________________
ದ್ವಿತೀಯಾಶ್ವಾಸಂ / ೧೪೫ ವ|| ಅಂತು ಭರದ್ವಾಜನಾತ್ಮತನೂಜಂಗೆ ಪೆಸರನಿಟ್ಟು ತನ್ನ ಕೆಳೆಯಂ ಪಾಂಚಾಳ ದೇಶದರಸಂ ಪೃಷತನೆಂಬನಾತನ ಮಗಂ ದ್ರುಪದನುಮಂ ದ್ರೋಣನುಮನೊಡಗೂಡಿ ಯಜಸೇನನೆಂಬ ಬ್ರಹಋಷಿಯ ಪಕದೊಳ್ ಬಿಲಿಯಂ ಕಲಿತೋಡ ದೋಣನುಂ ದ್ರುಪದನುಂ ಧನುರ್ಧರಾಗ್ರಗಣ್ಯರಾಗೆ ಭರದ್ವಾಜಂ ದ್ರೋಣಂಗೆ ಕೃಪನ ತಂಗೆಯಪ್ಪ ಶಾರದ್ವತೆಯಂ ತಂದು ಮದುವೆಯಂ ಮಾಡಿದೊಡಾತಂಗಮಾಕೆಗಂ ತ್ರಿಣೇತ್ರನಂಶದೊಳೊರ್ವ ಮಗಂ ಪುಟ್ಟಕಂ| ದಿವಿಜಾಶ್ವತ್ತಾಮದೊಳೀ
ಭುವನಂಗಳ ನಡುಗೆ ಶಿಶು ಸರಂಗೆಯೊಡ ನ | ಕೃವಯವದ ಕುಂಭಸಂಭವ | ನಿವನಶ್ವತ್ಥಾಮನೆಂದು ಹೆಸರಿಡೆ ನೆಗಬ್ದಂ ||
- ೪೪ ವll ಅಂತು ನೆಗಟ್ಟು ತಮ್ಮಯ್ಯನ ಕೈಯೊಳ್ ಧನುರ್ವಿದ್ಯೋಪದೇಶದೊಳ್ ಧನುರ್ಧ ರಾಗ್ರಗಣ್ಯನುಮಾಗಿ ಸಂದಂ ದ್ರುಪದನು ತನ್ನ ರಾಜ್ಯದೊಳ್ ನಿಂದಂ ದ್ರೋಣನುಂ ತನಗೆ ಬಡತನಮಡಸೆ ಅಶ್ವತ್ಥಾಮನನೊಡಗೊಂಡು ನಾಡು ನಾಡು ತೋಪು ಪರಶುರಾಮನಲ್ಲಿಗೆ ವಂದಂ- ಚ೦ll ಕ್ಷಿತಿಯೊಳಗುಳ್ಳ ಭೂಭುಜರ ಬಿತ್ತು ಮೊದಲಿಗೆ ಮುನ್ನವೇಕವಿಂ
ಶತಿ ಪರಿಸಂಖ್ಯೆಯಿಂ ತವಿಸಿ ಸಧ್ವನಿವೇದಕಮೆಂಬ ಯಜ್ಞದೂಳ್ | ಕ್ಷಿತಿ ಪೊಗಟ್ಟನ್ನಮಿತ್ತು ಗುರುದಕ್ಷಿಣೆಯಾಗಿರೆ ಕಶ್ಯಪ ಪ್ರಜಾ ಪತಿಗೆ ಸಮುದ್ರಮುದ್ರಿತಧರಿತ್ರಿಯನೊಂದಣಿಯೂರನೀವವೂಲ್ || ೪೫
ದ್ರೋಣನೆಂಬ ಹೆಸರಿನವನೇ ಸರಿ, ಹೋಗು ಎಂದು ಆ ಹೆಸರನ್ನೇ ಅವನಿಗೆ ಇಟ್ಟನು. ವl ಭರದ್ವಾಜನು ಹಾಗೆ ತನ್ನ ಮಗನಿಗೆ ಹೆಸರಿಟ್ಟು ತನ್ನ ಸ್ನೇಹಿತನೂ ಪಾಂಚಾಳದೇಶದ ರಾಜನೂ ಪೃಷತನ ಮಗನೂ ಆದ ದ್ರುಪದನನ್ನೂ ದ್ರೋಣನನ್ನೂ ಒಟ್ಟುಗೂಡಿಸಿ ಯಜ್ಞಸೇನನೆಂಬ ಬ್ರಹ್ಮಋಷಿಯ ಪಕ್ಕದಲ್ಲಿ ಬಿಲ್ವಿದ್ಯೆಯನ್ನು ಕಲಿಯಲು ಹೇಳಲಾಗಿ ದ್ರೋಣನೂ ದ್ರುಪದನೂ ಬಿಲ್ದಾರರಲ್ಲಿ ಮೊತ್ತಮೊದಲಿಗರಾದರು. ಹೀಗಾಗಲು ಭಾರದ್ವಾಜನು ದ್ರೋಣನಿಗೆ ಕೃಪನ ತಂಗಿಯಾದ ಶಾರದ್ವತೆಯನ್ನು ತಂದು ಮದುವೆಮಾಡಲಾಗಿ ಆತನಿಗೂ ಆಕೆಗೂ ಮುಕ್ಕಣ್ಣನಾದ ರುದ್ರನ ಅಂಶದಿಂದ ಒಬ್ಬ ಮಗನು ಹುಟ್ಟಿದನು. ೪೪. ಆ ಮಗುವು ಧ್ವನಿಮಾಡಿದ ತಕ್ಷಣವೇ ಕೂಗಿಕೊಂಡ ದೇವಲೋಕದ ಉಚೈಶ್ರವವೆಂಬ ಕುದುರೆಯ ಕೆನೆತದಿಂದ ಲೋಕಗಳೆಲ್ಲ ನಡುಗಲು ಅದನ್ನು ನೋಡಿ ದ್ರೋಣನು ನಕ್ಕು ನಿರಾಯಾಸದಿಂದ ಇವನಿಗೆ ಅಶ್ವತ್ಥಾಮನೆಂದು ಹೆಸರಿಡಲು ಅವನು ಪ್ರಸಿದ್ಧನಾದನು. ವll ಹಾಗೆ ಪ್ರಸಿದ್ಧನಾಗಿ ತಮ್ಮಯ್ಯನ ಕಯ್ಯಲ್ಲಿ ಧನುರ್ವಿದ್ಯೋಪದೇಶವನ್ನು ಪಡೆದು ಬಿಲ್ದಾರರಲ್ಲಿ ಅಗ್ರೇಸರನಾದನು. ದ್ರುಪದನೂ ತನ್ನ ರಾಜ್ಯದಲ್ಲಿ ನಿಂತನು. ದ್ರೋಣನು ತನಗೆ ಬಡತನವುಂಟಾಗಲು ಅಶ್ವತ್ಥಾಮನನ್ನೂ ಕರೆದುಕೊಂಡು ದೇಶದೇಶಗಳಲ್ಲೆಲ್ಲ ಸುತ್ತಿ ಪರಶುರಾಮನ ಬಳಿಗೆ ಬಂದನು. ೪೫. ಭೂಮಿಯಲ್ಲಿರುವ ಕ್ಷತ್ರಿಯರು ಬೇರುಸಹಿತ ಹಾಳಾಗುವಂತೆ ಮೊದಲು ಇಪ್ಪತ್ತೊಂದು ಸಲ ನಾಶಪಡಿಸಿ ಲೋಕವೇ ಹೊಗಳುವ ಹಾಗೆ ಸರ್ವನಿವೇದಕವೆಂಬ