________________
೧೩೨/ ಪಂಪಭಾರತಂ
ಬಚಿಯನ ಮಕ್ಕಳ್ ಭೋರ್ಗರೆ ದುತುಂ ಪಂ ಪಂಗನಂತ ಪರಿತರೆ ಮುಡಿ ಬಿ | ಟೈಟಲೆ ನಡುನಡುಗೆ ಕಣ್ಣೀರ್
ಗಟಗಟನೊರ್ಮೋದಲೆ ಸುರಿಯೆ ಪರಿತಂದಾಗಳ್ || ೨೪ ವ|| ಅಂತು ತನ್ನ ನಲ್ಲನ ಕಳೇವರಮಂ ತಸಿಕೊಂಡು ತನ್ನ ಸಾವಂ ಪರಿಚ್ಛೇದಿಸಿ ಪಲ್ಲಂ ಸುಲಿಯುತ್ತುಮಿರ್ದ ಮಾದ್ರಿಯಂ ಕಂಡು ಕುಂತಿ ನೆಲದೊಳ್ ಮಯ್ಯನೀಡಾಡಿ ನಾಡಾಡಿಯಲ್ಲದ ಪಳಯಿಸಿಕಂ || ಅಡವಿಯೊಳೆನ್ನುಮನೆ
ನಡಪಿದ ಶಿಶುಗಳುಮನಿರಿಸಿ ನೀಂ ಪೇಟದ ಪೋ | ದೊಡಮೇನೂ ನಿನ್ನ ಬಳಿಯನ ನಡೆತರ್ಪ೦ ನಿನ್ನರಸ ಬಿಸುಟೆಂತಿರ್ಪೆಂ ||
೨೫ ವ|| ಎಂದು ನೀನೀ ಕೂಸುಗಳಂ ಕೈಕೊಂಡು ನಡಪು ನಲ್ಕನನೆನಗೊಪ್ಪಿಸಾನಾತ ನಾದುದನಪ್ಪನೆನೆ ಮಾದ್ರಿಯಿಂತಂದಳಕಂ || ಎನಗಿಂದಿನೋಂದು ಸೂಟುಮ
ನಿನಿಯಂ ದಯೆಗೆಯ್ಯನನ್ನ ಸೂಟಂ ನಿನಗಾ | ನೆನಿತಾದೊಡಮಿಾವನೆ ಮ
ತನಯ ಕೆಯ್ಯಡೆ ಪಲುಂಬದಿ ಪಾಪವಂ | ವl ಎಂದು ತಪೋವನದ ಮುನಿಜನಮುಂ ವನದೇವತಾಜನಮುಂ ತನ್ನಣಂ ಪೊಗಲ್ ಮಾದ್ರಿ ಪಾಂಡುರಾಜನೊಡನೆ ದಾಹೋತ್ತರದಂತೆ (? ಕಿರ್ಚಿಂಗ ಕುಲದೊಳಂ
ಏನಾಗಿದೆಯೋ ಹೇಳು ಸತ್ತೆ, ಕೆಟ್ಟೆ, ಎಂದು ಚೀರಿದಳು, ೨೪. ಮಕ್ಕಳು ವಿಶೇಷ ಶಬ್ದಮಾಡಿಕೊಂಡು ಅಳುತ್ತಾ ಬೆನ್ನಹಿಂದೆಯೇ ಬರುತ್ತಿರಲು ತಲೆಯ ತುರುಬು ಬಿಚ್ಚಿ ಕೆಳಗೆ ಜೋಲುತ್ತಿರಲು ಸೊಂಟವು ನಡಗುತ್ತಿರಲು ಕಣ್ಣೀರು ಗಳಗಳನೆ ಧಾರಾಕಾರವಾಗಿ ಹರಿಯುತ್ತಿರಲು ಕುಂತಿಯು ಓಡಿಬಂದಳು. ವ|| ತನ್ನ ಪ್ರಿಯನ ಶರೀರವನ್ನು ತಬ್ಬಿಕೊಂಡು ತನ್ನ ಸಾವನ್ನು ನಿಷ್ಕರ್ಷೆ ಮಾಡಿಕೊಂಡು ಹಲ್ಲನ್ನು ಕಿರಿಯುತ್ತಿದ(?) ಮಾದ್ರಿಯನ್ನು ಕಂಡು ಕುಂತಿಯು ನೆಲದಲ್ಲಿ ಬಿದ್ದು ಹೊರಳಾಡಿ ವಿಶೇಷವಾಗಿ ಅತ್ತಳು. ೨೫, ಈ ಕಾಡಿನಲ್ಲಿ ನನ್ನನ್ನೂ ನಾನು ಸಾಕಿದ ಈ ಮಕ್ಕಳನ್ನೂ ಬಿಟ್ಟು ನೀನು ಹೋದರೆ ತಾನೆ ಏನು? ನಾನು ನಿನ್ನ ಹಿಂದೆಯೇ ಬರುತ್ತೇನೆ. ರಾಜನೇ ನಿನ್ನನ್ನು ಬಿಟ್ಟು ನಾನು ಹೇಗಿರಬಲ್ಲೆ? ಎಂದು ಮಾದ್ರಿಯನ್ನು ಕುರಿತು ನೀನು ಈ ಕೂಸುಗಳನ್ನು ಸ್ವೀಕರಿಸಿ ಸಲಹು; ಪ್ರಿಯನನ್ನು ನನಗೊಪ್ಪಿಸು, ಅವನಾದುದನ್ನು ನಾನು ಆಗುತ್ತೇನೆ ಎನ್ನಲು ಮಾದ್ರಿ ಹೀಗೆಂದಳು-೨೬. ನನ್ನ ಪತಿಯು ಇಂದಿನ ಸರದಿಯನ್ನು ನನಗೆ ದಯಮಾಡಿ ಕೊಟ್ಟಿದ್ದಾನೆ. ನನ್ನ ಈ ಸರದಿಯನ್ನು ನಿನಗೆ ಏನಾದರೂ ಕೊಡುತ್ತೇನೆಯೇ! ನನ್ನ ಮಕ್ಕಳು ನಿನ್ನ ಅಧೀನ; ಇದಕ್ಕೆ ವಿರೋಧವಾಗಿ ಬೇರೆ ಬೇರೆ ರೀತಿಯಲ್ಲಿ ಹಂಬಲಿಸಬೇಡ ವ|| ಎಂದು ತಪೋವನದ ಋಷಿಗಳೂ ವನದೇವತಾಸಮೂಹವೂ ತನ್ನ ಸಾಹಸವನ್ನು ಹೊಗಳುತ್ತಿರಲು ಮಾದ್ರಿಯು