________________
೧೨೬ | ಪಂಪಭಾರತಂ
ಮುನಿವನ ಮನ ಬಿಸುಟುವು ಮುಂ ಮುನಿಯ ಸೋಂಕಿಲೊಳೆ ಬಳೆದ ಸಿಂಗಂಗಳ್ ಮು || ದಿನೊಳಡರ್ವ ಪಿಡಿವ ಗುರ್ದುವ
ಮನೆಗೆ ವನಿತರ್ಕಮಲಸಿ ಮರುದಾತ್ತಜನಾ || ವll ಅಂತಾತಂ ಬಳೆಯಕಂ || ಬೇಡದುದಂ ಬೇಡುವ ಪುಡಿ
ಯಾಡುವ ತೊದಳೊದವೆ ನುಡಿವ ನಗಿಸುವ ಬಾಲ | ಕ್ರೀಡೆ ಮುರಾರಿಯ ಬಾಲ ಕ್ರೀಡೆಯನನುಕರಿಪುದಾದುದರಿಕೇಸರಿಯಾ || ಪರೆದಡರ್ಭ ಧೂಳಿ ಕಿರುನಗೆ ವೆರಸಿದ ತೊದಳೊದವೆ ನುಡಿವ ನುಡಿ ನಗೆಮೊಗದೊಳ್ | ಪರಕಲಿಸಿದ ಕಾಡಿಗೆವರ ಸರಿಕೇಸರಿ ತಾಯ ಮನಮುಳಿಗೊಂಡಂ 11 ಒಗೆತರ್ಪ ಪಳ ನಗೆ ಮೊಗದ ಸರಸ್ವತಿಯನಾಗಳರ್ಚಿಸಿದ ಪೊದ ! ಆಗಲದ ಚೆಲ್ವಿನ ಮೊಲೆಯ ಮುಗುಳಳಗಿಳಿಸಿರೆ ಗುಣಾರ್ಣವಂ ಸೊಗಯಿಸಿದಂ | ಕರಿಕಳಭಂಗಳ ಶಿಶು ಕೇ ಸರಿಗಳ ಬಲೆಯಂ ತಗುಳು ಬಡವುಗಳನವಂ || ತಿರಿಪಿ ಪಿಡಿಯುತ್ತುಮರಿಗಂ ಪರಿದಾಡುವ ಸಮವಯಸ್ಕರೋಳ ಸೊಗಯಿಸಿದ |
೧೦ ಸೊಗಯಿಸಬೇಡವೇ ? ೬. ಭೀಮನು ಹುಟ್ಟುವುದಕ್ಕೆ ಮುಂಚೆ ಋಷಿಗಳ ಮಡಲಿನಲ್ಲಿಯೇ ಬಳೆದ ಸಿಂಹಗಳು ಈಗ ಭೀಮನು ಅಟಕ್ಕಾಗಿ ಅವುಗಳನ್ನು ಹತ್ತುವ, ಹಿಡಿಯುವ, ಗುದ್ದುವ, ಮನೆಯೊಳಕ್ಕೆ ಎಳೆದುಕೊಂಡುಹೋಗುವ ಹಿಂಸೆಗಳಷ್ಟಕ್ಕೂ ಆಯಾಸಗೊಂಡು ಆ ಋಷಿಗಳ ವನವನ್ನೇ ತೊರೆದುಹೋದವು. ೭. ಬೇಡದುದನ್ನು ಬೇಡುವ ಧೂಳಾಟವಾಡುವ ಮೊದಲುಮಾತುಗಳನ್ನಾಡುವ ನಗುವನ್ನುಂಟುಮಾಡುವ ಅರಿಕೇಸರಿಯ ಬಾಲಕ್ರೀಡೆಯು ಶ್ರೀಕೃಷ್ಣನ ಬಾಲಕ್ರೀಡೆಗಳನ್ನು ಅನುಕರಿಸುವುದಾಯಿತು. ೮. ಕೆದರಿ ಮೆಯ್ಯಂಟಿಕೊಂಡಿರುವ ಧೂಳು, ಹುಸಿನಗೆಯಿಂದ ಕೂಡಿದ ತೊದಲುಮಾತು, ನಗುಮುಖದಲ್ಲಿ ಹರಡಿದ ಕಾಡಿಗೆಯೊಡನೆ ಅರಿಕೇಸರಿ ತಾಯಿಯಾದ ಕುಂತಿಯ ಮನಸ್ಸನ್ನು ಆಕರ್ಷಿಸಿದನು. ೯. (ಆಗತಾನೆ) ಹುಟ್ಟುತ್ತಿರುವ ಹಲ್ಲುಗಳು ಆ ನಗೆಮೊಗದ ವಾಗ್ಗೇವಿಯನ್ನು ಪೂಜಿಸುವುದಕ್ಕಾಗಿ ಹರಡಿದ ಸುಂದರವಾದ ಮೊಲ್ಲೆಯ ಮೊಗ್ಗಿನ ರಾಶಿಯನ್ನು ತಿರಸ್ಕರಿಸುತ್ತಿರಲು ಗುಣಾರ್ಣವನು ಸೊಗಸಾಗಿ ಕಂಡನು. ೧೦. ಆನೆಯ ಮರಿಗಳನ್ನೂ ಸಿಂಹದ ಮರಿಗಳನ್ನೂ ಬೆನ್ನಟ್ಟಿ ಹೋಗಿ ಆ ಬಡಪ್ರಾಣಿಗಳನ್ನು ಹಿಂತಿರುಗಿಸಿ ಹಿಡಿಯುವ ಅರಿಕೇಸರಿ ಅಲ್ಲಿ ಓಡಾಡುವ