________________
ಕಂ
ದ್ವಿತೀಯಾಶ್ವಾಸಂ | ೧೪೭
ಅಂತೆಂಬನಾರ್ಗ ಒರಿದುಂ
ಭ್ರಾಂತು ದಲೇಂ ದ್ರೋಣನೆಂಬನೇಂ ಪಾರ್ವನೆ ಪೇ | ಅಂತನಗೆ ಕಳೆಯನೇ ನೂಂ ಕಂತಪ್ಪನನಡೆಯೆನೆಂದು ಸಭೆಯೊಳ್ ನುಡಿದಂ ||
42
ವ|| ಅಂತು ನುಡಿದುದಂ ಪಡಿಯ೦ ಬಂದಾ ಮಾಯೊಳಪ ದ್ರೋಣನೊತ್ತಂಬದಿಂದೊಳಗಂ ಪೊಕ್ಕು ದ್ರುಪದನು ಕಂಡು
ಚಂ || ಅಜೆಯಿರೆ ನೀಮುಮಾಮುನೊಡನೊದಿದವೆಂಬುದನಣ್ಣ ನಿನ್ನನಾ ನಡೆಯನದಲ್ಲಿ ಕಂಡಯೊ ಮಹೀಪತಿಗಂ ದ್ವಿಜವಂಶಜಂಗಮೇ | ತದ ಕೆಳೆಯಿಂತು ನಾಣಿಲಿಗರಪ್ಪರೆ ಮಾನಸರೆಂಬ ಮಾತುಗಳ ನೆಗೊಳ ಕುಂಭಸಂಭವನನಾ ದ್ರುಪದಂ ಕಡು ಸಿಗ್ಗು ಮಾಡಿದಂ || ೪೮
ವ|| ಅಂತು ಮಾಡಿದುದುಮಲ್ಲದೀ ನಾಣಿಲಿ ಪಾರ್ವನನೆದು ಕಳೆಯಿಮೆಂಬುದುಂ ದ್ರೋಣ ನಿಂತಂದಂ
ಚಂ || ನುಡಿ ತಡವಪ್ಪುದೊಂದು ಮೊಗದೊಳ್ ಮುಲುಕಂ ದೊರೆಕೊಳ್ಳುದೊಂದು ನಾ ಹೈಡೆಗುಡದಿರ್ಪುದೊಂದು ನುಡಿಗಳ ಮೊಯಂ ಮಯಿಪುದೊಂದು ಕ | ಳುಡಿದವರಂದಮಿಂತು ಸಿರಿ ಸಾರ್ತರ ಸಾರ್ವುದದರ್ಕೆ ಸಂದೆಯಂ ಬಡದೆ ಜಲಕ್ಕನೀಗಳದಂ ಸಿರಿ ಕಡವುಟ್ಟಿತೆಂಬುದಂ |
VE
ಮದ್ಯದಿಂದ ಸೊಕ್ಕಿದವನೂ ಅಹಂಕಾರವೆಂಬ ಗ್ರಹದಿಂದ ಪೀಡಿತನಾದ ಮನಸ್ಸುಳ್ಳವನೂ ಆಗಿ ಒಳ್ಳೆಯ ನಡತೆಯಿಲ್ಲದೆ ೪೭. 'ಹಾಗೆನ್ನುವವನು ಯಾರ ಸಂಬಂಧಿ? ಇದು ವಿಶೇಷ ಭ್ರಮೆಯಲ್ಲವೆ? ದ್ರೋಣನೆಂಬುವವನು ಬ್ರಾಹ್ಮಣನೇ ಹೇಗೆ ? ನನಗೆ ಸ್ನೇಹಿತನೇ ಹೇಳು? ಅಂತಹವನನ್ನು ನಾನು ತಿಳಿದಿಲ್ಲ; ಅವನನ್ನು ಹೊರಕ್ಕೆ ತಳ್ಳು' ಎಂದು ಸಭಾಮಧ್ಯದಲ್ಲಿ ಕೆಟ್ಟಮಾತನಾಡಿದನು. ವ! ಹೀಗೆ ಹೇಳಿದುದನ್ನು ದ್ವಾರಪಾಲಕನು ಬಂದು ಆ ರೀತಿಯಲ್ಲಿ ತಿಳಿಸಲಾಗಿ ದ್ರೋಣನು ಬಲಾತ್ಕಾರದಿಂದ ಒಳಕ್ಕೆ ಪ್ರವೇಶಿಸಿ ದ್ರುಪದನನ್ನು ನೋಡಿ ೪೮. 'ಅಣ್ಣಾ ನೀನೂ ನಾನೂ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿದುದನ್ನು ತಿಳಿದಿಲ್ಲವೇ' ಎನ್ನಲು ದ್ರುಪದನು ನಿನ್ನನ್ನು ನಾನು ತಿಳಿದಿಲ್ಲ (ನೀನು ನನಗೆ ಅಪರಿಚಿತನು) ನೀನು ನನ್ನನ್ನು ಅದೆಲ್ಲಿ ಕಂಡಿದ್ದೆಯೋ ? ರಾಜನಿಗೂ ಬ್ರಾಹ್ಮಣನಿಗೂ ಯಾವ ವಿಧವಾದ ಸ್ನೇಹ ? ಮನುಷ್ಯರಾದವರು ಇಷ್ಟು ನಾಚಿಕೆಗೆಟ್ಟವರೂ ಆಗುತ್ತಾರೆಯೇ ? ಎಂಬ ಮಾತುಗಳಿಂದ ದ್ರೋಣನಿಗೆ ಮರ್ಮಭೇದಕವಾಗುವಂತೆ ಹೀಯಾಳಿಸಿದನು. ವ ಹಾಗೆ ಮಾಡಿದುದೂ ಅಲ್ಲದೆ ಈ ನಾಚಿಕೆಗೆಟ್ಟ ಬ್ರಾಹ್ಮಣನನ್ನು ಎಳೆದು ನೂಕು ಎನ್ನಲು ದ್ರೋಣನು ಹೀಗೆಂದನು-೪೯. ಐಶ್ವರ್ಯ ಬರಲು ಮದ್ಯಪಾನ ಮಾಡಿದವರಂತೆ ಮಾತು ತೊದಲುವುದು; ಮುಖದಲ್ಲಿ ವಕ್ರಚೇಷ್ಟೆಯುಂಟಾಗುವುದು; ಮಾತುಗಳು ನಾಚಿಕೆಯಿಲ್ಲದಾಗುವುವು; ಸಂಬಂಧವನ್ನು ಮರೆಯುವಂತೆ ಮಾಡುವುದು; ಆದುದರಿಂದ