________________
೪೧
೧೪೪/ ಪಂಪಭಾರತಂ
ವ|| ಅಂತು ನಕುಲ ಸಹದೇವರ್ ಸಹಿತಮಯ್ಯರುಂ ನವಯೌವನದ ಪರಮ ಸುಖಮನೆಯ್ಲಿ ಸಂತೋಷದಿನಿರ್ದರಿತ ಗಂಗಾದ್ವಾರದೊಳ್ ಭರದ್ವಾಜನೆಂಬ ಬ್ರಹ್ಮಋಷಿಕಂl ಸ್ನಾನಾರ್ಥವೊಂದು ಕಳಶಮ
ನಾ ನಿಯಮ ನಿಧಾನನಲಲೆ ಹಿಡಿದಮಳಿನ ಗಂ | ಗಾ ನದಿಗೆ ವಂದು ಸುರತ ನಿ
ಧಾನಿಯನಮರೇಂದ್ರ ಗಣಿಕೆಯಂ ಮುನಿ ಕಂಡಂ ||
ವ|| ಅಂತು ಕಾಣ್ಣುದುಮಮ್ಮತಾಭಿಯಂಬಕ್ಕರಸೆಯ ಕನಕ ಕಾಂಚೀಕಲಾಪದೊಳ್ ತೊಡರ್ದ ದೇವಾಂಗ ವಸ್ತದುಳ್ಳುಡಿಯೊಳುವ ಸೂತಕದ ನೂಲ ತೊಂಗಲ್ವರಸೆ ಮುಂದಣ ಸೋಗೆ ಕಾರ್ಗಾಲದ ಸೋಗೆಯಂತೆ ಸೊಗಯಿಸ . ಕ೦ll, ಆದರ ಸೋಂಕಿನೊಳ ತೆಂ
ಪಾದೊಡೆ ಬೆಳೆಸೆಯ ಮಸೆದ ಮದನನ ಬಾಳಂ | ತಾದುವು ಪೊಳೆವೊಳ್ಕೊಡೆ ತೆಂ
ಪಾದರ್ದಯಂ ನಟ್ಟುವಂದು ತನ್ನುನಿಪತಿಯಾ || ವ|| ಅಂತು ಕಂತುಶರಪರವಶನಾಗಿ ಧ್ವರ್ಯಕ್ಷರಣೆಯುಮಿಂದ್ರಿಯ ಕರಕಯುಮೊಡ " ನೊಡನಾಗ-' ಕಂt ಮಾಣದ ಸೋರ್ವಿಂದ್ರಿಯಮಂ
ದ್ರೋಣದೊಳಾಂತಲ್ಲಿಯೊಗದ ಶಿಶುವಂ ಕಂಡೀ | ದ್ರೋಣದೊಳೆ ಪುಟ್ಟದೀತು ದ್ರೋಣನೆ ಪೋಗೆಂದು ಹೆಸರನಿಟ್ಟಂ ಮುನಿಪಂ ||
ವ|| ಹೀಗೆ ನಕುಲ ಸಹದೇವರೊಡನೆ ಅಯ್ತು ಜನರೂ ಹೊಸಪ್ರಾಯದ ಉತ್ತಮಸುಖವನ್ನು ಹೊಂದಿ ಸಂತೋಷದಿಂದಿದ್ದರು. ಈ ಕಡೆ ಗಂಗಾದ್ವಾರದಲ್ಲಿ ಭರದ್ವಾಜನೆಂಬ ನಿಯಮಿಷ್ಯನಾದ ಋಷಿಯು-೪೧. ಸ್ನಾನಕ್ಕಾಗಿ ಒಂದು ಕೊಡವನ್ನು ಕೆಳಗೆ ಜೋಲುಬೀಳುವ ಹಾಗೆ ಹಿಡಿದು ಪರಿಶುದ್ಧವಾದ ಗಂಗಾನದಿಗೆ ಬಂದು ಸಂಭೋಗಸುಖಕ್ಕೆ ಆವಾಸಸ್ಥಾನಳಾದ ದೇವವೇಶ್ಯಯೊಬ್ಬಳನ್ನು ನೋಡಿದನು. ವಗ ಹಾಗೆ ನೋಡಲಾಗಿ ಅಮೃತಾಭಿಯೆಂಬ ಹೆಸರಿನ ಆ ಅಪ್ಪರಸ್ತ್ರೀಯ ಚಿನ್ನದ ನಡುಪಟ್ಟಿಯಲ್ಲಿ ಸಿಕ್ಕಿಕೊಂಡಿದ್ದ ರೇಷ್ಮೆಯ ವಸ್ತದ ಒಳ ಉಡುಪಿನಲ್ಲಿ ಶಬ್ದಮಾಡುವ ಗೆಜ್ಜೆಯ ಕುಚ್ಚಿನ ನೂಲಗೊಂಚಲ ಸಮೇತವಾಗಿ ಇಳಿಬಿದ್ದಿರುವ ಮುಂಭಾಗದ ಸೆರಗು ಮಳೆಗಾಲದ ನವಿಲಿನಂತೆ ಸೊಗಯಿಸಿತು. ೪೨. ಆಗುಂಟಾದ ಗಾಳಿಯ ಸ್ಪರ್ಶದಿಂದ ವಸ್ತವು ಓಸರಿಸಲು ಅವಳ ಸುಂದರವಾದ ತೊಡೆಯು ಮನ್ಮಥನ ಕತ್ತಿಯ ಹಾಗಾಗಿ ಆ ಋಷಿಯ ತೆರೆದ ಹೃದಯವನ್ನು ನಾಟಿತು. ವರ ಹಾಗೆ ಮನ್ಮಥನ ಬಾಣಗಳಿಗೆ ಅಧೀನನಾಗಿ ಅವನ ಧೈರ್ಯವೂ ರೇತ ಒಟ್ಟಿಗೆ ಸೋರಿಹೋದವು. ೪೩. ನಿಲ್ಲದೆ ಸೋರುವ ಆ ರೇತಸ್ಸನ್ನು (ವೀರ್ಯವನ್ನು) ಆ ಋಷಿಯು ಒಂದು ದೊನ್ನೆಯಲ್ಲಿ ಹಿಡಿದು ಅದರಿಂದ ಹುಟ್ಟಿದ ಶಿಶುವನ್ನು ನೋಡಿ ದೊನ್ನೆಯಲ್ಲಿ ಹುಟ್ಟಿದ ಮಗುವು