________________
ದ್ವಿತೀಯಾಶ್ಚಾಸಂ | ೧೫೭ ವ|| ಅಂತು ಮೇರೆದಪ್ಪಲ್ ಬಗೆದ ಮಹಾಸಮುದ್ರಂಗಳೆರಡe ನಡುವೆ ಕುಲಗಿರಿಯಿರ್ಪಂತಿರ್ದಶ್ವತ್ಥಾಮನಂ ಕಂಡಿರ್ವರುಮೆರಡುಂ ದೆಸೆಗೆ ತೊಲಗಿ ನಿಂದಾಗಳ್ಕಂ11 ಆ ದೂರ್ವಾಂಕುರ ವರ್ಣದೊ
ಳಾದಮೊಡಂಬಟ್ಟ ಕನಕ ಕವಚಂ ರಾಜ | ತೋದಂಡಮಮರ್ದ ದೊಣ ಕ
ಇಾದಮ ಬರೆ ಬಂದು ಮುಂದೆ ನಿಂದಂ ಹರಿಗಂ || ವಗಿ ಆಗಳ್ ಕುಂಭಸಂಭವನುಲಿವ ಜನದ ಕಳಕಳ ರವಮುಮಂ ಮೋಲಗುವ ಪಣಿಗಳುಮಂ ಬಾರಿಸಿಕಂ - ಈತಂ ಗುಣಾರ್ಣವಂ ವಿ
ಖಾತ ಯಶಂ ವೈರಿಗಜಘಟಾವಿಘಂಟನನಿಂ || ತೀತನ ಸಾಹಸಮುಪಮಾ ತೀತಮಿದಂ ನೋಡಿಯೆಂದು ನೆರವಿಗೆ ನುಡಿದಂ |
೭೪.
ವ|| ಆ ಪ್ರಸ್ತಾವದೋಳ
ಚಂll ಒಡಗುಮಜಾಂಡಮಿನ್ನಿನಿಸು ಜೇವೊಡೆದಾಗಳೆ ಬೊಮ್ಮನುಂ ಮನಂ ,
ಗಿಡುಗುಮದೇವುದಂದು ಮಿಡಿದೊಯ್ಯನೆ ಜೇವೊಡೆದಾಗಳಂಬನಂ || ಬೊಡನೊಡನೀಂಬುವೆಂಬನಿತು ಸಂದಯಮಪ್ಪಿನಮಸ್ತ ಜಾಲದಿಂ ತಡೆಯದೆ ಪಂಜರಂಬಡದನಂದು ವಿಯತ್ತಳದೊಳ್ ಗುಣಾರ್ಣವಂ || ೭೬
ಪ್ರವೇಶಮಾಡಹೇಳಿದನು. ವ|| ಹಾಗೆ ಎಲ್ಲೆಯನ್ನು ಮೀರಲು ಯೋಚಿಸಿದ ಎರಡು ಮಹಾಸಮುದ್ರಗಳ ಮಧ್ಯೆ ಕುಲಪರ್ವತದಂತಿದ್ದ ಅಶ್ವತ್ಥಾಮನನ್ನು ನೋಡಿ ಇಬ್ಬರೂ ಎರಡು ಪಕ್ಕಕ್ಕೆ ಸರಿದು ನಿಂತರು. ೭೪. ಎಳೆಯ ಗರಿಕೆಯ ಬಣ್ಣದಿಂದ ವಿಶೇಷವಾಗಿ ಒಪ್ಪಿ ತೋರುವ ಚಿನ್ನದ ಕವಚ ಪ್ರಕಾಶಮಾನವಾದ ಬಿಲ್ಲು ಮೈಗೆ ಸೇರಿಕೊಂಡಿದ್ದ ಬತ್ತಳಿಕೆ ಇವು ಕಣ್ಣುಗಳಿಗೆ ಮನೋಹರವಾಗಿರಲು ಹರಿಗನು ಮುಂದುಗಡೆ ಬಂದು ನಿಂತನು. ವ|| ಆಗ ದ್ರೋಣನು ಶಬ್ದಮಾಡುತ್ತಿದ್ದ ಜನಗಳ ಕಳಕಳದ್ವನಿಯನ್ನೂ ಮೊಳಗುತ್ತಿದ್ದ ವಾದ್ಯಗಳನ್ನೂ ನಿಲ್ಲಿಸಿ ೭೫, ವಿಖ್ಯಾತಯಶಸ್ಸುಳ್ಳವನೂ ವೈರಿಗಜ ಘಟಾವಿಘಟನೂ (ಶತ್ರುಗಳೆಂಬ ಆನೆಗಳನ್ನು ಸೀಳುವ ಪರಾಕ್ರಮಿಯಾದ) ಆದ ಗುಣಾರ್ಣವನು ಇವನು. ಈತನ ಸಾಹಸ ಹೊಲಿಕೆಗೆ ಮೀರಿದುದು ಇದನ್ನು ನೋಡಿ ಎಂದು ಆ ಗುಂಪಿಗೆ ತಿಳಿಸಿದನು. ವll ಆ ಸಂದರ್ಭದಲ್ಲಿ-೭೬. ಅರ್ಜುನನು ಸ್ವಲ್ಪ ಮಟ್ಟಿಗೆ ಬಿಲ್ಲನ್ನು ಶಬ್ದಮಾಡಿಸಿದರೂ ಬ್ರಹ್ಮಾಂಡವು ಒಡೆದುಹೋಗುತ್ತದೆ; ಬ್ರಹ್ಮನು ಉತ್ಸಾಹಶೂನ್ಯನಾಗುತ್ತಾನೆ. ಅಷ್ಟನ್ನೇಕೆ ಮಾಡುವುದು ಎಂದು ಅವನು ಬಹುನಿಧಾನ ಟಂಕಾರಮಾಡಿದಾಗ ಒಂದು ಬಾಣವು ಮತ್ತೊಂದು ಬಾಣವನ್ನೂ ಹೆರುತ್ತಿದೆಯೋ ಎಂಬ ಸಂದೇಹವನ್ನುಂಟುಮಾಡುತ್ತ ಗುಣಾರ್ಣವನು ಆಕಾಶಪ್ರದೇಶದಲ್ಲಿ ಆ ದಿನ ಅಸ್ತಗಳ ಸಮೂಹದಿಂದ ಸ್ವಲ್ಪವೂ ಸಾವಕಾಶ ಮಾಡದೆ ಒಂದು (ಬಾಣದ)