________________
* ತೃತೀಯಾಶ್ವಾಸಂ ಕಂ|| ಶ್ರೀಯವರಾತಿಬಳಾಸ್ತ್ರ
ಕೋಯಧಿಯೊಳ್ ಪಡೆದ ವೀರನು೦ದರಿಗಳನಾ | ತ್ಮೀಯಪದಸ್ಸುರಿತ ನಖ
ಚೈಾಯಗಳೊಳ್ ನಟಿಸಿ ನಿಂದ ಗಂಡಂ ಹರಿಗಂ | ವ|| ಆ ಪೋಬಲ ಪೊಜವೊಅಲನೆಯ ವರ್ಪಾಗಳ್ಕಂ || ಕತ್ತುರಿಯ ಸಗಣ ನೀರ್ ಬಿಡು
ಮುತ್ತಿನ ರಂಗವಲಿ ಮಿಳಿರ್ವ ದುಗುಲದ ಗುಡಿ ಸಂ | ಪತ್ತಿನ ಬಿತ್ತರದೆತ್ತಿದ
ಮುತ್ತಿನ ಮಂಡನಿಗೆ ಪೊಬಲ ಮನೆಗಳೆಲ್ಲಂ || ವl ಅಂತಾಗಳೊಂದುತ್ತರಂ ಬಳೆಯ ಸೊಗಯಿಸುವ ಪೋಬಲೋಳಷ್ಟ ಶೋಭೆಯಂ ಮಾಡಿ ದುರ್ಯೋಧನನ ಸಂಕೇತದೋಳ್ ಮುನಮ ಸಮೆದಿರ್ದ ಪುರೋಚನಂ ಗೋರೋಚನಾ ಸಿದ್ದಾರ್ಥ ದೂರ್ವಾಂಕುರ ಮಾತುಳುಂಗ ಶೃಂಗಾರದರ್ಪಣ ಪೂರ್ಣ ಕಳಶ ಕಳಮಾವೃತ ಕರಪಲ್ಲವೆಯರಪ್ಪ ಪುರಂದ್ರಿಯರುಂ ಬದ್ದವಣದ ಪಣಿಗಳುಂಬೆರಸಿದಿರ್ವಂದು ಮಮ್ಮಿಕ್ಕಿ ಪೊಡಮಟ್ಟು ಪಾಂಡವರುಮಂ ಮುಂದಿಟ್ಟೋಡಗೊಂಡು ಬಂದು ಪೊಲಲಂ ಪುಗಿಸೆ ಪೊಕ್ಕು ಬೀಡನಲ್ಲಿ ಬಿಡುವಮನೆ ನಿಮ್ಮಯ್ಯಂ ಧೃತರಾಷ್ಟ್ರನ ಬೆಸದಲ್ ಮುನ್ನಮೆ ಮಾಡಮಂ ಸಮದಿಟ್ಟೆನಲ್ಲಿಗೆ ಬಿಜಯಂಗೆಯ್ಕೆಮನೆ
೧. ಶತ್ರುಸೈನ್ಯದ ರಕ್ತಸಮುದ್ರದಲ್ಲಿ ಜಯಲಕ್ಷ್ಮಿಯನ್ನು ಪಡೆದ ವೀರನೂ ತನಗೆ ಅಧೀನರಾಗದ ಶತ್ರುಗಳನ್ನು ತನ್ನ ಕಾಲಿನಲ್ಲಿ ಹೊಳೆಯುತ್ತಿರುವ ಉಗುರಿನ ಕಾಂತಿಯ ನೆರಳಿನಲ್ಲಿ ನಿಲ್ಲಿಸಿದ ಪರಾಕ್ರಮಶಾಲಿಯೂ ಆದ ಅರ್ಜುನನು ಆ ಪಟ್ಟಣದ ವll ಹೊರಭಾಗವನ್ನು ಬಂದು ಸೇರಿದನು. ೨. ಪಟ್ಟಣದ ಮನೆಗಳೆಲ್ಲ ಕಸ್ತೂರಿಯಿಂದ ಕೂಡಿದ ಸಗಣಿನೀರು, ಬಿಡಿಬಿಡಿಯಾದ ಮುತ್ತಿನ ರಂಗೋಲೆ, ಚಲಿಸುತ್ತಿರುವ ರೇಷ್ಮೆಯ ಬಟ್ಟೆಯ ಬಾವುಟಗಳು, ಅತುಲೈಶ್ವರ್ಯದಿಂದ ಕೂಡಿದ ಮುತ್ತಿನ ಮಂಟಪ ಇವುಗಳಿಂದ ಅಲಂಕೃತವಾಗಿದ್ದುವು. ವ! ಹಾಗೆ ವೈಭವದಿಂದ ಕೂಡಿ ಸೊಗಯಿಸುತ್ತಿರಲು ಪಟ್ಟಣದಲ್ಲಿ ಕಲಶ, ಕನ್ನಡಿ, ಬಾವುಟ, ತೋರಣ, ಧೂಪ, ದೀಪ, ಭೇರಿ, ಬೀಸಣಿಗೆಯೆಂಬ ಎಂಟು ವಿಧ ಅಲಂಕಾರಗಳಿಂದ ಕೂಡಿ ದುರ್ಯೊಧನನ ಸೂಚನೆಯ ಪ್ರಕಾರ ಮೊದಲೇ ಸಿದ್ಧವಾಗಿದ್ದ ಪುರೋಚನನು ಗೋರಚನ (ಹಸುವಿನ ಎದೆಯಲ್ಲಿರುವ ಒಂದು ಜಾತಿಯ ಕೊಬ್ಬು) ಅಕ್ಷತೆ, ಗರಿಕೆಯ "ಚಿಗುರು, ಮಾದಲಹಣ್ಣು, ಕನ್ನಡಿ, ಕಳಮಾಕ್ಷತೆ ಮೊದಲಾದವುಗಳನ್ನು ಕಯ್ಯಲ್ಲಿ ಧರಿಸಿದ್ದ ಸ್ತ್ರೀಯರು ಮಂಗಳವಾದ್ಯಗಳು ಮೊದಲಾದವುಗಳಿಂದ ಕೂಡಿ ಎದುರಿಗೆ ಬಂದು ದೀರ್ಘದಂಡನಮಸ್ಕಾರಮಾಡಿ ಪಾಂಡವರನ್ನು ಮುಂದಿಟ್ಟುಕೊಂಡು ಬಂದು ಪಟ್ಟಣವನ್ನು ಪ್ರವೇಶಮಾಡಿಸಿ “ಎಲ್ಲಿ ಬೀಡುಬಿಡೋಣ' (ಇಳಿದುಕೊಳ್ಳೋಣ) ಎಂದು ಪಾಂಡವರು ಪ್ರಶ್ನೆಮಾಡಲು ಅವನು ನಿಮ್ಮಯ್ಯನಾದ ಧೃತರಾಷ್ಟ್ರನ ಆಜ್ಞೆಯ ಪ್ರಕಾರ