________________
ದ್ವಿತೀಯಾಶ್ವಾಸಂ | ೧೩೩ ಚಲದೊಳಮಾವ ಕಂದುಂ ಕುಂದುಮಿಲ್ಲದೆ ತನ್ನೂರಗಂ ದೊರೆಗಮಾರುಮಿಲ್ಲೆನಿಸಿದಾಗಳ್ ಕುಂತಿ ಶೋಕಾಕ್ರಾಂತೆಯಾಗಿರೆ ತಪೋವನದ ತಪೋವೃದ್ಧರಾ ಕಾಂತೆಯಂತೆಂದು ಸಂತೈಸಿದರ್ಚಂ || ಕಳೆದವರ್ಗಟ್ಟುದಡವರೇಡಮಂತವರಿಂ ಬಟಕ್ಕೆ ತಾ
ಮುಳವೊಡಮೇಟರಂತವರಣಂ ತಮಗಂ ಬರ್ದುಕಿಲ್ಲ ಧರ್ಮಮಂ | ಗಟೆಯಿಸಿಕೊಳ್ಳುದೊಂದೆ ಚದುರಿಂತುಲು ಸಂಸ್ಕೃತಿ ಧರ್ಮಮೇಕೆ ಬಾ
ಯಳೆವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ ||೨೭ . ವ|| ಅಂತುಮಲ್ಲದಕಂ || ಬಿಡದಬಲ್ಯ ಬಂಧುಜನದೊ
ಅಡಿಯದ ಕಣ್ಣೀರ ಪೂರಮಾ ಪ್ರೇತಮನೋ | ಗಡಿಸದೆ ಸುಡುವುದು ಗಡಮಿ ನಡುಗುವುದೀ ಶೋಕಮಂ ಸರೋಜದಳಾಕ್ಷೀ ||
೨೮ ವಗ ನೀನಿಂತು ಶೋಕಾಕ್ರಾಂತಯಾಗಿ ಸಂಸಾರಸ್ಥಿತಿಯನರಿಯದಜ್ಞಾನಿಗಳಂತ ವಿಪ್ರಳಾ ಪಂಗಯ್ಯಪೊಡೀ ಕೂಸುಗಳ ಮನಮಿಕ್ಕಿಯುಮರ್ದಯಿಕ್ಕಿಯುಂ ಕಿಡುವರೆಂದನೇಕೊಪ ಶಾಂತವಚನಂಗಳಿಂದಮಾಕೆಯುಬೈಗಮನಾಜಿ ನುಡಿದುಮಲ್ಲಿಯ ಮುನಿಜನಮಲ್ಲಮಾ ಕೂಸುಗಳುಮಂ ಕುಂತಿಯುಮಂ ಮುಂದಿಟೊಡಗೊಂಡು ನಾಗಪುರಕ್ಕೆ ವಂದು ಗಾಂಗೇಯ ಧೃತರಾಷ್ಟ್ರ ವಿದುರರ್ಕಮಂಬಾಲೆಗಂ ಪಾಂಡುರಾಜನ ವೃತ್ತಾಂತಮನಪಿದೊಡಾಗಳ್
ದಾಹೋತ್ತರದಂತೆ(?) ತನ್ನನ್ನು ಬೆಂಕಿಗೆ ಅರ್ಪಿಸಿಕೊಂಡು (ಸಹಗಮನ ಮಾಡಿ) ಕುಲದಲ್ಲಿಯೂ ಛಲದಲ್ಲಿಯೂ ಸ್ವಲ್ಪವೂ ದೋಷವೂ ನ್ಯೂನತೆಯೂ ಇಲ್ಲದೆ ತನಗೆ ಸಮಾನರಾದವರಾರೂ ಇಲ್ಲ ಎನ್ನಿಸಿದಳು. ಇತ್ತ ಕುಂತಿಯು ದುಃಖದಿಂದ ಕೂಡಿದವಳಾಗಿರಲು ತಪೋವನದಲ್ಲಿದ್ದ ವೃದ್ಧ ತಾಪಸರು ಅವಳನ್ನು ಹೀಗೆಂದು ಸಮಾಧಾನಮಾಡಿದರು. ೨೭. ಸತ್ತವರು ಏಳುವ ಪಕ್ಷದಲ್ಲಿ ಅವರಿಗಾಗಿ ಅಳಬೇಕು. ಇಲ್ಲ ಅವರಾದ ಮೇಲೆ ಉಳಿದ ನಾವು ಉಳಿಯುವ ಪಕ್ಷದಲ್ಲಿಯೂ (ನಾವು ಅಳಬೇಕು). ಹಾಗೆ ಸತ್ತ ಅವರು ಏಳುವುದಿಲ್ಲ. ನಮಗೂ ಬಾಳುವೆಯಿಲ್ಲ; ಧರ್ಮಸಂಗ್ರಹಮಾಡುವುದೊಂದೇ ಜಾಣತನ. ಇಂತಹುದೇ ಸಂಸಾರಧರ್ಮ. ಹೀಗಿರುವಾಗ ಗೋಳಿಡುವುದೇಕೆ? ಚಿಂತಿಸುವುದೇಕೆ ? ಹಲುಬುವುದೇಕೆ ? ವ್ಯಥೆಪಡುವುದೇಕೆ ? ವll ಹಾಗೂ ಅಲ್ಲದೆ ೨೮, ನಿರಂತರವಾಗಿ ಅಳುವ ಬಂಧುಜನಗಳ ಕಣ್ಣೀರಿನ ಪ್ರವಾಹವು ಆ ಪ್ರೇತವನ್ನು ಅಸಹ್ಯಪಡುವ ರೀತಿಯಲ್ಲಿ ಸುಡುವುದಲ್ಲವೆ? ಕಮಲಪತ್ರದಂತೆ ಕಣ್ಣುಳ್ಳ ಎಲೈ ಕುಂತಿಯೇ ಇನ್ನು ಈ ದುಃಖವನ್ನು ನಿಲ್ಲಿಸತಕ್ಕದ್ದು. ವ! ನೀನು ಸಂಸಾರಸ್ಥಿತಿಯನ್ನು ತಿಳಿಯದಜ್ಞಾನಿಯಂತೆ ದುಃಖಾಕ್ರಾಂತಳಾಗಿ ವಿಶೇಷವಾಗಿ ಹಲುಬಿದರೆ ಮಕ್ಕಳು ಉತ್ಸಾಹಶೂನ್ಯರಾಗಿಯೂ ಅಧೈರ್ಯರಾಗಿಯೂ ಕೆಟ್ಟುಹೋಗುವರು ಎಂದು ಅನೇಕವಿಧವಾದ ಸಮಾಧಾನದ ಮಾತುಗಳಿಂದ ಆಕೆಯ ಉದ್ವೇಗವು ಕಡಮೆಯಾಗುವ ಹಾಗೆ ನುಡಿದುದಲ್ಲದೆ ಅಲ್ಲಿಯ ಋಷಿಸಮೂಹವೆಲ್ಲ ಆ ಮಕ್ಕಳನ್ನೂ ಕುಂತಿಯನ್ನೂ ಮುಂದಿಟ್ಟುಕೊಂಡು ಜೊತೆಯಲ್ಲಿ