________________
೧೫೪) ಪಂಪಭಾರತಂ ಕ೦ll - ನೆಯ ಧನುರ್ವಿದ್ಯೆಯ ಕ
ಸ್ಟೇಜ'ವಿನೆಗಂ ಕಲ್ಕ ನಿಮ್ಮ ಮಕ್ಕಳ ಮೆಯೊಳ್ || ಮಣಿದಪ್ಪೆನೆನ್ನ ಎದೆಯ ನದೊಯ್ಯನೆ ನೆರೆದು ನೋಟ್ಟುದನಿಬರುಮಾರ್ಗ ||
೬೫
ವ|| ಎಂದೂಡಂತೆಗೆಯ್ಮೆಂದನಿಬರುಮೊಡಂಬಟ್ಟು ಪೊವೊಲೊಳುತ್ತರ ದಿಶಾಭಾಗದೊಳ್ ಸಮಚತುರಸ್ರಮಾಗೆ ನೆಲನನಳೆದು ಕಲ್ಲಂ ಪುಲ್ಲುಮಂ ಸೋದಿಸಿ ಶುಭದಿನ ಶುಭಮುಹೂರ್ತದೊಳ್
ಕಂ|| ಗಟ್ಟಿಸಿ ಸಿಂಧುರದೊಳ್ ನೆಲ
ಗಟ್ಟಿಸಿ ಚೆಂಬೊನ್ನ ನೆಲೆಯ ಚೌಪಳಿಗೆಗಳೊಳ್ | .. ಕಟ್ಟಿಸಿ ಪಬಯಿಗೆಗಳನಳು
ವಟ್ಟರೆ ಬಿಯಮಲ್ಲಿ ಮೊಲಗೆ ಪಲವುಂ ಪಳೆಗಳ 1.
.
೬೬
ವll ಅಂತು ಸಮದ ವ್ಯಾಯಾಮ ರಂಗಕ್ಕೆ ಗಾಂಗೇಯ ಧೃತರಾಷ್ಟ್ರ ವಿದುರ ಸೋಮದತ್ತ ಬಾತ್ಮೀಕ ಭೂರಿಶ್ರವಾದಿ ಕುಲವೃದ್ಧರುಂ ಕುಂತಿ ಗಾಂಧಾರಿಗಳುಂ ವೆರಸು ಬಂದು ಕುಳ್ಳಿರೆ
ಕಂt
ಅರಸಿಯರನಣುಗರಂ ಬೇ ಆರುಮಂ ಮೊನೆಗಾರಂ ಗೀತರನಿಂಬಾ ಗಿರೆ ಚಪಳಿಗೆಗಳೊಳ್ ಕು ೯ರಿಸಿದರೊಡನೆಸೆಯೆ ನೆರೆದ ಪುರಜನ ಸಹಿತಂ ||
೬೭
೬೫. 'ಬಿಲ್ವಿದ್ಯೆಯೇ ಆವಿರ್ಭಾವವಾಗುವ ಹಾಗೆ ಸಂಪೂರ್ಣವಾಗಿ ಕಲಿತುಕೊಂಡಿರುವ ನಿಮ್ಮ ಮಕ್ಕಳ ಶರೀರದಲ್ಲಿ ನನ್ನ ವಿದ್ಯೆಯನ್ನು ಪ್ರಕಾಶಪಡಿಸುತ್ತೇನೆ. ಈಗ ಎಲ್ಲರೂ ಒಟ್ಟಾಗಿ ಸೇರಿ ಪ್ರತ್ಯಕ್ಷವಾಗಿ ತಿಳಿದು ನೋಡಬೇಕು'. ವ|| ಎಂದು ಹೇಳಲಾಗಿ ಹಾಗೆಯೇ ಮಾಡೋಣವೆಂದು ಎಲ್ಲರೂ ಒಪ್ಪಿ ಪಟ್ಟಣದ ಹೊರಗಿನ ಉತ್ತರದಿಗ್ಯಾಗದಲ್ಲಿ ಚಚ್ಚಕವಾದ ಭೂಮಿಯನ್ನು ಅಳೆದು ಕಲ್ಲು ಹುಲ್ಲನ್ನು ಶೋಧಿಸಿ ತೆಗೆದು ಶುಭದಿನ ಶುಭಮುಹೂರ್ತದಲ್ಲಿ ೬೬. ನೆಲವನ್ನು ಚಂದ್ರಕಾವಿಯಿಂದ ಧಮ್ಮಸ್ಸುಮಾಡಿ ಅಪರಂಜಿಯಿಂದ ಮಾಡಿದ ಮನೆಗಳ ತೊಟ್ಟಿಗಳಲ್ಲಿ ಬಾವುಟಗಳನ್ನು ಕಟ್ಟಿಸಿ ಸೂಕ್ತ ವೆಚ್ಚದಿಂದ ಹಲವು ವಾದ್ಯಗಳು ಮೊಳಗುತ್ತಿರಲು ವ|| ಹಾಗೆ ನಿರ್ಮಿಸಿದ ವ್ಯಾಯಾಮರಂಗಕ್ಕೆ ಭೀಷ್ಮ ದೃತರಾಷ್ಟ್ರ, ವಿದುರ, ಸೋಮದತ್ತ, ಬಾಹೀಕ, ಭೂರಿಶ್ರವರೇ ಮೊದಲಾದ ಕುಲವೃದ್ಧರು ಕುಂತಿಗಾಂಧಾರಿಯರೊಡನೆ ಬಂದು ಕುಳಿತರು. ೬೭. ರಾಣಿಯರನ್ನೂ ಮಕ್ಕಳನ್ನೂ ಬೇಕಾದವರನ್ನೂ ಯೋಧರನ್ನೂ ಗಣ್ಯರನ್ನೂ ಪಟ್ಟಣಿಗರೊಡನೆ ಶೋಭಿಸುವ ಹಾಗೆ ಒಟ್ಟಿಗೆ ಹಜಾರದ ಮೇಲುಭಾಗದಲ್ಲಿ ಆಕರ್ಷಕವಾಗಿರುವ ರೀತಿಯಲ್ಲಿ ಕುಳ್ಳಿರಿಸಿದರು.