________________
೧೫೬ | ಪಂಪಭಾರತಂ ದ್ವಂದ್ವಹಸ್ತ ಪ್ರತೀಪ ಸುಪ್ರತೀಪ ಪ್ರಹಸ್ತ ಪ್ರತಾಪ ಪ್ರಮದ ಸದ್ದಾಹುಗಳೇ ಮೊದಲಾಗಿ ನೂರ್ವರುಂ ಬಂದುಕಂ ಗದೆಯೊಳ್ ಬಿಲ್ಲೊ ಗಜದೊಳ್
ಕುದುರೆಯೊಳಂ ರಥದೊಳಸ್ತಕೌಶಲದ ಬೆಡಂ | ಗೊದವಿರೆ ತೋಳದರವರೂ
ರ್ಮೊದ ಜನಂ ಪೊಗಳ ನೆಗಳ ಜಳನಿಧಿ ನಿನದಂ | 20 ವl ಅಂತವರಿಂ ಬಚಿಯಂಕಂ|| ಆದ ಮುಳಿಸಿಂದಮಾಗಳ - ಮೊದುವ ಬಗೆ ಬಳೆಯ ಪಿಡಿದ ಗದೆಗಳಿನಿಳಿಪಂ |
ತಾದುದು ಸುಯೋಧನೊಗ್ರ ವ್ಯ, ಕೋದರರೊರ್ಮೊದಲೆ ಶಿಖರಮುರಡಗಮಂ ||
: ೭೨ ವll ಅಂತಿರ್ವರುಮೊರ್ವರೊರ್ವರೊಳ್ ಸೆಣಸಿ ಬಹಪ್ರಯೋಗ ಗದಾ ಕೌಶಲಮಂ ತೋಜಲೆಂದುಕಂ ಗೆಡವಚರ್ವರ್ ಮನಗೊಂ
ಡೊಡನೊಡನೋರಂತು ತಗುಳು ಝೇಂಕರಿಸಿದೊಡೆ | ಊಡಗಾಗೆ ಮೋದಲೆಂದಿ ರ್ದಡೆಯೊಳ್ ಗುರು ತನ್ನ ಮಗನನೆಡವುಗವೇಲ್ಡಂ || ೭೩
ಸುಹಸ್ತ, ದೃಢಹಸ್ತ, ಪ್ರಮಾಥಿ, ದೀರ್ಘಬಾಹು, ಮಹಾಬಾಹು, ಪ್ರತಿಮ, ಸುಪ್ರತಿಮ, ಸಪ್ರಮಾಥಿ, ದುರ್ಧಷ್ರಣ, ದುಷ್ಪರಾಜಯ, ಮಿತ್ರ, ಉಪಮಿತ್ರ, ಚೌಳೋಪ, ದ್ವಂದ್ವಹಸ್ಯ, ಪ್ರತೀಪ, ಪಹಸ್ತ, ಪ್ರತಾಪ, ಪ್ರಮದ, ಸಾಹುಗಳೇ ಮೊದಲಾದ ನೂರ್ವರೂ ಬಂದು - ೭೧. ಜನರೆಲ್ಲರೂ ಸಮುದ್ರಧನಿಯಂತೆ ಗಟ್ಟಿಯಾಗಿ ಒಟ್ಟಿಗೆ ಹೊಗಳುವ ಹಾಗೆ ಗದೆಯಲ್ಲಿಯೂ ಬಿಲ್ಲಿನಲ್ಲಿಯೂ ಆನೆಯಲ್ಲಿಯೂ ಕುದುರೆಯಲ್ಲಿಯೂ ರಥದಲ್ಲಿಯೂ ಅಸ್ತಕೌಶಲದಲ್ಲಿಯೂ ಬೆಡಗುತೋರುವಂತೆ ಜಾಣೆಯನ್ನು ಪ್ರದರ್ಶಿಸಿದರು. ವl ಅವರಾದ ಮೇಲೆ ೭೨. ಹೆಚ್ಚಿದ ಕೋಪವೂ ಹೊಡೆಯಬೇಕೆಂಬ ಅಭಿಲಾಷೆಯೂ ಬೆಳೆಯಲಾಗಿ ದುರ್ಯೋಧನನೂ ಭೀಮನೂ ಏಕಕಾಲದಲ್ಲಿ ಹಿಡಿದ ಗದೆಗಳು ಶಿಖರದಿಂದ ಕೂಡಿದ ಎರಡು ಬೆಟ್ಟಗಳನ್ನು ಒಟ್ಟಿಗೆ ಇಳಿಸಿದಂತಾದುವು. ವ|| ಅವರಿಬ್ಬರೂ ಪರಸ್ಪರ ಸ್ಪರ್ಧಿಸಿ ಅನೇಕ ಪ್ರಯೋಗಗಳಿಂದ ಕೂಡಿದ ಗದಾಕೌಶಲವನ್ನು ತೋರಿಸಿದರು. ೭೩. ಸಮಾನಬಲರಾದ ಇಬ್ಬರೂ ದೃಢಚಿತ್ತರಾಗಿ ಜೊತೆಜೊತೆಯಲ್ಲಿಯೇ ಬೆನ್ನಟ್ಟಿಕೊಂಡು ಝೇಂಕರಿಸಿ (ಪರಸ್ಪರ ಅವರಿಬ್ಬರ ಶರೀರವು) (ಎಲಬು ಮಾಂಸವಾಗಿ) ಜಜ್ಜಿಹೋಗುವ ಹಾಗೆ ಹೊಡೆಯಬೇಕೆಂದಿದ್ದ ಸಮಯದಲ್ಲಿ ಗುರುವಾದ ದ್ರೋಣನು (ಅವರಿಬ್ಬರನ್ನು ಬೇರ್ಪಡಿಸುವುದಕ್ಕಾಗಿ ತನ್ನ ಮಗನಾದ ಅಶ್ವತ್ಥಾಮನನ್ನು ಮಧ್ಯೆ