________________
ದ್ವಿತೀಯಾಶ್ವಾಸಂ | ೧೨೫
ವ|| ಆಗಳಾ ಪಾಂಡುರಾಜನಾ ಕೂಸುಗಳೆ ಜಾತಕರ್ಮಮಂ ಮುನಿಗಳಿಂ ಬಳೆಯಿಸಿ ನಕುಲ ಸಹದೇವರೆಂದವರ್ಗಮಳ್ವೆಸರನಿಟ್ಟು ಪುತ್ರ ಸಂಪೂರ್ಣ ಮನೋರಥನಾಗಿರ್ಪಿನಮಯ್ಯ ಕೂಸುಗಳುಮೇಲ್‌ವಾಡಿವದ ಚಂದ್ರನಂತುತ್ತರಾಭಿವೃದ್ಧಿಯೊಳ್ ಸೊಗಯಿಸಿ ಬಳೆಯೆ ಭರತ ಕುಲಕ್ಕೆ ವಿಶದ ಯಶೋಂಕುರಂಗಳುಂ ಬಂಧುಜನಕ್ಕೆ ಪುಣ್ಯಾಂಕುರಂಗಳುಂ ವಂದಜನಕ್ಕೆ ಕಲ್ಪ ವೃಕ್ಷಾಂಕುರಂಗಳುಮರಾತಿಜನಕ್ಕೆ ಕಾಳಕೂಟಾಂಕುರಂಗಳುಮಂ ಪೋಲ್ತು ಪಂಚಾಂಗ ಮಂತ್ರಂ ಸ್ವರೂಪದೊಳ್ ಮೂರ್ತಿಮಂತಂಗಳಾದಂತೆ ಸೊಗಯಿಸಿ ಬಳೆಯೆ
ಕಂ || ತೊಡರ್ದಮರ್ದ ಬಾಳವಣ್ಣದ
ತುಡುಗ ಪಳಂಚಲೆವ ಪಂಚ ಜಡೆ ನೊಸಲೊಳೊಡಂ | ಬಡುವರಳೆಲೆಯವಳಂ ಚಿ
ಲ್ವಿಡಿದಿರ್ದುದು ಬಾಳಕೇಳಿ ಧರ್ಮಾತ್ಮಜನಾ ||
ವ|| ಅಂತಾತಂ ಬಳೆಯವಳೆಯ
ಕಂ || ನಡೆವ ತಳರ್ನಡೆಯೊಳ್ ಪುಡಿ
ವುಡಿಯಾದುವು ಶಿಲೆಗಳೊಡೆದು ಕರಿಗಳ್ ಭೀಮಂ | ಪಿಡಿದಡರ್ದೊಡ ಬಾಯ್ದಿಟ್ಟೆ
ಅಡಗಾದುವು ಮುದ್ಧದಂತು ಸೊಗಯಿಸಬೇಡಾ
99
ಅವಳಿ ಮಕ್ಕಳನ್ನು ಪಡೆದು ಸಂತಾನವನ್ನು ಊರ್ಜಿತಗೊಳಿಸಿದಳು. ವll ಆಗ ಆ ಪಾಂಡುರಾಜನು ಆ ಶಿಶುಗಳಿಗೆ ಋಷಿಗಳಿಂದ ಜಾತಕರ್ಮಗಳನ್ನು ಮಾಡಿಸಿ ನಕುಲಸಹದೇವರೆಂಬ ಜೋಡಿ ಹೆಸರನ್ನಿಟ್ಟು ಮಕ್ಕಳನ್ನು ಪಡೆಯುವ ಸಂಪೂರ್ಣತೃಪ್ತಿ ಹೊಂದಿರಲು ಆ ಅಯ್ದು ಮಕ್ಕಳೂ ಶುಕ್ಲಪಕ್ಷದ ಪ್ರಥಮೆಯ ವೃದ್ಧಿಚಂದ್ರನಂತೆ ಮೇಲೆಮೇಲೆ ಸೊಗಯಿಸಿ ಬಳೆಯುತ್ತಿದ್ದರು; ಅವರು ಭರತವಂಶಕ್ಕೆ ವಿಸ್ತಾರವಾದ ಯಶಸ್ಸಿನಮೊಳಕೆಗಳೂ ಬಂಧುಜನಗಳಿಗೆ ಪುಣ್ಯದ ಮೊಳಕೆಗಳೂ ಶತ್ರುಜನಕ್ಕೆ ಕಾಳಕೂಟವಿಷದ ಮೊಳಕೆಗಳೂ ಆಗಿ ಪಂಚಾಂಗ ಮಂತ್ರಗಳಾದ ಸ್ತುತಿ, ನೈವೇದ್ಯ, ಅಭಿಷೇಕ, ತರ್ಪಣ, ಸಮಾರಾಧನ ಎಂಬ ವೇದಕ್ಕೆ ಸಂಬಂಧಿಸಿದ ಮಂತ್ರಗಳು ತಮ್ಮ ರೂಪದಲ್ಲಿಯೇ ಪ್ರತ್ಯಕ್ಷವಾಗಿ ಮೂರ್ತಿಮತ್ತುಗಳಾದಂತೆ ಸೊಗಯಿಸಿ ತೋರಿದರು. ೪. ಮೈಯನ್ನು ಚೆನ್ನಾಗಿ ಸೇರಿಕೊಂಡ ಕತ್ತಿಯ ಬಣ್ಣದ (ನೀಲಿಬಣ್ಣದ) ಉಡುಪಿನಿಂದಲೂ ಬೆನ್ನಿಗೆ ಅಪ್ಪಳಿಸುತ್ತಿರುವ ಅಯ್ದು ಜಡೆಗಳಿಂದಲೂ ಒಪ್ಪಿ ತೋರುವ ಅರಳೆಲೆಯ ಆಕಾರದ ಪದಕಗಳಿಂದಲೂ ಧರ್ಮರಾಯನ ಬಾಲಕ್ರೀಡೆಯು ಸುಂದರವಾಗಿದ್ದಿತು. ವ|| ಹಾಗೆ ಅವನು ಅಭಿವೃದ್ಧಿಯಾಗುತ್ತಿರಲು ೫. ಭೀಮನ್ನು ನಡೆಯುವ ತಪ್ಪುಹೆಜ್ಜೆಗಳಿಂದಲೇ ಕಲ್ಲುಗಳು ಒಡೆದು ಪುಡಿಯಾದುವು. ಆನೆಗಳನ್ನು ಹಿಡಿದು ಅವನು ಹತ್ತಲು ಅವು ಬಾಯಿಬಿಟ್ಟು (ಕೂಗಿಕೊಂಡು) ಜಜ್ಜಿ ಎಲುಬುಮಾಂಸಗಳಾದುವು. ಮುದ್ದುಮುದ್ದಾಗಿರುವ ಬಾಲ್ಯಸ್ಥಿತಿ ಹೀಗೆ