________________
೧೫೨) ಪಂಪಭಾರತಂ
ವ|| ಅಂತು ಪೊಗಟ್ಟು ತನ್ನ ಪಗೆವನಪ್ಪ ದ್ರುಪದನನೀತನಮೋಘಂ ಗೆಲಲ್ ನೆಗು ಮಂದು ನಿಶ್ಚಿಸಿಚಂ|| ಅಣುಗಿನೊಳನ್ನ ಚಟ್ಟರೊಳಗೀತನೆ ಜೆಟ್ಟಿಗನೆಂದು ವಿದ್ವಯಂ .
ಗುಣಕುಗೊಂಡು ಕೊಟ್ಟೆನಗೆ ಸಂತಸಮಪಿನಮಾವ ನಿನ್ನ ದ | ಕ್ಷಿಣೆಯದು ಬೇಗಮಾ ದ್ರುಪದನಂ ಗಡ ಕೋಡಗಗಟ್ಟುಗಟ್ಟಿ ತಂ
ದಣಿಯರನೊಪ್ಪಿಸಿಂತಿದನೆ ಬೇಡಿದನಾಂ ಪರಸೈನ್ಯಭೈರವಾ || ೬೧ ವ|| ಎಂಬುದುಮಿಾ ಬೆಸನದಾವುದು ಗಹನಮಂದು ಪೂಣ್ಣು ಪೋಗಿಮll ಒಡವಂದಂಕದ ಕೌರವ ದ್ರುಪದನಂಟಿಂಗೆ ಮಯೊಡ್ಡದೊ
ಹೊಡೆದೋಡುತ್ತಿರೆ ಸೂಸೆ ಬೀಟ್ಟಿ ತಲೆಗಳ ಸೂಚ್ಚಿಟ್ಟನಾಗಳ ಜವಂ | ಪಿಡಿದೀಡಾಡುವ ಮಾಚಿಯಂತೆ ಪಲರಂ ಕೊಂದಿಕ್ಕಿ ಮಯುಟಿವ |
ದಡೆಯೊಳ್ ಮಾಣದುರುಳ್ಳಿ ಕಟ್ಟ ರಿಪುವಂ ಮುಂದಿಕ್ಕಿದಂ ದ್ರೋಣನಾ || ೬೨
ವ|| ಆಗಳಾ ಕುಂಭಸಂಭವಂ ಪರಾಕ್ರಮಧವಳನ ಪರಾಕ್ರಮಕ್ಕೆ ಮೆಚ್ಚಿ ಕದಂಪಂ ಕರ್ಚಿ ದ್ರುಪದನಂ ತನ್ನ ಮಂಚದ ಕಾಲೊಳ ಕಟ್ಟವೇಟ್ಟು ತಲೆಯ ಮೇಲೆ ಕಾಲನವಷ್ಟಂಭದಿಂ ನೀಡಿ
ಸಾಯುವ ಹಾಗೆ ಬಾಣ ಪ್ರಯೋಗಮಾಡಿಸಿಯೂ ನೋಡಿ 'ಅರೆ, ಹೂ, ಅಜ, ಭಾಪು, ಎಂಬ ಮಚ್ಚಿಕೆಯ ಮಾತುಗಳಿಂದ ಗುರುವು ಅರ್ಜುನನನ್ನು ಶ್ಲಾಘಿಸಿದನು. ವ|| ಹಾಗೆ ಹೊಗಳಿ ತನ್ನ ಶತ್ರುವಾದ ದ್ರುಪದನನ್ನು ಈತನು ಸಂಪೂರ್ಣವಾಗಿ ಗೆಲ್ಲಲು ಸಮರ್ಥನಾಗುತ್ತಾನೆಂದು ನಿಷ್ಕರ್ಷಿಸಿ ಅವನನ್ನು ಕುರಿತು ೬೧. 'ಅರ್ಜುನಾ ಭಕ್ತಿಯುಳ್ಳ ನನ್ನ ಶಿಷ್ಯರಲ್ಲಿ ಇವನೇ ಪರಾಕ್ರಮಶಾಲಿ ಎಂದು ವಿದ್ಯೆಯನ್ನು ಪ್ರೀತಿಯಿಂದ ದಾನಮಾಡಿದ ನನಗೆ ಸಂತೋಷವಾಗುವ ಹಾಗೆ ನೀನು ಕೊಡುವ ಗುರುದಕ್ಷಿಣೆಯಾಗಿ ಜಾಗ್ರತೆಯಾಗಿ ಆ ದ್ರುಪದನನ್ನು ಕೋಡಗಗಟ್ಟು ಕಟ್ಟಿ ತಂದು ಅತಿಶಯವಾದ ರೀತಿಯಲ್ಲಿ ಒಪ್ಪಿಸು. ಎಲೈ ಪರಸೈನ್ಯಭೈರವನೇ ಇದನ್ನೇ ನಾನು ನಿನ್ನಿಂದ ಬೇಡಿದುದು, ವll ಎನ್ನಲು ಈ ಆಜ್ಞಾಕಾರ್ಯ ಏನು ಮಹಾದೊಡ್ಡದು ಎಂದು ಪ್ರತಿಜ್ಞೆಮಾಡಿ ಹೋಗಿ-೬೨. ಒಡನೆ ಬಂದ ಪ್ರಸಿದ್ದರಾದ ಕೌರವರು ದ್ರುಪದನ ಬಾಣದ ಪೆಟ್ಟಿಗೆ ಶರೀರವನ್ನು ಒಡ್ಡಲಾರದೆ ಚದುರಿ ಓಡುತ್ತಿರಲು, ಬೀಳುವ ತಲೆಗಳು ಚದುರಾಡುತ್ತಿರಲು ತನ್ನ ಸರದಿಯನ್ನು ಪಡೆದ ಅರ್ಜುನನು ಹಲಬರನ್ನು ಯಮನು ಹಿಡಿದು ಬಿಸಾಡುವ ರೀತಿಯಲ್ಲಿ ಸಾಯಿಸಿ, ಶರೀರವನ್ನು ಮುಟ್ಟುವಷ್ಟು ಹತ್ತಿರಕ್ಕೆ ಬಂದವರನ್ನೂ ಉರುಳಿಸಿ ಶತ್ರುವನ್ನು ಕಟ್ಟಿತಂದು ದ್ರೋಣನ ಮುಂದೆ ಇಟ್ಟನು. ವ|| ಆಗ ದ್ರೋಣನು ಪರಾಕ್ರಮಧವಳನಾದ ಅರ್ಜುನನ ಶೌರ್ಯಕ್ಕೆ ಸಂತೋಷಪಟ್ಟು ಕೆನ್ನೆಗೆ ಮುತ್ತಿಟ್ಟು ದ್ರುಪದನನ್ನು ತನ್ನ ಮಂಚದ ಕಾಲಿಗೆ ಕಟ್ಟಿ ಹೇಳಿ ಅವನ ತಲೆಯ