________________
೧೨೨/ ಪಂಪಭಾರತಂ ಗಜಾಗಮ ರಾಜಪುತ್ರನಾರೂಢಸರ್ವಜ್ಞಂ ಗಂಧೇಭ ವಿದ್ಯಾಧರಂ ನೃಪ ಪರಮಾತ್ಮಂ ವಿಬುಧ ವನಜವನ ಕಳಹಂಸಂ ಸುರತಮಕರಧ್ವಜಂ ಸಹಜಮನೋಜಂ ಆಂದ್ರೀಕುಚಕಳಶ ಪಲ್ಲವಂ ಕರ್ಣಾಟೀ ಕರ್ಣಪೂರಂ ಲಾಟೀಲಲಾಮಂ ಕೇರಳೀಕೇಳಿಕಂದರ್ಪ ಸಂಸಾರಸಾರೋದಯಂ ಮಜುವಕದಲ್ಲಲಂ ನೋಡುತ್ತೆ ಗೆಲ್ವಂ ಪಾಣ್ಣರಂಕುಸಂ ಅಮ್ಮನ ಗಂಧವಾರಣಂ ಪಡೆಮೆಚ್ಚಿ ಗಂಡು ಪ್ರಯಗಳೂಂ ಗುಣನಿಧಿ ಗುಣಾರ್ಣವಂ ಸಾಮಂತಚೂಡಾಮಣಿಯಂದಿಂತಿವು ಮೊದಲಾಗಿ ಪಲವುಮಷ್ಟೋತ್ತರಶತನಾಮಂಗಳನಿಟ್ಟು ವಿಶೇಷಾಶೀರ್ವಚನಂಗಳಿಂ ಪರಸಿ
ಆಭರಣವನ್ನಾಗಿ ಉಳ್ಳವನು), ಅನೂನದಾನಿ (ಊನವಿಲ್ಲದೆ ದಾನಮಾಡುವವನು), ಲೋಕಕಲ್ಪದ್ರುಮ (ಸಮಸ್ತಲೋಕಕ್ಕೂ ಒಂದೇ ಕಲ್ಪವೃಕ್ಷದಂತಿರುವವನು) ಗಜಾಗಮರಾಜಪುತ್ರ (ಹಸ್ತಿಶಾಸ್ತ್ರದಲ್ಲಿ ರಾಜಪುತ್ರನಂತಿರುವವನು), ಆರೂಢಸರ್ವಜ್ಞ (ಅಶ್ವಾರೋಹಣ ವಿದ್ಯೆಯನ್ನು ಸಂಪೂರ್ಣವಾಗಿ ತಿಳಿದವನು), ಗಂಭವಿದ್ಯಾಧರ (ವಿದ್ಯಾಧರರಲ್ಲಿ ಮದ್ದಾನೆಯಂತಿರುವವನು), ನೃಪಪರಮಾತ್ಮ (ರಾಜರಲ್ಲಿ ಪರಮಾತ್ಮನಂತಿರುವವನು), ಸುರತಮಕರಧ್ವಜ (ಸಂಭೋಗದಲ್ಲಿ ಮನ್ಮಥನಂತಿರುವವನು), ಸಹಜಮನೋಜ (ಸ್ವಭಾವವಾದ ಮನ್ಮಥ), ವಿಬುಧವನಜವನ ಕಳಹಂಸ (ಪಂಡಿತರೆಂಬ ಕಮಲಸರೋವರದ ಕಲಹಂಸದಂತಿರುವವನು), ಆಂದ್ರೀಕುಚಕಳಶ ಪಲ್ಲವ (ಆಂಧ್ಯಸ್ತ್ರೀಯರ ಮೊಲೆಗಳೆಂಬ ಕಳಸಕ್ಕೆ ಚಿಗುರಿನಂತಿರುವವನು), ಕರ್ಣಾಟೀಕರ್ಣಪೂರ (ಕರ್ಣಾಟಸ್ತ್ರೀಯರ ಕಿವಿಯಾಭರಣದಂತಿರುವವನು), ಲಾಟೀಲಲಾಮ (ಲಾಟದೇಶದ ಸ್ತ್ರೀಯರ ಹಣೆಯಾಭರಣ), ಕೇರಳೀಕೇಳಿಕಂದರ್ಪ (ಕೇರಳದೇಶದ ಸ್ತ್ರೀಯರ ಕ್ರೀಡೆಯಲ್ಲಿ ಮನ್ಮಥನ ಹಾಗಿರುವವನು), ಸಂಸಾರಸರೋದಯ (ಸಂಸಾರರಹಸ್ಯವನ್ನು ತಿಳಿದು ಅಭಿವೃದ್ಧಿಯಾಗುತ್ತಿರುವವನು), ಮರುವಕ್ಕದಲ್ಲಳಂ (ಶತ್ರುಸೈನ್ಯವನ್ನು ಭಯಪಡಿಸುವವನು) ನೋಡುತ್ತೆ ಗೆಲ್ವ (ದೃಷ್ಟಿಯಿಂದಲೇ ಗೆಲ್ಲುವವನು), ಪಾರಂಕುಸ (ಜಾರರಿಗೆ ಅಂಕುಶಪ್ರಾಯನಾದವನು), ಅಮ್ಮನ ಗಂಧವಾರಣ (ತಂದೆಯ ಮದ್ದಾನೆ) ಪಡೆಮೆಚ್ಚಿಗಂಡ (ಸೈನ್ಯವು ಮಚ್ಚುವ ಹಾಗಿರುವ ಶೂರ), ಪ್ರಿಯಗಳ (ಪ್ರಿಯಳನ್ನು ಅಪಹರಿಸಿದವನು), ಗುಣನಿಧಿ (ಗುಣಗಳ ಗಣಿ), ಗುಣಾರ್ಣವ (ಗುಣಸಮುದ್ರ) ಸಾಮಂತಚೂಡಾಮಣಿ (ಆಶ್ರಿತರಾಜರಲ್ಲಿ ತಲೆಯಾಭರಣದಂತಿರುವವನು), ಇವೇ