________________
ದ್ವಿತೀಯಾಶ್ವಾಸಂ | ೧೫೯ ಕಂII ಅರಿಗನ ಬಿಲ್ಕಲೆಯೊಳಂ
ದೆರಡಿಲ್ಲದೆ ಬಗೆದ ಮುಳಿಸುಮೇವಮುಮೆರ್ದೆಯೊಳ್ || ಬರದಿರೆ ತೋಳದನಾಯತ
ಕರ ಪರಿಘಂ ಕರ್ಣನಾತ್ಮ ಶರಪರಿಣತಿಯಂ || ವ|| ಅಂತು ತೋಟಿಯುಮರ್ದೆಯ ಮುಳಿಸು ನಾಲಗೆಗೆ ವರೆ ಸೈರಿಸಲಾದೆ ವಿದ್ವಿಷ್ಯ ವಿದ್ರಾವಣನನಿಂತೆಂದಂಕ೦ll ಸಂಗತದಿನೀಗಳಿಂತೀ
ರಂಗಮೆ ರಣರಂಗಮಾಗೆ ಕಾದುವಮಳವಂ | ಪೊಂಗದಿರಿದಿರ್ಚಂ ಗಳ
ರಂಗಂಬೊಕ್ಕಾಡುವಂತೆ ಪೆಂಡಿರೆ ಗಂಡರ್ || ವ|| ಎಂಬುದುಮತಿರಥಮಥನನಿಂತೆಂದಂಕಂ11 ಈ ನೆರೆದ ಗುರುಜನಂಗಳ
ಮಾನಿನಿಯರ ಮುಂದೆ ಕರ್ಣ ಪೊಲ್ಲದು ನುಡಿದ | ನೀನೆ ನಿಡುದೋಳಳ ತೀನಂ ಮಟ್ಟಿಸುವೆಯಪ್ರೊಡಾನೊಂದನೇ ||
- ೮೧ ವ|| ಎಂಬುದುಂ ದ್ರೋಣನುಂ ಕೃಪನುಮಡೆಗೆ ವಂದು ಕರ್ಣನನಿಂತೆಂದರ್ಕಂ|| ವಿವದ ಮುಳಿಸಿನ ಕಾರಣ
ಮಾವುದೋ ನೀಂ ನಿನ್ನ ತಾಯ ತಂದೆಯ ದೆಸೆಯಂ | ಭಾವಿಸದ ಕರ್ಣ ನುಡಿವಂ ತಾವುದು ಸಮಕಟ್ಟು ನಿನಗಮರೀಕೇಸರಿಗಂ ||
* ೮೨
೭೯, ಅರ್ಜುನನ ಬಿಲ್ಲಿಗಿಂತ ತನ್ನ ಬಿಲ್ಲಿನ ಪಾಂಡಿತ್ಯವು ಸ್ವಲ್ಪವೂ ಬೇರೆಯಿಲ್ಲವೆಂದು ಭಾವಿಸಿದ ಕೋಪವೂ ಅಸಮಾಧಾನವೂ ಎದೆಯಲ್ಲಿ ಬರೆದಿರಲು ಪರಿಘಾಯುಧದಂತೆ ದೀರ್ಘವಾದ ಬಾಹುಗಳನ್ನುಳ್ಳ ಕರ್ಣನು ತನ್ನ ಅಸ್ತ್ರವಿದ್ಯಾಪ್ರೌಢಿಮೆಯನ್ನು ಪ್ರದರ್ಶಿಸಿದನು. ವ|| ಹಾಗೆ ತೋರಿಸಿಯೂ ಹೃದಯದ ಕೋಪವು ನಾಲಗೆಗೆ ಬರಲು ಸಹಿಸಲಾರದೆ ವಿದ್ವಿಷ್ಠವಿದ್ರಾವಣನಾದ ಅರ್ಜುನನನ್ನು ಕುರಿತು ಹೀಗೆಂದನು-೮೦ ಎಲ್ಲರೂ ಇಲ್ಲಿ ಸೇರಿರುವುದರಿಂದ ಈ ವ್ಯಾಯಾಮರಂಗವೇ ರಣರಂಗವಾಗಿರಲು ಯುದ್ದಮಾಡೋಣ, ಪರಾಕ್ರಮದಿಂದ ಉಬ್ಬದೇ (ಅಹಂಕಾರಪಡದೇ) ಇದಿರಿಸು. ಇದೇನಯ್ಯ ನಾಟ್ಯರಂಗವನ್ನು ಪ್ರವೇಶಿಸಿ ನರ್ತನಮಾಡುವುದಕ್ಕೆ ಶೂರರು ಹೆಂಗಸರೇನು? ವlt ಎನ್ನಲು ಅದಕ್ಕೆ ಅತಿರಥಮಥನನಾದ ಅರ್ಜುನನು ಹೀಗೆಂದನು. ೮೧. ಕರ್ಣ ನೀನು ಇಲ್ಲಿ ಸೇರಿರುವ ಹಿರಿಯರ ಮತ್ತು ರಾಣಿವಾಸದ ಮುಂದೆ ಕೆಟ್ಟ ಮಾತನ್ನಾಡಿದ್ದೀಯೆ. ನೀನು ನನ್ನ ದೀರ್ಘವಾದ ತೋಳುಗಳ ತೀಟೆಯನ್ನು ಹೋಗಲಾಡಿಸುವುದಾದರೆ ನಾನು ಬೇಡವೆನ್ನುತ್ತೇನೆಯೇ? ವ ಎನ್ನಲು ದ್ರೋಣನು ಕರ್ಣನ ಮಧ್ಯೆ ಪ್ರವೇಶಿಸಿ ಕರ್ಣನಿಗೆ ಹೀಗೆ ಹೇಳಿದರು. ೮೨. ಅಸಮಾಧಾನಕ್ಕೂ ಕೋಪಕ್ಕೂ ಕಾರಣವೇನು? ನಿನ್ನ ತಾಯಿ ತಂದೆಯ ವಿಷಯವನ್ನು ವಿಚಾರಿಸಿ