________________
೧೬೮ / ಪಂಪಭಾರತಂ ಜೀರ್ಣೋದ್ಧಾರಂಗಳಂ ಮಾಡಿಸುತ್ತುಂ ಬೀಡುದಾಣಂಗಳೊಳಿಕ್ಕಿದ ಬಳ್ಳಿಗಾವಣಂಗಳೊಳಂ ನನೆಯ ಜೊಂಪಂಗಳೊಳಂ ವಿಶ್ರಮಿಸುತ್ತುಂ ಬಂದು
ಚಂ|| ಎಡಹಳದೀವ ಕಲ್ಪತರುವೆಂದು ವನೀಪಕಟ ಸಂತಸಂ
ಬಡ ಪೊಡವೊಂದಕಾಳವಿಳಯಾಶನಿಯೆಂದು ವಿರೋಧಿಗಳ ಮನಂ | ಗಿಡ ಬಿಯಮುಂ ಪರಾಕ್ರಮಮುಮೋರೆ ತನ್ನೊಡವುಟ್ಟಿದರ್ ಸಮಂ ತೊಡವರೆ ವಾರಣಾವತಮನೆಯ್ದಿದನಮ್ಮನ ಗಂಧವಾರಣಂ | ೯೮
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ದ್ವಿತೀಯಾಶ್ವಾಸಂ
ತರುತ್ತಲೂ ತಾನು ಇಳಿದುಕೊಳ್ಳುವುದಕ್ಕೆ ಹಾಕಿದ್ದ ಬಳ್ಳಿಯ ಚಪ್ಪರಗಳಲ್ಲಿಯೂ ಹೂವಿನ ಗೊಂಚಲುಗಳಲ್ಲಿಯೂ ವಿಶ್ರಮಿಸಿಕೊಳ್ಳುತ್ತಲೂ ಬಂದು ೯೮. ಬಡತನದ ಸ್ವರೂಪವನ್ನು ತಿಳಿದು ದಾನಮಾಡುವ ಕಲ್ಪವೃಕ್ಷವಿದೆಂದು ಯಾಚಕಸಮೂಹವು ಸಂತೋಷಪಡುವಂತಿರುವ ದಾನಗುಣವೂ ಇದೊಂದು ಅಕಾಲದಲ್ಲಿ ಪ್ರಾಪ್ತವಾಗುವ ಪ್ರಳಯಕಾಲದ ಸಿಡಿಲೆಂದು ಶತ್ರುಗಳ ಮನಸ್ಸನ್ನು ಕೆಡಿಸುವ ಪರಾಕ್ರಮವೂ ತನ್ನಲ್ಲಿ ಪ್ರಕಾಶಿಸುತ್ತಿರಲು ತನ್ನ ಸಹೋದರರು ಜೊತೆಯಲ್ಲಿಯೇ ಕೂಡಿ ಬರುತ್ತಿರಲು ಅಮ್ಮನ ಗಂಧವಾರಣನಾದ ಅರ್ಜುನನು (ಅರಿಕೇಸರಿಯು) ವಾರಣಾವತವನ್ನು ಬಂದು ಸೇರಿದನು.