________________
೧೬೪ / ಪಂಪಭಾರತಂ
ಈ || ಮೇಲ್ಕುಲಮಿಲ್ಲೆಯೋ ನಮಗೆ ದಾಯಿಗರಲ್ಲರೂ ಶಸ್ತ್ರವಿದ್ಯೆಯೊಳ್ ಪೂಣೆಗಳಿಲ್ಲೆಯೋ ಧರೆಗೆ ಮುನ್ನವರಯ್ಯನೆ ಮುಖ್ಯನಲ್ಲನೋ | ಜಾಣ್ಯಟದಾಗವೇಡ ಮನದಲ್ ನಿಮಗಯ್ಯ ವಿಧಾತೃಯೋಗದಿಂ ಕಣ್ಣುರುಡಾದೊಡೇನೊ ಕುರುಡಾಗಲೆವೇಟ್ಟುದೆ ನಿಮ್ಮ ಬುದ್ದಿಯುಂ || ೯೧ ವ|| ಎಂದು ತನ್ನ ಮನದೊಳೊಡಂಬಡೆ ನುಡಿದ ಮಗನ ಮಾತಂ ಧೃತರಾಷ್ಟ್ರ ಮನದಗೊಂಡು
ಈ !! ಏನೆರ್ದೆಗೊಂಡ ಕಜ್ಜಮನ ಪೇಟೆಯೊ ಚಿಂತಿಸುತಿರ್ಪೆನಾನುಮೇ
ನಾನುಮುಪಾಯಮಂ ಬಗವರಂತವರ್ಗ ನಿನಗಂದ ಕಂದ ಪೇಮ್ 1
ನೀನಿರೆ ಪಟ್ಟಮುಂ ನೆಲನುಮಪ್ಪುದನೊಲ್ವನೆ ವೈರಿಗಳ ನೀ ನೇನುಮದರ್ಕೆ ಚಿಂತಿಸದಿರಿಲ್ಲಿರಲೀವನೆ ಪಾಂಡುಪುತ್ರರಂ||
೯೨
ವ|| ಎಂದು ದುರ್ಯೋಧನನಂ ಬೀಡಿಂಗೆ ಪೋಗಲ್ವೇಟ್ಟು ಪಾಂಡವರಯ್ಯರುಮಂ ಬರಿಸಿ ಧೃತರಾಷ್ಟ್ರಂ ತೊಡೆಯನೇಟಿಸಿಕೊಂಡು ದುರ್ಯೋಧನನಪೊಡೆ ಪೊಲ್ಲ ಮಾನಸನಾತನುಂ ನೀಮುನೊಂದೆಡೆಯೊಳಿರ ಕಿಸುಲುಂ ಕಲಹಮುಮಂದುಂ ಕುಂದದದುಕಾರಣಂ ಗಂಗಾನದಿಯ ದಕ್ಷಿಣ ತಟದೊಳ್ ವಾರಣಾವತವೆಂಬುದು ಪೋಲ್ ಕುರುಜಾಂಗಣ ವಿಷಯಕ್ಕೆ ತಿಳಕಮಪ್ಪಂತಿರ್ದುದಲ್ಲಿಗೆ ಪೋಗಿ ಸುಖಮಿರಿಮೆಂದೊಡಂತೆಗೆಯೊಮೆಂದು ಬೀಳ್ಕೊಂಡು ಬೀಡಿಂಗೆವಂದು ಗಾಂಗೇಯ ದ್ರೋಣ ಕೃಪ ಎದುರರ್ಕಳಂ ಕುಂತಿಗಂ ತದ್ವ ತಾಂತಮನ
೯೧. ಅಲ್ಲದೆ ನಮಗೆ ಅವರಿಗೆ ಸಮಾನವಾದ ಕುಲವಿಲ್ಲವೇ? ರಾಜ್ಯಕ್ಕೆ ನಾವು ಭಾಗಿಗಳಲ್ಲವೆ? ನಾವು ಅವರಷ್ಟೇ ಶಸ್ತ್ರವಿದ್ಯೆಯಲ್ಲಿ ಪ್ರಸಿದ್ಧರಲ್ಲವೆ; ಈಗಾಗಲೇ ಅವರಯ್ಯ ರಾಜ್ಯಭಾರಮಾಡಿಯಾಗಲಿಲ್ಲವೆ ? ನಿಮ್ಮ ಮನಸ್ಸಿನಲ್ಲಿ ಜಾಣ್ಮ ಕಿರಿದಾಗಬೇಕಾಗಿಲ್ಲ. ದುರದೃಷ್ಟವಶದಿಂದ ಕಣ್ಣು ಕುರುಡಾದರೆ ನಿಮ್ಮ ಬುದ್ಧಿಯೂ ಕುರುಡಾಗಬೇಕೆ?' ವll ಎಂದು ತನ್ನ ಮನಸ್ಸಿಗೊಪ್ಪಿದ ಮಾತನ್ನಾಡಿದ ಮಗನ ಮಾತನ್ನು ಧೃತರಾಷ್ಟ್ರನು ಅಂಗೀಕರಿಸಿದನು. ೯೨. ನನ್ನ ಹೃದಯದಲ್ಲಿದ್ದ ಕಾರ್ಯವನ್ನೇ ನೀನು ಹೇಳಿದ್ದೀಯೆ; ಅವರು ನಿನಗೇನಾದರೂ ಕೇಡನ್ನು ಯೋಚಿಸುತ್ತಿದ್ದಾರೆಯೆ ಎಂಬುದಾಗಿಯೇ ನಾನೂ ಚಿಂತಿಸುತ್ತಿದ್ದೇನೆ. ಮಗು, ನೀನಿರುವಾಗ ಪಟ್ಟವೂ ರಾಜ್ಯವೂ ಶತ್ರುಗಳಿಗೆ ಆಗುವುದನ್ನು ನಾನು ಒಪ್ಪುತ್ತೇನೆಯೇ ? ಅದಕ್ಕೆ ನೀನು ಚಿಂತಿಸಬೇಡ; ಪಾಂಡುಪುತ್ರರು ಇಲ್ಲಿರಲು ನಾನು ಅವಕಾಶಕೊಡುತ್ತೇನೆಯೇ ? ವ|| ಎಂದು ದುರ್ಯೋಧನನನ್ನು ಬೀಡಿಗೆ ಹೋಗಹೇಳಿ ಧೃತರಾಷ್ಟ್ರನು ಅಯ್ದು ಮಂದಿ ಪಾಂಡವರನ್ನೂ ಬರಮಾಡಿ ತೊಡೆಯಮೇಲೆ ಕುಳ್ಳಿರಿಸಿಕೊಂಡು 'ದುರ್ಯೋಧನನಾದರೆ ಕೆಟ್ಟ ಮನಸ್ಸುಳ್ಳವನು. ಅವನೂ ನೀವೂ ಒಂದೇ ಸ್ಥಳದಲ್ಲಿದ್ದರೆ ಕೋಪವೂ ಜಗಳವೂ ಎಂದೂ ತಪ್ಪುವುದಿಲ್ಲ; ಆದ ಕಾರಣ ಗಂಗಾನದಿಯ ದಕ್ಷಿಣದಲ್ಲಿ ಕುರುಜಾಂಗಣದೇಶಕ್ಕೆ ತಿಲಕದಂತಿರುವ ವಾರಣಾವತವೆಂಬ ಪಟ್ಟಣವಿದೆ; ಅಲ್ಲಿಗೆ ಹೋಗಿ ಸುಖವಾಗಿರಿ ಎನ್ನಲು (ಪಾಂಡವರು) ಹಾಗೆಯೇ ಮಾಡುವೆವು ಎಂದು ಅವರ ಅಪ್ಪಣೆಯನ್ನು ಪಡೆದು ಮನೆಗೆ ಬಂದು ಭೀಷ್ಮದ್ರೋಣ ಕೃಪ ವಿದುರರುಗಳಿಗೂ