________________
೧೩೪ / ಪಂಪಭಾರತಂ
ಕಂ || ತುಳುಗಿದ ಹಿಮಬಿಂದುಗಳಿಂ
ದೆಳಗಿದ ನವ ವನಜವನದವೋಲ್ ಶೋಕದಿನಂ | ದೂವ ನಯನೋದಬಿಂದುವಿ
ನೆಗಿದುದೊರ್ಮೊದಲೆ ಬಂಧುಮುಖ ವನಜವನಂ ||
೨೯
ವ|| ಆಗಳ್ ಪುತ್ರ ಸ್ನೇಹದಿಂದತಿ ಪ್ರಳಾಪಂಗೆಯ್ಯಂಬಾಲೆಯುಮಂ ಬಂಧುಜನ ನಿರೀಕ್ಷಣದಿಂ ಶೋಕಂ ಮುಕಣಿಸೆ ಬಾಯಡೆದು ಪಳಯಿಸುವ ಕುಂತಿಯುಮಂ ಗಾಂಗೇಯ ಧೃತರಾಷ್ಟ್ರ ವಿದುರರ್ಕಳುಮಂ ಸತ್ಯವತೀದೇವಿಯುಮಂ ಸಂತೈಸಿ ಪಾಂಡುರಾಜಂಗೆ ಜಳದಾನಾದಿಕ್ರಿಯೆಗಳಂ ನಿರ್ವತಿ್ರಸಿ ತದನಂತರದೊಳದುವೆ ನಿರ್ವಗವಾಗ ವ್ಯಾಸವಚನ ದೊಳ್ ಸತ್ಯವತಿಯುಮಂಬಿಕೆಯುಮಂಬಾಲೆಯುಂ ಸಂಸಾರವಿಶೀರ್ಣೆಯರಾಗಿ ಮುನಿವನಮನಾಶ್ರಯಿಸಿದರಿತ್ತ ಗಾಂಗೇಯನಯ್ಯರ್ ಕೂಸುಗಳುಮಂ ತನ್ನ ತೊಡೆಯ ತೊಟ್ಟಿಲಾಗಿ ನಡಪುತ್ತುಮಿರೆ ದುರ್ಯೋಧನ ಪ್ರಕೃತಿಗಳ ನೂರ್ವರುಂ ಧರ್ಮಪುತ್ರಾದಿಗಳಯ್ಯರುಂ ಸಹಪಾಂಸುಕ್ರೀಡಿತರಾಗಿ
ಕಂ|| ಒಡನಾಡಿಯುಮೊಡನೊದಿಯು
ಮೊಡವಳೆದುಂ ಗುಳ್ಳೆಗೊಟ್ಟ ಬಟ್ಟುಳಿಸೆಂಡು | ಪೊಡೆಸೆಂಡಂಬಿವನಾಡು ತೊಡವಳೆದರ್ ತಮ್ಮೊಳೆಳಸೆ ತಂತಂಗೆಡೆಗಳ
20
ಕರೆದುಕೊಂಡು ಹಸ್ತಿನಾಪಟ್ಟಣಕ್ಕೆ ಬಂದು ಭೀಷ್ಮ, ಧೃತರಾಷ್ಟ್ರ, ವಿದುರರಿಗೂ ಅಂಬಾಲೆಗೂ ಪಾಂಡುರಾಜನ ವೃತ್ತಾಂತವನ್ನು ತಿಳಿಸಿದರು. ೨೯. ದಟ್ಟವಾಗಿ ಬೀಳುವ ಮಂಜಿನಹನಿಗಳಿಂದ (ಬಗ್ಗಿರುವ) ಆವರಿಸಲ್ಪಟ್ಟ ಹೊಸತಾವರೆಯ ತೋಟದಂತೆ ಬಂಧುಜನಗಳ ಮುಖವೆಂಬ ಕಮಲದ ವನವು ಅಂದು ದುಃಖದಿಂದ ಸ್ರವಿಸುತ್ತಿರುವ ಕಣ್ಣಿನ ಹನಿಗಳಿಂದ ಒಟ್ಟಿಗೇ ಬಗ್ಗಿದುವು. ವ|| ಆಗ ಮಗನ ಮೇಲಿನ ಪ್ರೀತಿಯಿಂದ ಗೋಳಿಡುತ್ತಿದ್ದ ಅಂಬಾಲೆಯನ್ನೂ ನೆಂಟರನ್ನೂ ನೋಡುವುದರಿಂದ ಪುನಃ ಕಾಣಿಸಿ ಕೊಂಡ ದುಃಖದಿಂದ ಬಾಯಿ ಬಿಟ್ಟು ಅಳುತ್ತಿದ್ದ ಕುಂತಿ, ಭೀಷ್ಮ, ಧೃತರಾಷ್ಟ್ರ, ವಿದುರರುಗಳನ್ನೂ ಸತ್ಯವತೀದೇವಿಯನ್ನೂ ಸಮಾಧಾನಮಾಡಿ ಪಾಂಡುರಾಜನಿಗೆ ತರ್ಪಣಾದಿಕ್ರಿಯೆಗಳನ್ನು ಮಾಡಿ ಮುಗಿಸಿ ಆಮೇಲೆ ಆ ದುಃಖವೇ ವಿರಕ್ತಿಗೆ ಕಾರಣ ವಾಗಲು ವ್ಯಾಸರ ಉಪದೇಶದಂತೆ ಸತ್ಯವತಿಯೂ ಅಂಬೆ ಅಂಬಾಲೆಯರೂ ಸಂಸಾರ ತ್ಯಾಗಮಾಡಿ ತಪೋವನವನ್ನು ಆಶ್ರಯಿಸಿದರು. ಈ ಕಡೆ ಭೀಷ್ಮನು ಅಯ್ದು ಮಕ್ಕಳನ್ನೂ ತನ್ನ ಮಡಿಲೇ ತೊಟ್ಟಿಲಾಗಿರುವಂತೆ ಸಾಕುತ್ತಿರಲು ದುರ್ಯೋಧನನೇ ಮೊದಲಾದ ನೂರು ಮಂದಿಯೂ ಧರ್ಮರಾಜನೇ ಮೊದಲಾದ ಅಯ್ದು ಜನಗಳೂ ಒಟ್ಟಿಗೆ ಧೂಳಾಟವನ್ನಾಡುತ್ತಿರುವವರಾದರು. ೩೦. ಒಡನೆ ಆಡಿಯೂ ಒಡನೆ ಓದಿಯೂ ಜೊತೆಯಲ್ಲಿಯೇ ಬೆಳೆದೂ ಗೊಳ್ಳೆಗೊಟ್ಟಿ, ಬಟ್ಟಿ, ಉಳಿಕೆಂಡು, ಪೊಡೆಸೆಂಡು ಎಂಬ ಈ ಆಟಗಳನ್ನಾಡುತ್ತಲೂ ತಮ್ಮ ತಮ್ಮಲ್ಲಿ ಪ್ರತ್ಯೇಕವಾದ ಸ್ನೇಹವನ್ನು ಬೆಳೆಸುತ್ತ