________________
೧೬೦) ಪಂಪಭಾರತಂ
ವ|| ಎಂಬುದುಮಾ ಮಾತಿಂಗೆ ಮಜುವಾತುಗುಡಲಯದ ಪಂದಯಂ ಪಾವಡರ್ದಂತು ಮನೆ ಬೆಮರುತ್ತುಮಿರ್ದ ಕರ್ಣನಂ ದುರ್ಯೊಧನಂ ಕಂಡು ದ್ರೋಣನುಮಂ ಕೃಪನುಮನಿಂತೆಂದಂಕಂ ಕುಲಮೆಂಬುದುಂಟೆ ಬೀರಮ
ಕುಲಮಲ್ಲದೆ ಕುಲಮನಿಂತು ಏಕದಿರಿಂ ನೀ | ಮೊಲಿದಲ್ಲಿ ಪುಟ್ಟ ಬಳೆದಿರೊ ಕುಲಮಿರ್ದುದೆ ಕೊಡದೊಳಂ ಶರಸ್ತಂಬದೊಳಂ || ೮೩
ವll ಎಂದು ನುಡಿದು ಕರ್ಣನನೀಗಳ ಕುಲಜನಂ ಮಾಡಿ ತೋರ್ಪೆನೆಂದು ಕಯ್ಯಂ ಪಿಡಿದೊಡಗೊಂಡು ಪೋಗಿ ಕನಕಪೀಠದ ಮೇಲೆ ಕುಳ್ಳಿರಿಸಿ ಕನಕಕಳಶದ ತೀವಿದಗಣ್ಣಪುಣ್ಯ ತೀರ್ಥೋದಕಂಗಳಂ ಚತುರ್ವೇದಪಾರಗರಿಂದಭಿಷೇಕಂಗೆಯ್ಲಿ
ಕಂ|| ಮಂಗಳವಳಿಗಳ ಶುಭ ವಚ
ನಂಗಳ ಚಮರೀರುಹಂಗಳಾ, ತಂಗಳಮರ್ದಸಯೆ ಕರ್ಣಂ | ಗಂಗಮಹೀತಳ ವಿಭೂತಿಯಂ ನೆನೆಯಿತ್ತಂ ||
೮೪ ವ|| ಅಂತಿತ್ತು ನಿದಾನಕ್ಕೆ ದೇವ ಸಬಳದ ಪದಿನೆಂಟು ಕೋಟಿ ಪೊನ್ನುಮನಿತ್ತು ನೀನೆನಗೊಂದನೀಯಲ್ಲೀಟ್ಟುದೆಂದು
ಮಾತನಾಡುವುದಾದರೆ ನಿನಗೂ ಅರಿಕೇಸರಿಗೂ ಯಾವ ಸಮಾನತೆಯಿದೆ? ವ|| ಎನ್ನಲು ಆ ಮಾತಿಗೆ ಪ್ರತ್ಯುತ್ತರವನ್ನು ಕೊಡಲು ಸಮರ್ಥನಾಗದೆ ಹೇಡಿಯ ಮುಂದೆ ಹಾವು ಅಡ್ಡಬಂದ ಹಾಗೆ ಸುಮ್ಮನೆ ಬೆವರಿ ನಿಂತಿದ್ದ ಕರ್ಣನನ್ನು ದುರ್ಯೋಧನನು ನೋಡಿ ದ್ರೋಣನನ್ನೂ ಕೃಪನನ್ನೂ ಕುರಿತು ಹೀಗೆಂದನು-೮೩. ಶೌರ್ಯವೇ ಕುಲವಲ್ಲದೆ ಕುಲವೆಂಬುದು ಬೇರೆಯುಂಟೇ? ಕರ್ಣನ ಕುಲವನ್ನೂ ಬಿಡಿಸಿ (ವಿಚಾರಮಾಡಿ) ನೋಡಬೇಡಿ; ನೀವು ಪ್ರೀತಿಸಿ ಎಲ್ಲಿ ಹುಟ್ಟಿ ಬೆಳೆದಿರಿ? ಕೊಡದಲ್ಲಿಯೂ ಜೊಂಡಿನ ರಾಶಿಯಲ್ಲಿಯೂ ಕುಲವಿದ್ದಿತೆ? ವರ ಎಂಬುದಾಗಿ ಹೇಳಿ ಕರ್ಣನನ್ನೂ ಈಗಲೇ ಕುಲಜನನ್ನಾಗಿ ಮಾಡಿ ತೋರಿಸುತ್ತೇನೆ ಎಂದು ಕರ್ಣನ ಕಯ್ಯನ್ನು ಹಿಡಿದುಕೊಂಡು ಹೋಗಿ ಚಿನ್ನದ ಪೀಠದ ಮೇಲೆ ಕುಳ್ಳಿರಿಸಿ ಚಿನ್ನದ ಕಳಶದಲ್ಲಿ ತುಂಬಿದ್ದ ಅಸಂಖ್ಯಾತವಾದ ಪುಣ್ಯತೀರ್ಥೋದಕಗಳಿಂದ ನಾಲ್ಕು ವೇದಗಳಲ್ಲಿ ಪ್ರವೀಣರಾದ ಪಂಡಿತರಿಂದ ಅಭಿಷೇಕಮಾಡಿಸಿದನು. ೮೪. ಮಂಗಳವಾದ್ಯಗಳೂ ಒಳ್ಳೆಯ ಸ್ವಸ್ತಿವಾಚನಗಳೂ ಚಾಮರಗಳೂ ಬಿಳಿಯ ಕೊಡೆಗಳೂ ಒಟ್ಟಿಗೆ ಸೇರಿ ಪ್ರಕಾಶಿಸುತ್ತಿರಲು ಕರ್ಣನಿಗೆ ಅಂಗರಾಜ್ಯದ ವೈಭವವನ್ನು ಸಂಪೂರ್ಣವಾಗಿ ಕೊಟ್ಟನು. ವರ ಹಾಗೆ ಕೊಟ್ಟು ಪ್ರತಿನಿತ್ಯದ ದಾನಕ್ಕಾಗಿ ದೇವತೆಗಳ ಅಳತೆಯಲ್ಲಿ ಹದಿನೆಂಟುಕೋಟಿ ಸುವರ್ಣನಾಣ್ಯಗಳನ್ನೂ ಕೊಟ್ಟು ನೀನು ನನಗೊಂದನ್ನು