________________
ಕoll
ದ್ವಿತೀಯಾಶ್ವಾಸಂ | ೧೫೩
ಸಿರಿಮೆಯೊಳಗಂದಜೆವಿರ ನೆರವಿಯೊಳಾರವರೋರ್ಮ ಕಂಡರನಟಿಯ ರಿದಮ್ಮಂ ಬಡ ಪಾರ್ವರ
ನರಸರ ನೀಮಾಗಳವಿರಟೆಯಿರೋ ಪೇಟೆಂ ||
ವ|| ಎಂದು ಸಾಯ ಸರಸಂ ನುಡಿದು ಮತ್ತಮಿಂತೆಂದಂ
ಕಂ ।। ಆದಿ ಕ್ಷತ್ರಿಯರೇ ನೀ
ಮಾದಿತ್ಯನನಿಳಿದ ತೇಜರಿರ್ ಪಾಳ್ವನ ಕಾಲ್ | ಮೋದ ನಡುತಲೆಯಲಿರ್ಪುದು
ಮಾದುದು ನಿಮಗೆಂದು ನುಡಿದು ಕಾಯ್ದೆನೊದೆದು ||
と&
とら
ವ| ಒದೆದು ನಿನ್ನನಿನಿತು ಪರಿಭವಂಬಡಿಸಿದುದು ಸಾಲ್ಕು ನಿನ್ನಂ ಕೊಲಲಾಗದು ಕೊಂದೊಡೆ ಮೇಲಪ್ಪ ಪಗೆಗಂಜಿ ಕೊಂದಂತಾಗಿರ್ಕುಮೆಂದು ಕಟ್ಟಿದ ಕಟ್ಟುಗಳೆಲ್ಲಮಂ ತಾನೆ ಬಿಟ್ಟು ಕಳೆದು ಪೋಗೆಂಬುದುಂ ದ್ರುಪದಂ ಪರಿಭವಾನಳನಳವಲ್ಲದಳುರೆ ನಿನ್ನಂ ಕೊಲ್ವನ್ನನೊರ್ವ ಮಗನುಮಂ ವಿಕ್ರಮಾರ್ಜುನಂಗೆ ಪೆಂಡತಿಯಪ್ಪನ್ನಳೊರ್ವ ಮಗಳುಮಂ ಪಡದಲ್ಲದಿರೆನೆಂದು ಮಹಾ ಪ್ರತಿಜ್ಞಾರೂಢನಾಗಿ ಪೋದನಿತ್ತ ಭಾರದ್ವಾಜಂ ಪಾಂಡವ ಕೌರವರ್ಕಳ ಮಯೊಳ ವಿದ್ಯೆಯಂ ನೆತೆಯ ಸಂಕ್ರಮಿಸಿದ ತನ್ನ ವಿದ್ಯಾಮಹಿಮೆಯಂ ಮೆಯ ಬಾಹ್ಯಕ ಭೂರಿಶ್ರವಸೋಮದತ್ತ ಗಾಂಗೇಯ ಧೃತರಾಷ್ಟ್ರ ವಿದುರರ್ಕನಿಂತೆಂದಂ
ಮೇಲೆ ತನ್ನ ಕಾಲನ್ನು ಗರ್ವದಿಂದ ನೀಡಿ-೬೩. 'ಐಶ್ವರ್ಯ ಸ್ಥಿತಿಯಲ್ಲಿ ಅಂದು ನೀವು ನಮ್ಮನ್ನು ತಿಳಿಯುತ್ತೀರಾ (ಗುರುತಿಸುತ್ತೀರಾ), ಒಂದು ಸಲ ಗುಂಪಿನಲ್ಲಿ ಕಂಡವರನ್ನೂ ಯಾರು ತಾನೆ ಗುರುತಿಸಬಲ್ಲರು. ಬಡಬ್ರಾಹ್ಮಣರಾದ ನಮ್ಮನ್ನೂ ಗುರುತಿಸಲಸಾಧ್ಯ. ರಾಜರೇ ಈಗಲಾದರೂ ಗುರುತಿಸುತ್ತೀರೋ ಇಲ್ಲವೋ ಹೇಳಿ', ವ! ಎಂದು ಪ್ರಾಣಹೋಗುವಷ್ಟು ಪರಿಹಾಸ್ಯ ಮಾಡಿ ಪುನಃ ಹೀಗೆಂದನು-೬೪, 'ನೀವು ಆದಿಕ್ಷತ್ರಿಯರಾಗಿದ್ದೀರಿ; ಸೂರ್ಯನನ್ನೂ ತಿರಸ್ಕರಿಸುವ ತೇಜಸ್ಸುಳ್ಳವರಾಗಿದ್ದೀರಿ. ಹಾರುವನು ಒದ್ದ ಕಾಲು ನಡುನೆತ್ತಿಯಲ್ಲಿರುವದಾಯಿತಲ್ಲಾ' ಎಂದು ಹೇಳಿ ಕೋಪದಿಂದ ಒದೆದನು-ವ ಒದ್ದು 'ನಿನ್ನನ್ನು ಇಷ್ಟು ಅವಮಾನಪಡಿಸಿದುದು ಸಾಕು. ನಿನ್ನನ್ನು ಕೊಲ್ಲಬಾರದು. ಕೊಂದರೆ ಹೆದರಿ ತನಗಿಂತ ಮೇಲಾದ ಶತ್ರುವನ್ನೂ ಕೊಂದಂತಾಗುತ್ತದೆ' ಎಂದು ಕಟ್ಟಿದ ಕಟ್ಟುಗಳೆಲ್ಲವನ್ನೂ ತಾನೇ ಬಿಚ್ಚಿಕಳೆದು ಹೋಗು ಎನ್ನಲು ದ್ರುಪದನು ಅವಮಾನವೆಂಬ ಅಗ್ನಿಯು ವಿಶೇಷವಾಗಿ ಸುಡಲು 'ನಿನ್ನನ್ನೂ ಕೊಲ್ಲುವಂತಹ ಮಗನನ್ನೂ ವಿಕ್ರಮಾರ್ಜುನನಿಗೆ ಹೆಂಡತಿಯಾಗುವಂತಹ ಒಬ್ಬ ಮಗಳನ್ನೂ ಪಡೆಯದಿರುವುದಿಲ್ಲ ಎಂದು ದೊಡ್ಡ ಪ್ರತಿಜ್ಞೆಯನ್ನೂ ಮಾಡಿಹೋದನು. ಈ ಕಡೆ ಭಾರದ್ವಾಜನು ಪಾಂಡವ ಕೌರವರುಗಳ ಶರೀರದಲ್ಲಿ ವಿದ್ಯೆಯನ್ನು ಪೂರ್ಣವಾಗಿ ಅಳವಡಿಸಿದ ತನ್ನ ಮಹಿಮೆಯನ್ನು ಪ್ರಕಾಶಪಡಿಸುವುದಕ್ಕಾಗಿ ಬಾಹೀಕ, ಭೂರಿಶ್ರವ, ಸೋಮದತ್ತ, ಭೀಷ್ಮ, ಧೃತರಾಷ್ಟ್ರ, ವಿದುರರಿಗೆ ಹೀಗೆಂದು ಹೇಳಿದನು.
"