ಕು ಬರೆ ಕಣ್ಣ ನೀರು ತುಂಬಿ
ಚಂ || ಭರತನ ವಂಶದೊಳ್ ನೆಗಟ್ಟಿ ಪಾಂಡುಗೆವುಟ್ಟಿಯುಮಿ ಸಮಸ್ತ ಸಾ ಗರ ಪರಿವೇಷ್ಟಿತಾವನಿಗೆ ವಲ್ಲಭನಾಗಿಯುಮಿ ಮಹೋಗ್ರ ಕೇ | ಸರಿ ಕರಿ ಕಂಠ ಗರ್ಜಿತ ಮಹಾಟವಿಯೊಳ್ ಮಕೆಂದಿ ನೀಮುಖಾ
ಮರದಡಿಯೊಳ್ ಶಿವಾಶಿವ ರವಂಗಳಿನೆರುವಂತುಟಾದುದೇ ||
ವ|| ಎಂದು ನುಡಿಯುತ್ತಿರ್ಪನ್ನೆಗಂ ಕೋಕನದಬಾಂಧವನು ದಯಾಚಳಶಿಖರ ಶೇಖರನಾದ ನಾಗಳಾ ಬನಮನಾಳ್ವ ಹಿಡಿಂಬನೆಂಬನವರ ಬರವನಂದು ತನ್ನ ತಂಗೆ ಹಿಡಿಂಬೆಯೆಂಬಳಂ ಕರೆದು
ಕಂ ನಿಡಿಯರ್ ಬಲ್ಲಾಯದ ಬ
ಲ್ದಡಿಗರ್ ವಂದಿರ್ದರಯ್ಯರಾಲದ ಕೆಳಗಿಂ | ತೊಡರ್ದರ್ ನಮ್ಮಯ ಭಕ್ಷದೊ
ಇಡು ಪಣ್ಣಿಡು ಪೋಗು ನೀನುಮಾನುಂ ತಿಂಬಂ ||
3
ವ|| ಎಂಬುದುಮಂತೆಗೆಯೆನೆಂದು
ܦܘ
ಆಲದ ಮರದ ಸಮೀಪಕ್ಕೆ ಬಂದು ಅದರ ಕೆಳಗಡೆ ಆ ಅಯ್ದು ಜನರನ್ನು ಇಳಿಸಿದನು. ಅವರು ದಾರಿ ನಡೆದ ಬಳಲಿಕೆಯಿಂದ ನಿದ್ರಾಭಾರಕ್ಕೆ ಅಧೀನರಾದರು. ಭೀಮನು ಅವರಿಗೆ ಕಾವಲಾಗಿದ್ದು ತನ್ನ ಒಡಹುಟ್ಟಿದವರಿಗುಂಟಾದ ಪ್ರಯಾಣದಾಯಾಸಕ್ಕೂ ದುರ್ದೆಶೆಗೂ ದುಃಖವು ಉಲ್ಬಣಿಸಿ ಬರಲು ಕಣ್ಣ ನೀರನ್ನು ತುಂಬಿಕೊಂಡನು. ೧೧. ಭರತವಂಶದಲ್ಲಿ ಪ್ರಸಿದ್ಧನಾದ ಪಾಂಡುರಾಜನಿಗೆ ಮಕ್ಕಳಾಗಿ ಹುಟ್ಟಿಯೂ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಈ ಸಮಸ್ತ ಭೂಮಂಡಲಕ್ಕೆ ಒಡೆಯರಾಗಿಯೂ ಈ ಭಯಂಕರವಾದ ಸಿಂಹ ಮತ್ತು ಆನೆಗಳ ಕೊರಳಿನಿಂದ ಹೊರಟ ಗರ್ಜನೆಗಳಿಂದ ಕೂಡಿದ ಈ ಘೋರಾರಣ್ಯದಲ್ಲಿ ಮೈಮರೆತು ಮಲಗಿ ನೀವೂ ಈ ಮರದಡಿಯಲ್ಲಿ ನರಿಗಳ ಅಮಂಗಳಕರವಾದ ಧ್ವನಿಯಿಂದ ಎಚ್ಚರಗೊಳ್ಳುವ ಹಾಗೆ ಆಯಿತೇ ? ವ|| ಎಂದು ಹೇಳುತ್ತಿರುವಷ್ಟರಲ್ಲಿಯೇ ಕಮಲಸಖನಾದ ಸೂರ್ಯನು ಉದಯಪರ್ವತದ ಕೋಡಿಗೆ ಬಂದು ಸೇರಿದನು (ಸೂರ್ಯನು ಉದಯಿಸಿದನು), ಆಗ ಆ ಅರಣ್ಯಪ್ರದೇಶವನ್ನು ಆಳುವ ಹಿಡಿಂಬನೆಂಬುವನು ಅವರ ಬರವನ್ನು ತಿಳಿದು ತನ್ನ ತಂಗಿಯಾದ ಹಿಡಿಂಬೆಯೆಂಬವಳನ್ನು ಕರೆದು ೧೨. ನೀಳವಾಗಿಯೂ ಬಲುದಪ್ಪನಾಗಿಯೂ ದಾಂಡಿಗರಾಗಿಯೂ ಇರುವ ಅಯ್ದು ಜನ ಆಲದ ಮರದ ಕೆಳಗೆ ಇದ್ದಾರೆ. ಇನ್ನು ನಮ್ಮ ಆಹಾರಕ್ಕಾಗಿ ಸಿಕ್ಕಿಬಿದ್ದಿದ್ದಾರೆ. ಹೋಗಿ ಬೇಯಿಸಿ ಅಡುಗೆ ಮಾಡಿ ಸಿದ್ಧಪಡಿಸು; ನೀನೂ ನಾನೂ ತಿನ್ನೋಣ. ವ|| ಎನ್ನಲು ಹಾಗೆಯೇ ಮಾಡುತ್ತೇನೆ