________________
೧೪೬ / ಪಂಪಭಾರತಂ
ವ ಅಂತು ವಲ್ಕಲಾವೃತ ಕಟಿತಟನುವಾಗಿರ್ದ ಜಟಾಕಲಾಪನುವಾಗಿ ತಪೋವನಕ್ಕೆ ಪೋಪ ಭಾರ್ಗವಂ `ದ್ರವ್ಯಾರ್ಥಿಯಾಗಿ ಬಂದ ಕುಂಭಸಂಭವನ ಕಂಡು ಕನಕ ಪಾತ್ರಕ್ಕುಪಾಯಮಿಲ್ಲಪುದಂ ಮೃತ್ತಾತ್ರದೊಳರ್ಘಮೆತ್ತಿ ಪೂಜಿಸಿ
ಚಂ!! ಒಡವೆಯನರ್ಥಿಗಿತ್ತನವನೀತಳಮಂ ಗುರುಗಿತ್ತೆಗಳೊಂ ದಡಕೆಯುಮಿಲ್ಲ ಕೈಯೊಳೆರೆದಂ ಶ್ರುತಪಾರಗನೆಂತು ಸಂತಸಂ ಬಡಿಸುವೆನಿನ್ನಿದೊಂದು ಧನುವಿರ್ದುದು ದಿವ್ಯಶರಾಳಿಯಿರ್ದುದಿ ಲೊಡಮೆ ಸಮಂತು ಪೇಟೆವಳಾವುದನೀವುದೂ ಕುಂಭಸಂಭವಾ || ೪೬ ವ|| ಎಂಬುದುಂ ದ್ರೋಣನೆನಗೆ ವಿದ್ಯಾಧನಮೆ ಧನಮಪ್ಪುದಂ ದಿವ್ಯಾಸ್ತ್ರಂಗಳಂ ದಯೆಗೆಯ್ದುದೆನೆ ವಾರಣ ವಾಯವ್ಯಾಗ್ನೆಯ ಪೌರಂದರಾದಿ ಪ್ರಧಾನಾಸಂಗಳು ಕುಡೆ ಕೊಂಡು ಪರಶುರಾಮನಂ ಬೀಳ್ಕೊಂಡು ತನ್ನೊಡನಾಡಿಯಪ್ಪ ಕೆಳೆಯಂ ದ್ರುಪದಂ ಛತ್ರಾವತಿಯೊಳರಸು ಗೆಯ್ದಪನೆಂದು ಕೇಳ್ತಾ ಪೋಲೆವಂದು ದ್ರುಪದನರಮನೆಯ ಬಾಗಿಲೊಳ್ ನಿಂದು ಪಡಿಯನಂ ಕರೆದು ನಿಮ್ಮೊಡನಾಡಿದ ಕೆಳೆಯಂ ದ್ರೋಣನೆಂಬ ಪಾರ್ವಂ ಬಂದನೆಂದು ನಿಮ್ಮರಸಂಗತಿಯ ಪೇಟೆ೦ಬುದುಮಾತನಾ ಮಾಯೊಳ ಬಂದ ಪುವುದುಂ ದ್ರುಪದಂ ರಾಜ್ಯಮದಿರಾ ಮದೋನತನುಂ ಗರ್ವಗ್ರಹ ವ್ಯಗ್ರಚಿತ್ತನುವಾಗಿ ಮೇಗಿಲ್ಲದೆ~
ಯಜ್ಞವನ್ನು ಮಾಡಿ ಕಶ್ಯಪ ಪ್ರಜಾಪತಿಯೆಂಬ ಬ್ರಹ್ಮಋಷಿಗೆ ಸಮುದ್ರದಿಂದ ಸುತ್ತುವರಿಯಲ್ಪಟ್ಟ ಅಖಂಡಭೂಮಂಡಲವನ್ನು ಒಂದುಸಾಮಾನ್ಯವಾದ ಗ್ರಾಮವನ್ನು ಕೊಡುವಂತೆ ಗುರುದಕ್ಷಿಣೆಯಾಗಿ ಕೊಟ್ಟನು. ವ| ಈಗ ನಾರುಮಡಿಯಿಂದ ಕೂಡಿದ ನಡುವನ್ನುಳ್ಳವನೂ ಜಟಾಸಮೂಹದಿಂದ ಕೂಡಿದವನೂ ಆದ ಆ ಪರಶುರಾಮನು ದ್ರವ್ಯವನ್ನು ಬೇಡುವುದಕ್ಕಾಗಿ ಬಂದ ದ್ರೋಣನನ್ನು ಚಿನ್ನದ ಪಾತ್ರೆಗಳಿಲ್ಲದುದರಿಂದ ಮಣ್ಣಿನ ಪಾತ್ರೆಯಲ್ಲಿಯೇ ಅರ್ಥ್ಯವನ್ನು ಕೊಟ್ಟು ಪೂಜಿಸಿದನು. ೪೬. ನನ್ನ ಪದಾರ್ಥಗಳನ್ನೆಲ್ಲ ಬೇಡಿದವರಿಗೆ ಕೊಟ್ಟೆನು. ಭೂಮಂಡಲವನ್ನು ಗುರುಗಳಿಗೆ ಕೊಟ್ಟೆನು. ಈಗ ನನ್ನಲ್ಲಿ ಒಂದಡಕೆಯೂ ಇಲ್ಲ. ಬೇಡುವವನಾದರೋ ವೇದಪಾರಂಗತ. ಹೇಗೆ ಅವನನ್ನು ಸಂತೋಷಪಡಿಸಲಿ? 'ಎಲೈ ದ್ರೋಣನೆ ಈಗ ಇದೊಂದು ಬಿಲ್ಲೂ ಇದೊಂದು ದಿವ್ಯಾಸ್ತ್ರಗಳ ಸಮೂಹವೂ ಇದೆ. ಬೇರೆ ಆಸ್ತಿಯಿಲ್ಲ. ಇವುಗಳಲ್ಲಿ ನಿನಗೆ ಯಾವುದನ್ನು ಕೊಡಲಿ? ಚೆನ್ನಾಗಿ ಯೋಚಿಸಿ ಹೇಳು. ವ|| ಎಂಬುದಾಗಿ ಹೇಳಲು ದ್ರೋಣನು ನನಗೆ ವಿದ್ಯಾಧನವೇ ಧನವಾಗಿರುವುದರಿಂದ ಆ ದಿವ್ಯಾಸ್ತ್ರಗಳನ್ನು ದಯಪಾಲಿಸಬೇಕು ಎನ್ನಲು ವಾರುಣ, ವಾಯುವ್ಯ, ಆಗ್ನೆಯ, ಐಂದ್ರಾದಿ ಅಸ್ತ್ರಗಳನ್ನು ಕೊಡಲು ಅದನ್ನು ತೆಗೆದುಕೊಂಡು ಪರಶುರಾಮನಿಂದ ಅಪ್ಪಣೆ ಪಡೆದು ತನ್ನ ಒಡನಾಡಿಯೂ ಸ್ನೇಹಿತನೂ ಆದ ದ್ರುಪದನು ಛತ್ರಾವತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾನೆಂದು ಕೇಳಿ ಆ ಪಟ್ಟಣಕ್ಕೆ ಬಂದು ದ್ರುಪದನರಮನೆಯ ಬಾಗಿಲಲ್ಲಿ ನಿಂತು ಬಾಗಿಲು ಕಾಯುವವನನ್ನು ಕರೆದು ನಿಮ್ಮಜೊತೆಯಲ್ಲಾಟವಾಡಿದ ಸ್ನೇಹಿತನಾದ ದ್ರೋಣನೆಂಬ ಬ್ರಾಹ್ಮಣನು ಬಂದಿದ್ದಾನೆಂದು ನಿಮ್ಮ ರಾಜನಿಗೆ ತಿಳಿಯಪಡಿಸು ಎಂದನು. ಅವನು ಆ ರೀತಿಯಲ್ಲಿಯೇ ಬಂದು ತಿಳಿಸಲಾಗಿ ದ್ರುಪದನು ರಾಜ್ಯವೆಂಬ