________________
೧೦೧
ಪ್ರಥಮಾಶ್ವಾಸಂ | ೧೦೧ ಕಂ || ಬೇಡಿದೊಡೆ ಬಲದ ಬರಿಯುವ
ನೀಡಾಡುಗುಮುಗಿದು ಕರ್ಣನೆಂದಾಗಳೆ ಕೈ | ಗೂಡಿದ ವಟುವಾಕೃತಿಯೊಳೆ. ಬೇಡಿದನಾ ಸಹಜಕವಚಮಂ ಕುಂಡಳಮಂ || ಬೇಡಿದುದನರಿದುಕೊಳ್ಳದೆ ಬೇಡಿದುದಂ ಮುಟ್ಟಲಾಗದೆನಗೆನೆ ನೆಗಟ್ಟಿ | ಲ್ಲಾಡದೆ ಕೊಳ್ಳೆಂದರಿದೀ ಡಾಡಿದನಿಂದ್ರಂಗೆ ಕವಚಮಂ ರಾಧೇಯಂ || ಎಂದುಂ ಪೊಗಂದನೆ ಮಾ ನಂದನ ಪಂತೋಂದನೀವೆನೆಂದನೆ ನೋಂದಃ | ಎಂದನೆ ಸೆರಗಿಲ್ಲದೆ ಪಿಡಿ
ಯಂದನಿದೇಂ ಕಲಿಯೊ ಚಾಗಿಯೋ ರವಿತನಯಂ || ೧೦೨ ವಗಿ ಅಂತು ತನ್ನ ಸಹಜಕವಚಮಂ ನೆತ್ತರ್ ಪನ ಮನ ಪವಿಯ ತಿದಿಯುಗಿವಂತುಗಿದು ಕೊಟ್ಟೂಡಿಂದ್ರನಾತನ ಕಲಿತನಕೆ ಮೆಚ್ಚಿ ಕಂ l ಸುರ ದನುಜ ಭುಜಗ ವಿದ್ಯಾ
ಧರ ನರಸಂಕುಲದೊಳಾರನಾದೊಡಮೇನೋ | ಗರ ಮುಟ್ಟೆ ಕೋಲ್ಕುಮಿದು ನಿಜ ವಿರೋಧಿಯಂ ಧುರದೊಳೆಂದು ಶಕ್ತಿಯನಿತ್ತಂ || - ೧೦೩
ಹೀಗಲ್ಲದೆ ಆತನು ಈತನನ್ನು ಗೆಲ್ಲಲಾಗುವುದಿಲ್ಲ ಎಂದು ೧೦೦, ಯಾಚಿಸಿದರೆ ಕರ್ಣನು ಬಲಪಾರ್ಶ್ವದ ಪಕ್ಕೆಯನ್ನು ಕತ್ತರಿಸಿ ದಾನವಾಗಿ ಎಸೆಯುತ್ತಾನೆ ಎಂದು ಭಾವಿಸಿ ಆಗಲೇ ಸಿದ್ದವಾದ ಬ್ರಹ್ಮಚಾರಿಯ ರೂಪದಲ್ಲಿಯೇ ಬಂದು ಇಂದ್ರನು ಕರ್ಣನೊಡನೆ ಹುಟ್ಟಿಬಂದ ಕವಚವನ್ನೂ ಕುಂಡಲವನ್ನೂ ಬೇಡಿದನು. ೧೦೧. ಬೇಡಿದುದನ್ನು ಕತ್ತರಿಸಿಕೊ ಎಂದು ಕರ್ಣನು ಹೇಳಲು ಇಂದ್ರನು ಬೇಡಿದುದನ್ನು ನೀನು ಕೊಡುವುದಕ್ಕೆ ಮೊದಲು ನಾನು ಮುಟ್ಟಲಾಗದು ಎನಲು ಸ್ವಲ್ಪವೂ ಅಲುಗಾಡದೆ ತೆಗೆದುಕೋ ಎಂದು ಹೇಳಿ ಕರ್ಣನು ಕವಚವನ್ನು ಕತ್ತರಿಸಿ ಲಕ್ಷವಿಲ್ಲದೆ ನಿರ್ಯೋಚನೆ ಯಿಂದ ಕೊಟ್ಟನು. ೧೦೨. ಕರ್ಣನು ಬೇಡಿದವರಿಗೆ ಎಂದಾದರೂ ಮುಂದೆ ಹೋಗು ಎಂದು ಹೇಳಿದನೆ? ಸ್ವಲ್ಪ ತಡೆ ಎಂದು ಹೇಳಿದನೆ? (ಕೇಳಿದ ಪದಾರ್ಥವನ್ನಲ್ಲದೆ) ಬೇರೊಂದನ್ನು ಕೊಡುತ್ತೇನೆ ಎಂದನೆ ? (ಕತ್ತರಿಸುವಾಗ) ನೋವಿನಿಂದ ಅಃ ಎಂದನೆ? ಹೆದರಿಕೆಯಿಲ್ಲದೆ ಹಿಡಿ ತೆಗೆದುಕೋ ಎಂದನು. ಕರ್ಣನು ಅದೆಂತಹ ಶೂರನೋ ಹಾಗೆಯೇ ತ್ಯಾಗಿಯೂ ಅಲ್ಲವೇ! ವll ಹಾಗೆ ರಕ್ತವು ಪನ ಮನ ಹರಿಯುತ್ತಿರಲು ತನ್ನ ಸಹಜಕವಚವನ್ನು ಚರ್ಮದ ಚೀಲವನ್ನು ಸೀಳುವಂತೆ ಸೀಳಿ, ಕೊಡಲಾಗಿ ಇಂದ್ರನು ಆತನ ಶೌರ್ಯಕ್ಕೆ ಮೆಚ್ಚಿ ೧೦೩. ನಿನ್ನ ಶತ್ರುಗಳಲ್ಲಿ ದೇವತೆಗಳು, ರಾಕ್ಷಸರು, ನಾಗಗಳು, ವಿದ್ಯಾಧರರು, ಮನುಷ್ಯರು ಇವರಲ್ಲಿ ಯಾರಾದರೂ ಸರಿಯೇ ಈ