________________
ದ್ವಿತೀಯಾಶ್ವಾಸಂ | ೧೬೩ ಏರಿಯರ್ ನೀಮಿರೆ ಪಾಂಡುರಾಜನ ವಲಂ ಮುಂ ಪಟ್ಟಮಂ ಕಟ್ಟೆ ಭೂ 'ಭರಮಂ ತಾಳಿದನೀಗಳಾತನ ಸುತರ್ ತಾಮಾಗಳೇ ಯೋಗ್ಯರಾ | ಗರೆ ಪಟ್ಟಕ್ಕೆ ತಗುಳು ಪಾಲನೆ ವಿರ್ ಪಾವಿಂಗೆ ದಾಯಾದ್ಯರು ಪಿರಿಯರ್ಮಾಡಿದಿರಮ್ಮ ಸಾವುಮುಟಿವುಂ ದೈವೇಚ್ಛೆಯಾಯಾಗದೇ | ೮೯ ವ|| ಅದಲ್ಲದೆಯುರಿಚoll ಮಲೆ ತಲೆದೋಜದಂದುದನೆ ಕೊಟ್ಟುದಡಂಗಮಡಂಗಿ ಬಂದೊಡೂ
ಕಲಿಗವೆಸರ್ಗೆ ಪೂಣ್ಣುದು ಕುಜುಂಬು ತಜುಂಬದ ಮಿಕ್ಕ ಶತ್ರು ಮಂ | ಡಳಿಕರೆ ಮಿತ್ರ ಮಂಡಳಿಕರಾದರನಾಕುಳಮಿಂದು ನಾಳೆ ಮಾ
ರ್ಮಲೆದರನಿಕ್ಕಿ ನಮ್ಮನೆದಿಕ್ಕುಗುಮಾ ನೆಲೆಯಿಂ ಗುಣಾರ್ಣವಂ || ೯೦
ವ|| ಅಂತು ವಿಕ್ರಮಾರ್ಜುನಂ ಬಿಲ್ಗೊಳಲುಂ ಭೀಮಸೇನಂ ಗದೆಗೊಳಲುವಾಂ ಪುದರಿದು ಪಾಂಶುವಧದ ಕೆಯ್ದ ಮಾಡುವುದುತ್ತಮಪಕ್ಷಮಂತುಮಲ್ಲದೆಯುರಿಶೌ || ಸ್ವಾಮ್ಯಾರ್ಥಂ ಸ್ವಾಮ್ಯ ವಿಕ್ರಾಂತಂ ಮರ್ಮಜ್ಞ, ವ್ಯವಸಾಯಿನಂ
ಅರ್ಧರಾಜ್ಯಹರಂ ನೃತ್ಯಂ ಯೋನ ಹನ್ಯಾತ್ಮ ಹನ್ಯತೇ ಎಂಬುದರ್ಥಶಾಸ್ತ್ರ ಸದ್ಯಾವಂ
೮೯. 'ಹೀಗೆ ಹಿರಿಯರಾದ ನೀವಿದ್ದರೂ ಪಾಂಡುರಾಜನಿಗೆ ಪಟ್ಟವನ್ನು ಕಟ್ಟಲು ಆತನು ರಾಜ್ಯಭಾರವನ್ನು ವಹಿಸಿದನು. ಈಗಲೂ ಅವರ ಮಕ್ಕಳು ತಾವಾಗಲೇ ಪಟ್ಟಕ್ಕೆ ಯೋಗ್ಯರಾಗುತ್ತಿಲ್ಲವೆ? (ನೀವು) ಬೆನ್ನಟ್ಟಿಕೊಂಡು ಹೋಗಿ ಹಾವಿಗೆ ಹಾಲನ್ನೆರೆಯುತ್ತಿದ್ದೀರಿ. ದಾಯಾದಿಗಳನ್ನು ದೊಡ್ಡವರನ್ನಾಗಿ ಮಾಡಿದಿರಿ. ನಮ್ಮ ಸಾವು ಬದುಕುಗಳು ಈಗ ಅದೃಷ್ಟಾಧೀನವಾಗದೇ ಇರುತ್ತದೆಯೇ' (ಅಂದರೆ ರಾಜ್ಯವು ನಮಗೆ ಬಂದೇಬರುತ್ತದೆಯೆಂಬ ನಿಷ್ಕರ್ಷೆಯಿಲ್ಲ. ಅದೃಷ್ಟವಿದ್ದರೆ ಬರಬಹುದು ಎಂಬಂತೆ ಸಂಶಯಾತ್ಮಕವಾಯಿತು ಎಂದರ್ಥ). ವರೆಗೆ ಹಾಗೂ ಅಲ್ಲದೆ-೯೦. '(ಶತ್ರುರಾಜರೆಲ್ಲ) ಪ್ರತಿಭಟನೆಯೇ ಇಲ್ಲದೆ ಮನಸ್ಸಿನಲ್ಲಿ ಶತ್ರುತ್ವವನ್ನೂ ಅಡಗಿಸಿಕೊಂಡು ಅವರು ಕೇಳಿದ್ದನ್ನು ಕೊಟ್ಟು ಅವರಿಗೆ ಅಡಿಯಾಳಾಗುವಂತೆ ಪ್ರತಿಜ್ಞೆಮಾಡಿತು. ಸಣ್ಣ ಪಾಳೆಯಗಳೆಲ್ಲ ಅವರ ಆಜ್ಞಾನುವರ್ತಿಯಾಗಿರಲು ನಿಷ್ಕರ್ಷೆಮಾಡಿಕೊಂಡುವು. ಪ್ರತಿಭಟಿಸದೆ ಶತ್ರುಮಂಡಲವೆಲ್ಲ ಮಿತ್ರಮಂಡಳಿಕರಾದರು. ಇಂದೋ ನಾಳೆಯೋ ಗುಣಾರ್ಣವನು ಪ್ರತಿಭಟಿಸಿದವರನ್ನೆಲ್ಲ ಧ್ವಂಸಮಾಡಿ ನಮ್ಮನ್ನೂ ಈ ನೆಲೆಯಿಂದ ಎಳೆದು ಬಿಸಾಡುತ್ತಾನೆ'. ವ!! ಹಾಗೆ ವಿಕ್ರಮಾರ್ಜುನನು ಬಿಲ್ಲನ್ನು ಹಿಡಿದರೂ ಭೀಮಸೇನನು ಗದೆಯನ್ನು ಧರಿಸಿದರೂ ಪ್ರತಿಭಟಿಸುವುದಸಾಧ್ಯ. ರಹಸ್ಯವಾಗಿ ಮೋಸದ ಕೊಲೆಯಿಂದ ಅಧೀನಪಡಿಸಿಕೊಳ್ಳುವುದು ಉತ್ತಮವಾದ ಮಾರ್ಗ ಹಾಗೂ ಅಲ್ಲದೆ - ವ! “ಭಾಗಕ್ಕೆ ಆಶೆಪಡುತ್ತಿರುವವನೂ ಸ್ವಾಮ್ಯವನ್ನು ಪಡೆಯಲು ಶಕ್ತಿಯುಳ್ಳವನೂ ರಹಸ್ಯವನ್ನು ತಿಳಿದವನೂ `ಕಾರ್ಯಶೀಲನಾದವನೂ ಅರ್ಧರಾಜ್ಯವನ್ನು ಅಪಹರಿಸುವವನೂ ಆದ ಆಳನ್ನು ಯಾವನು ಕೊಲ್ಲುವುದಿಲ್ಲವೋ ಅವನು ತಾನೇ ಹತನಾಗುತ್ತಾನೆ. ವ| ಎನ್ನುವುದು ಅರ್ಥಶಾಸ್ತ್ರದ ಸಾರವತ್ತಾದ ಭಾಗ,