________________
ಕಂll
ದ್ವಿತೀಯಾಶ್ವಾಸಂ
ಶ್ರೀಗಗಲುರಮಂ ಕೀರ್ತಿ
ಶ್ರೀಗೆ ದಿಗಂತಮುಮನಹಿತರಂ ಗೆ ಜಯ | ಶ್ರೀಗೆ ಭುಜಶಿಖರಮಂ ನೆಲೆ
ಯಾಗಿಸಿ ನೀಂ ನೆಲಸು ನೇಸುಳ್ಳಿನಮರಿಗಾ ||
ಎಂಬ ಪರಕೆಗಳ ರವದೊಳ್
ತುಂಬೆ ನಭೋವಿವರಮಮರ ಮುನಿಜನಮಮರೇಂ |
ದ್ರಂ ಬೆರಸು ತಳರ್ದುದಾದುದ
ಳುಂಬಂ ಮನದೊಸಗೆ ಕುಂತಿಗಂ ತತ್ಪತಿಗಂ ||
ವll ಅಂತು ಗುಣಾರ್ಣವನ ಪುಟ್ಟಿದೊಸಗೆಯೊಳೊಸಗೆ ಮರುಳೊಂಡು ಕುಂತಿಯುಂ ಪಾಂಡುರಾಜನುಮಿರೆ ಮಾದ್ರಿ ತನಗೆ ಮಕ್ಕಳಿಲ್ಲದುದರ್ಕೆ ವಿರಕೆಯಾಗಿ ಪೊಸೆದು ಬಿಸುಟ ರಕ್ತಾಶೋಕಪಲ್ಲವದಂತೆ ಕರಂ ಕೊರಗಿ ಚಿಂತಿಸುತಿರ್ದೊಡಾಕೆಯ ಬಿನ್ನನಾದ ಮೊಗದಂದಮಂ ಕಂಡು ಕುಂತಿ ಕರುಣಿಸಿ ಪುತ್ರೋತ್ಪತ್ತಿ ನಿಮಿತ್ತಂಗಳಪ್ಪ ಮಂತ್ರಾಕ್ಷರಂಗಳನುಪದೇಶಂಗೆಯೊಡಾಕೆಯುಂ ತದುಕ್ತಕ್ರಿಯೆಯೊಳಂ ನಿಯಮನಿಯಮಿತೆಯಾಗಿ
ಕಂ
ಆಹ್ವಾನಂಗೆಯ್ದಶ್ವಿನಿ
ದೇವರನವರಿತ್ತ ವರದೊಳವರಂಶಮ್ ಸಂ | ಭಾವಿಸೆ ಗರ್ಭದೊಳಮಳರ
ನಾ ವನಜದಳಾಕ್ಷಿ ಪಡೆದು ಸಂತತಿವೆತ್ತಳ್ ||
೧. ಎಲ್ ಅಂಗನೆ ನೀನು ನಿನ್ನ ಅಗಲವಾದ ಎದೆಯನ್ನು ಲಕ್ಷ್ಮಿಗೂ ದಿಗಂತವನ್ನು ಕೀರ್ತಿಲಕ್ಷ್ಮಿಗೂ ಭುಜಶಿಖರವನ್ನು ಶತ್ರುಗಳನ್ನು ಗೆಲುವ ವಿಜಯಲಕ್ಷ್ಮಿಗೂ ನಿವಾಸಸ್ಥಾನವನ್ನಾಗಿಸಿ ಸೂರ್ಯನಿರುವವರೆಗೂ ಸ್ಥಿರವಾಗಿ ನಿಲ್ಲು, ೨. ಎಂಬ ಹರಕೆಯ ಶಬ್ದವು ಆಕಾಶ ಪ್ರದೇಶವನ್ನೆಲ್ಲ ತುಂಬಲು ದೇವತೆಗಳೂ ಋಷಿಗಳೂ ದೇವೇಂದ್ರನೊಡನೆ ಹೊರಟುಹೋದರು. ಕುಂತಿಗೂ ಅವಳ ಪತಿಯಾದ ಪಾಂಡುರಾಜನಿಗೂ ವಿಶೇಷವಾಗಿ ಮನಸ್ಸಂತೋಷವಾಯಿತು. ವ|| ಹಾಗೆ ಗುಣಾರ್ಣವನ ಜನೋತ್ಸವದ ಸಂತೋಷದ ಸಂಭ್ರಮದಲ್ಲಿ ಸೇರಿಕೊಂಡು ಕುಂತಿಯೂ ಪಾಂಡುರಾಜನೂ ಇರಲಾಗಿ ಮಾದ್ರಿಯು ತನಗೆ ಮಕ್ಕಳಿಲ್ಲದುದಕ್ಕೆ ಉತ್ಸಾಹಶೂನ್ಯಳಾಗಿ ಹೊಸೆದು ಬಿಸಾಡಿದ ಅಶೋಕದ ಚಿಗುರಿನಂತೆ ವಿಶೇಷವಾಗಿ ದುಃಖಪಟ್ಟು ಚಿಂತಿಸುತ್ತಿರಲಾಗಿ ಆಕೆಯ ಬಾಡಿದ ಮುಖದ ರೀತಿಯನ್ನು ಕಂಡು ಕುಂತಿಯು ಕರುಣಿಸಿ ಪುತ್ರೋತ್ಪತ್ತಿ ಕಾರಣಗಳಾದ ಮಂತ್ರಗಳನ್ನು ಉಪದೇಶಮಾಡಲಾಗಿ ಅವಳು ಆ ಮಂತ್ರಕ್ಕೆ ವಿಧಿಸಿದ ರೀತಿಯಲ್ಲಿ ನಿಯಮದಿಂದ ೩. ಅಶ್ವಿನೀದೇವತೆಯರನ್ನು ಆಹ್ವಾನಿಸಿ ಬರಿಸಿ ಅವರು ಕೊಟ್ಟ ವರಗಳಿಂದ ಅವರಂಶವೇ ಗರ್ಭದಲ್ಲುಂಟಾಗಲು