________________
ಪ್ರಥಮಾಶ್ವಾಸಂ | ೧೨೩ ಉ || ಸಪ್ತ ಸಮುದ್ರ ಮುದ್ರಿತ ಧರಾತಳಮಂ ಬೆಸಕೆಯ್ದು ಮಾಳದು ...
ದ್ದ ಪ್ತ ವಿರೋಧಿ ಸಾಧನಮನಾಹವದೊಳ್ ತಳೆದೊಟ್ಟು ವಿಶ್ವದಿ | ಗ್ಯಾಹ್ನ ಯಶೋವಿಳಾಸಿನಿಗೆ ವಲ್ಲಭನಾಗು ನಿರಂತರ ಸುಖ ವ್ಯಾಪ್ತಿಗೆ ನೀನೆ ಮೊತ್ತಮೊದಲಾಗರಿಕೇಸರಿ ಲೋಕಮುಳ್ಳಿನಂ ||
ಇದು ವಿವಿಧ ವಿಬುಧಜನವಿನುತ ಜಿನಪದಾಂಭೋಜ ವರ ಪ್ರಸಾದೋತ್ಪನ್ನ ಪ್ರಸನ್ನ ಗಂಭೀರವಚನರಚನ ಚತುರ ಕವಿತಾಗುಣಾರ್ಣವ ವಿರಚಿತಮಪ್ಪ ವಿಕ್ರಮಾರ್ಜುನ ವಿಜಯದೊಳ್
ಪ್ರಥಮಾಶ್ವಾಸಂ
ಮೊದಲಾದ ನೂರೆಂಟು ಹೆಸರುಗಳನ್ನಿಟ್ಟು ವಿಶೇಷಾಶೀರ್ವಾದಗಳಿಂದ ಹರಸಿದರು. ೧೪೯. ಎಲೈ ಅರಿಕೇಸರಿಯೇ ನೀನು ಲೋಕವಿರುವವರೆಗೆ ಏಳು ಸಮುದ್ರಗಳಿಂದ ಮುದ್ರಿಸಲ್ಪಟ್ಟ (ಸುತ್ತುವರಿಯಲ್ಪಟ್ಟ) ಭೂಮಂಡಲವನ್ನೂ ನಿನ್ನ ಆಜ್ಞಾಧೀನವನ್ನಾಗಿ ಮಾಡು. ನಿನ್ನನ್ನು ಮೀರಿ ಗರ್ವಿಷ್ಠರಾದ ಶತ್ರುರಾಜಸೈನ್ಯವನ್ನು ಯುದ್ಧದಲ್ಲಿ ಕತ್ತರಿಸಿ ಹಾಕು. ಸಮಸ್ತದಿಕ್ಕುಗಳಲ್ಲಿಯೂ ವ್ಯಾಪಿಸಿಕೊಂಡಿರುವ ಯಶೋಲಕ್ಷ್ಮಿಗೆ ಪ್ರತಿಯಾಗಿ ನಿರಂತರವಾದ ಸುಖಭೋಗಗಳಿಗೆ ನೀನೆ ಮೊತ್ತಮೊದಲಿಗನಾಗು ಎಂದೂ ಹರಸಿದರು.