________________
೧೭೦ / ಪಂಪಭಾರತಂ ಕಂ || ಅರಗು ಮೊದಲಾಗೆ ಶೃತ ಸ
ಜ್ವರಸಂ ಬೆಲ್ಲಂ ಸಣಂಬಿವೆಂಬಿವಲಿಂ ವಿ | ಸರಿಸಿ ಸಮದಿಂದ್ರಭವನಮ್
ಧರೆಗವತರಿಸಿರ್ದುದನಿಸುವರಗಿನ ಮನೆಯಂ | ವll ತಾನೆ ಮುಂದಿಟ್ಯೂಡಂಗೊಂಡು ಬಂದು ಪುಗಿಸಿ ಪಾಂಡವರಯ್ಯರುಂ ಕೊಂತಿವೆರಸು ಕಿಚಿದಾನುಂ ಬೇಗಮಿರ್ದು ದಾನ ಸನಾನಾದಿಗಳಿಂ ಸಂತಸಂಬಡಿಸಿ ಪುರೋಚನನಂ ಬೀಡಿಂಗ ಪೋಗಲ್ವಟ್ಟು ಧರ್ಮಪುತ್ರನಾ ಮನೆಯಂ ಪರೀಕ್ಷಿಸಿ ನೋಡಲೊಡಮಣಿದು ನಿಜಾನುಜ ಸಹಿತಂ ಕೊಂತಿವರಸೇಕಾಂತದೊಳಿಂತಂದಂಚಂ|| ಇದು ಮನೆಯಂದವನ್ನುರಿವ ದಳ್ಳುರಿಯುಗೈಡದಂದಮಾಗಿ ತೋ
ಆದಪುದು ಕಣ್ಣೆ ಸರಸದೆಣ್ಣೆಯ ತುಪ್ಪದ ಕಂಪಿದೆಲ್ಲಮಂ || ಬುದ ಬಗದಲ್ಲಿ ನೋಡುವೊಡಮಿಟ್ಟಗೆ ಕಲರನೆಂಬುದಿಲ್ಲ ಕೂ - ರದನಿದನೊಡ್ಡಿದಂ ಪಗೆಗೆ ಸಂತಸವಾಗಿರೆ ಮಾರಿ ಸುಝುಮೇ || ೪
ವl! ಅದಲ್ಲದಯುಮತ್ಕಾದರಸ್ಸಂಭ್ರಮಮುತ್ತಾದಯತಿಯೆಂಬುದೀ ಪುರೋಚನನೆಂಬ `ಬೂತು ಸುಯೋಧನನ ಬೆಸದಿಂ ನಮಗಿನಿತಾದರಂ ಗೆಯ್ಯುದಲ್ಲಂ ನಮ್ಮಂ ಮಳಡಿಸಲೆಂದೆ ಮಾಡಿದಂ ನಾಮಿದನಳಿಯದಂತು ಬೇಂಟೆಯ ನೆವದೊಳ್ ಬಟ್ಟೆಗಳಂ ಸೋದಿಸುವಮಂದು
ಮೊದಲೇ ಮನೆಯನ್ನು ಸಿದ್ಧಪಡಿಸಿದ್ದೇನೆ; ಅಲ್ಲಿಗೆ ದಯಮಾಡಿ ಎಂದನು. ೩. ಅರಗು ಮೊದಲಾದ ತುಪ್ಪ, ಸಜ್ಜರಸ, ಬೆಲ್ಲ, ಸೆಣಬು ಇವುಗಳಿಂದ ವಿಸ್ತಾರವಾಗಿ ನಿರ್ಮಿಸಿದ ದೇವೇಂದ್ರನರಮನೆಯೇ ಭೂಮಿಗಿಳಿದು ಬಂದಿದೆಯೋ ಎನಿಸಿದ್ದ ಅರಗಿನ ಮನೆಯನ್ನು ವl ತಾನೆ ಮುಂದಾಗಿ ಒಡಗೊಂಡು ಬಂದು ಪ್ರವೇಶಮಾಡಿಸಲು ಅಯ್ದುಜನ ಪಾಂಡವರೂ ಕುಂತಿಯೊಡಗೂಡಿ ಕೆಲವು ಕಾಲವಿದ್ದು ದಾನಸನ್ಮಾನಾದಿಗಳಿಂದ ಸಂತೋಷಪಡಿಸಿ ಪುರೋಚನನನ್ನು ಅವನ ಮನೆಗೆ ಹೋಗುವ ಹಾಗೆ ಹೇಳಿ ಧರ್ಮರಾಜನು ಆ ಮನೆಯನ್ನು ಪರೀಕ್ಷಿಸಿ ನೋಡಿ ಅದರ ರಹಸ್ಯವನ್ನು ತಿಳಿದು ತಮ್ಮಂದಿರೊಡಗೂಡಿದ ಕುಂತಿಗೆ ರಹಸ್ಯವಾಗಿ ಹೀಗೆ ಹೇಳಿದನು - ೪, ಇದು ಮನೆಯ ಹಾಗೆ ಕಾಣುವುದಿಲ್ಲ. ಉರಿಯುವ ದಾವಾಜ್ವಾಲೆಯ ರಾಶಿಯಂತೆ ಕಣ್ಣಿಗೆ ಕಾಣುತ್ತಿದೆ. ಎಲ್ಲಿ ಪರೀಕ್ಷಿಸಿ ನೋಡಿದರೂ ಸರಸದ ಎಣ್ಣೆಯ ತುಪ್ಪದ ವಾಸನೆಯೇ ಇದೆ. ಇಟ್ಟಿಗೆ, ಕಲ್ಲು, ಮರ ಎಂಬುವುದಿಲ್ಲ. ಶತ್ರುವಿಗೆ ಸಂತೋಷವಾಗುವುದಕ್ಕೋಸ್ಕರ ಅಹಿತನಾದ ವಿರೋಚನನು ಈ ಉಪಾಯವನ್ನು ಒಡ್ಡಿದ್ದಾನೆ. ಇದಕ್ಕೆ ಮಾರಿದೇವತೆಯು ನಿಟ್ಟುಸಿರು ಬಿಡುತ್ತಾಳೆಯೇ (ಅಂದರೆ ಇಲ್ಲ, ಅದು ಅವಳಿಗೆ ತೃಪ್ತಿಕರವಾಗಿಯೇ ಇರುತ್ತದೆ) ವll ಅಷ್ಟೇ ಅಲ್ಲದೆ ವಿಶೇಷವಾದ ಆದರವು ಸಂದೇಹವನ್ನುಂಟುಮಾಡುತ್ತದೆ' ಎಂಬುದುಂಟು. ಈ ಪುರೋಚನನೆಂಬ ಭೂತವು ದುರ್ಯೊಧನನ ಆಜ್ಞೆಯ ಪ್ರಕಾರ ನಮಗಿಷ್ಟು ಆದರವನ್ನು ತೋರಿಸುವುದೆಲ್ಲ ನಮ್ಮನ್ನು ಮೋಸಮಾಡುವುದಕ್ಕಾಗಿಯೇ ಮಾಡಿದ್ದಾನೆ. ನಾವು ಇದನ್ನು ತಿಳಿಯದ ಹಾಗೆ ಬೇಟೆಗೆ ಹೋಗುವ ನೆಪದಲ್ಲಿ ದಾರಿಯನ್ನು ಹುಡುಕೋಣ' ಎಂದು ನಿತ್ಯವೂ