________________
೧೬೨ ಪಂಪಭಾರತಂ - ಚಂil ಅವರಿವರನ್ನರಿನ್ನರನವೇಡರಿಕೇಸರಿಗಾಂಪನಿಲ್ಲ ಮಾ :
.. ಅವ ತಲೆದೋರ್ವ ಗಂಡರಣಮಿಲ್ಲೆಡೆಯೊಳ್ ಗೆಡವಚ್ಚುಗೊಂಡು ಪಾಂ | , ಡವರನಕಾರಣಂ ಕೆಣಕಿದೀ ಪೊಸ ಪೊಳಾದ ಕಿರ್ಚು ಕೌ
"ರವರ್ಗಿದು ನಾಡೆಯುಂ ತಿಣುಕನಾಗಿಸದೇಂ ಗಳ ಸಯ್ತು ಪೋಕುಮೇ || ೮೭
ವ ಎಂದೂರ್ವರೊರ್ವರೋಂದೋಂದನ ನುಡಿಯತ್ತು ಪೂಗ ಬೆಳಗುವ ದೀವಿಗೆಗಳ ಕಬಲೆಯಂ ತಲೆದೊಅಲೀಯದ ಪ್ರಚಂಡ ಮಾರ್ತಾಂಡನ ತೇಜೊಂಕುರಂಗಳ ಬೆಳಗುವಂತೆ ಬೆಳಗೆ ಪಾಂಡವರ್ ನಿಜನಿವಾಸಕ್ಕೆ ಪೋದರಾಗಲ್ಕಂ11 ಎಸೆವ ನಿಜವಂಶಮಂ ಪೆ
ರ್ಚಿಸುವ ಗುಣಾರ್ಣವನೊಳುಂತ ಸೆಣಸಲೆಂದಿ ! .. : ರ್ಪ ಸುಯೋಧನಂಗೆ ಮುಳಿಸಿಂ
ಕಿರುಗಣಿದ ತಆದಿನಮತಕರನುದಯಿಸಿದಂ || * ವll ಆಗ ದುರ್ಯೋಧನಂ ಭೀಮಸೇನನ ಬಲ್ಲಾಳನದಳವುಮಂ ವಿಕ್ರಮಾರ್ಜುನನ ದಿವ್ಯಾಸ್ತ ಕೌಶಳಮುಮಂ ಕಂಡು ತನ್ನೆರ್ದಯುಂ ಪೊಳ್ಳುಮರನಂ ಕಿರ್ಚಳುರ್ವಂತೂಳಗೊಳಗಳುರೆ ಸೈರಿಸಲಾಗಿದೆ ಕರ್ಣನಂ ಕರೆದಾಚಿಸಿ ತಮ್ಮಯ್ಯನಲ್ಲಿಗೆ ಹೋಗಿ ಪೊಡಮಟ್ಟು ಕಟೇಕಾಂತದೊಳಿಂತೆಂದಂ
೮೮
ಮಾತನಾಡುತ್ತಿರಲು ಅವರಲ್ಲಿ ಭವಿಷ್ಯಜ್ಞಾನವುಳ್ಳ ಕೆಲವರು ಹೀಗೆಂದರು-೮೭. ಅವರು ಇವರು ಅಂತಹವರು ಇಂತಹವರು ಎನ್ನಬೇಡ. ಅರಿಕೇಸರಿಯನ್ನೆದುರಿಸುವವರಾರೂ ಇಲ್ಲ. ಅರ್ಜುನನ ಆಜ್ಞೆಯನ್ನು ಮೀರಿ ಅವನನ್ನು ಪ್ರತಿಭಟಿಸುವ ವೀರರು ಯಾರೂ ಇಲ್ಲ. ಇಬ್ಬರಿಗೂ ಸಮಾನವಾಗಿದ್ದ ಸ್ನೇಹಭಂಗವಾಗಿ ಪಾಂಡವರನ್ನು ಕಾರಣವಿಲ್ಲದೆ ಕೆಣಕಿದ ಈ ಹೊತ್ತಿನಲ್ಲಿ ಉಂಟಾದ ಬೆಂಕಿಯು (ಮನಸ್ತಾಪವು) ಕೌರವರಿಗೆ * ವಿಶೇಷವಾದ ಹಿಂಸೆಯನ್ನುಂಟುಮಾಡದೇ ಸಾಮಾನ್ಯವಾಗಿ ಹೋಗುತ್ತದೆಯೇ? ವll ಎಂದು ಒಬ್ಬೊಬ್ಬರು ಒಂದೊಂದನ್ನು ಆಡುತ್ತ ಹೋಗುತ್ತಿರಲಾಗಿ ಪ್ರಕಾಶಮಾನವಾಗಿದ್ದ ಕೈದೀವಿಗೆಗಳು ಕತ್ತಲೆಯು ಹರಡುವುದಕ್ಕೆ ಅವಕಾಶ ಕೊಡದೆ ಪ್ರಕಾಶಮಾನವಾದ ಸೂರ್ಯಕಿರಣಗಳ ಮೊಳಕೆಯಂತೆ ಬೆಳಗುತ್ತಿರಲು ಪಾಂಡವರು ತಮ್ಮ ನಿವಾಸಕ್ಕೆ ಹೋದರು. ಆಗ-೮೮, ಪ್ರಕಾಶಮಾನವಾದ ತನ್ನ ವಂಶವನ್ನೂ ಅಭಿವೃದ್ಧಿಗೊಳಿಸುವ ಗುಣಾರ್ಣವನಾದ ಅರ್ಜುನನಲ್ಲಿ ನಿಷ್ಕಾರಣವಾಗಿ ಜಗಳವಾಡಬೇಕೆಂದಿರುವ ದುರ್ಯೋಧನನಿಗೆ ಕೋಪದಿಂದ ತನ್ನ ಕಣ್ಣನ್ನು ಕೆರಳಿಸಿದ ರೀತಿಯಲ್ಲಿ ಚಂದ್ರನು ಕೆಂಪಗೆ ಉದಯಿಸಿದನು. ವ|| ಆಗ ದುರ್ಯೊಧನನು ಭೀಮಸೇನನ ಪರಾಕ್ರಮದ ಪ್ರಮಾಣವನ್ನೂ ಅರ್ಜುನನ ದಿವ್ಯಾಸ್ತಕೌಶಲವನ್ನೂ ನೋಡಿ ಅವನ ಹೃದಯವು ಪೊಳ್ಳುಮರವನ್ನು ಬೆಂಕಿಯು ಸುಡುವಂತೆ ಒಳಗೊಳಗೆ ಸುಡುತ್ತಿರಲು ಸಹಿಸಲಾರದೆ ಕರ್ಣನನ್ನು ಕರೆದು (ಅವನೊಡನೆ) ಯೋಚನೆಮಾಡಿ ತನ್ನ ತಂದೆಯಾದ ದೃತರಾಷ್ಟ್ರನ ಸಮೀಪಕ್ಕೆ ಹೋಗಿ ನಮಸ್ಕಾರಮಾಡಿ ಬಹು ರಹಸ್ಯವಾಗಿ ಹೀಗೆ ಹೇಳಿದನು