________________
೧೦೨ ಪಂಪಭಾರತಂ
ವl ಅಂತಿಂದ್ರನಿತ್ತ ಶಕ್ತಿಯಂ ಕೈಕೊಂಡು ನಿಜಭುಜಶಕ್ತಿಯಂ ಪ್ರಕಟಂ ಮಾಡಲೆಂದು ರೇಣುಕಾನಂದನನಲ್ಲಿಗೆ ಪೋಗಿಕಂ || ಕೂರಿಸಿ ಗುರು ಶುಷಿ
ಳಾ ರಾಮನನುಗ್ರ ಪರಶು ಪಾಟಿತ ರಿಪು ವಂ | ಶಾರಾಮನನಿಷುವಿದ್ಯಾ ಪಾರಗಳೆನಿಸಿದುದು ಬಿ ವೈಕರ್ತನನಾ |
೧೦೪ ವll ಅಂತು ಧನುರ್ಧರಾಗ್ರಗಣ್ಯನಾಗಿರ್ದೊಂದು ದಿವಸಂ ತನ್ನ ತೊಡೆಯ ಮೇಲೆ ತಲೆಯನಿಟ್ಟು ಪರಶುರಾಮಂ ಮದೋಜಿಗಿದಾ ಪ್ರಸ್ತಾವದೂಳಾ ಮುನಿಗೆ ಮುನಿಸಂ ' .. ಮಾಡಲೆಂದಿಂದ್ರನುಪಾಯದೊಳಟ್ಟದ ವಜ್ರಕೀಟಂಗಳ್ ಕರ್ಣನೆರಡುಂ ತೂಡೆಯುವ ನುಳಿಯನೂ ಕೊಡಂತಿಯೊಳ್ ಬೆಟ್ಟದಂತತಮಿತ್ತಮುರ್ತಿ ಪೋಗಯುಮದನನಯದಂತೆ ಗುರುಗೆ ನಿದ್ರಾಭಿಘಾತಮಕ್ಕುಮೆಂದು ತಲೆಯನುಗುರಿಸುತ್ತುಮಿರೆಯಿರಕಂ|| ಅತಿ ವಿಶದ ವಿಶಾಲೋರು.
ಕೃತದಿಂದೊಜದನಿತು ಜಡೆಯುಮಂ ನಾಂದಿ ಮನಃ | ಉತದೊಡನೆಬ್ಬಳಸಿದುದು ತಮಾ ವಂದನ್ನ ಮಿತ್ರ ಗಂಧಂ ಮುನಿಯಂ ||
೧೦೫ ವ|| ಅಂತೆಲ್ಕತ್ತು ನೆತ್ತರ ಪೊನಲೊಳ್ ನಾಂದುನನೆದ ಮಯ್ಯುಮಂ ತೊಯ್ದು ತಳ್ಕೊಯ್ದ ಜಡೆಯುಮಂ ಕಂಡೀ ಧೈರ್ಯಂ ಕೃತಿಯಂಗಲ್ಲದಾಗದು ಪಾರ್ವನೆಂದೆನ್ನೋಲ್
ಶಕ್ಕಾಯುಧವು ಗ್ರಹ ಹಿಡಿದ ಹಾಗೆ ಅವರನ್ನು ಕೊಲ್ಲುತ್ತದೆ ಎಂದು ಅವನಿಗೆ ಶಕ್ಕಾಯುಧವನ್ನು ಕೊಟ್ಟನು. ವ|| ಹಾಗೆ ಇಂದ್ರನು ಕೊಟ್ಟ ಶಕ್ಕಾಯುಧವನ್ನು ಸ್ವೀಕರಿಸಿ ತನ್ನ ಬಾಹುಬಲವನ್ನು ಪ್ರಕಟಮಾಡಬೇಕೆಂದು ಪರಶುರಾಮನ ಹತ್ತಿರಕ್ಕೆ ಹೋದನು. ೧೦೪. ಭಯಂಕರವಾದ ಕೊಡಲಿಯಿಂದ ಸೀಳಲ್ಪಟ್ಟ ವೈರಿಗಳೆಂಬ ತೋಟವನ್ನುಳ್ಳ ಆ ಪರಶುರಾಮನನ್ನು ಕರ್ಣನು ಗುರುಶುಶೂಷೆಯ ಮೂಲಕ ಪ್ರೀತಿಸುವಂತೆ ಮಾಡಲು ಕರ್ಣನ ಬಿಲ್‌ಬಿಯು ಅವನನ್ನು ಧನುರ್ವಿದ್ಯೆಯಲ್ಲಿ ಪಾರಂಗತನೆನ್ನುವ ಹಾಗೆ ಮಾಡಿತು. ವ|| ಹಾಗೆ ಬಿಲ್ಲು ಹಿಡಿದಿರುವವರಲ್ಲೆಲ್ಲ
ಮೊದಲಿಗನಾಗಿದ್ದು ಒಂದು ದಿನ ಪರಶುರಾಮನು ತನ್ನ ತೊಡೆಯ ಮೇಲೆ ತಲೆಯನ್ನು * ಮಡಗಿ ಎಚ್ಚರತಪ್ಪಿ ಮಲಗಿದ ಸಂದರ್ಭದಲ್ಲಿ ಆ ಋಷಿಗೆ ಕೋಪವನ್ನುಂಟು
ಮಾಡಬೇಕೆಂದು ಇಂದ್ರನು ಉಪಾಯದಿಂದ ಕಳುಹಿಸಿದ ವಜ್ರಕೀಟಗಳೇ ಕರ್ಣನೆರಡು ತೊಡಗಳನ್ನೂ ಉಳಿಯನ್ನು ನಾಟಿ ಕೊಡಲಿಯಿಂದ ಹೊಡೆದ ಹಾಗೆ ಆ ಕಡೆಯಿಂದ
ಈ ಕಡೆಗೆ ಕೊರೆದುಕೊಂಡು ಹೋದರೂ ಕರ್ಣನು ಅದನ್ನು ತಿಳಿಯದವನಂತೆ * ಗುರುವಿಗೆ ನಿದ್ರಾಭಂಗವಾಗುತ್ತದೆಂದು ಗುರುವಿನ ತಲೆಯನ್ನು ತನ್ನ ಉಗುರಿನಿಂದ ಸವರುತ್ತಿದ್ದನು. ೧೦೫. ವಿಶೇಷವೂ ಸ್ಪಷ್ಟವೂ ಅಗಲವೂ ಆದ ತೊಡೆಯ ಗಾಯದಿಂದ ಜಿನುಗಿ ಹೆಚ್ಚುತ್ತಿರುವ ರಕ್ತದಿಂದ ಕೂಡಿದ ದುರ್ಗಂಧವು ಜಡೆಯಷ್ಟನ್ನೂ ಒದ್ದೆಮಾಡಿ ಋಷಿಯನ್ನು ಮನಸ್ಸಿನ ಏರುತ್ತಿರುವ ಕೋಪದೊಡನೆ ಎಚ್ಚರವಾಗುವ ಹಾಗೆ ಮಾಡಿತು.