________________
ಪ್ರಥಮಾಶ್ವಾಸಂ ೧೦೩ ಪುಸಿದು ಬಿದ್ದೆಯಂ ಕೈಕೊಂಡುದರ್ಕೆ ದಂಡಂ ಪೆತಿಲ್ಲ ನಿನಗಾನಿತ್ತ ಬ್ರಹ್ಮಾಸ್ತಮೆಂಬ ದಿವ್ಯಾಸ್ತ್ರ ಮವಸಾನಕಾಲದೊಳ್ ಬೆಸಕೆಯ್ಯದಿರ್ಕೆಂದು ಶಾಪವನಿತ್ತನಂತು ಕರ್ಣನುಂ ಶಾಪಹತನಾಗಿ ಮಗುಟ್ಟು ಬಂದು ಸೂತನ ಮನೆಯೊಳಿರ್ಪನ್ನೆಗಮಿತ್ತಲ್ ಕುಂತಿಗವರ ಮಾವನಪ್ಪ ಕುಂತಿಭೋಜನುಂ ಸ್ವಯಂಬರಂ ಮಾಡಚಂ | ಸೊಗಯಿಪ ತಮ್ಮ ಜವ್ವನದ ತಮ್ಮ ವಿಭೂತಿಯ ತಮ್ಮ ತಮ್ಮ ಚಿ .
ಲ್ಕುಗಳ ವಿಲಾಸದುರ್ಮಗಳೊಳಾವವಗಾಗಿಪವೆಂದು ಬಂದಂ ಚ | ೩ಗರುಮನಾಸಕಾಜರುಮನೊಲ್ಲದೆ ಚೆಲ್ವಿಡಿದಿರ್ದ ರೂಪು – 1
ಗೆವರೆ ಪಾಂಡುರಾಜನನ ಕುಂತಿ ಮನಂಬುಗೆ ಮಾಲೆ ಹೂಡಿದಳ್ || ೧೦೬ 'ವ|| ಅಂತು ಸ್ವಯಂಬರದೊಳ್ ನೆಂದರಸುಮಕ್ಕಳೊಳಪು ಕೆಯ್ದ ಕುಂತಿಯೊಡನೆ ಮದ್ರರಾಜನ ಮಗಳ ಶಲ್ಯನೊಡವುಟ್ಟಿದ ಮಾದ್ರಿಯುಮನೊಂದ ಪಸೆಯೊಳಿರಿಸಿ ಗಾಂಗೇಯಂ ವಿಧಾತ್ರ ಮುಂಡಾಡುವಂತೆ ತಾಂ ಮದುವೆಯಂ ಮಾಡಿ
ಚಂ || ತಳಿರ್ಗಳಸಂ ಮುಕುಂದರವಮದ ಮುತ್ತಿನ ಮಂಟಪಂ ಮನಂ
ಗೋಳಿಪ ವಿತಾನಪ ಹಸುರ್ವಂದಲೋಳೊಲ್ಲೆಡೆಯಾಡುವಯ್ಯರ್ 1 ಬಳಸಿದ ವೇದಪಾರಗರ ಸಂದಣಿಯೆಂಬಿವಲೆಂ ವಿವಾಹಮಂ , ಗಳಮದು ಕುಂತಿ ಮಾದ್ರಿಗಳೊಳಚ್ಚರಿಯಾದುದು ಪಾಂಡುರಾಜನಾ || ೧೦೭ .
ವlು ಹಾಗೆ ಎಚ್ಚರಗೊಂಡು ರಕ್ತದ ಪ್ರವಾಹದಲ್ಲಿ ಚೆನ್ನಾಗಿ ನೆನೆದು ಒದ್ದೆಯಾದ ಶರೀರವನ್ನೂ ಜಡೆಯನ್ನೂ ನೋಡಿ ಈ ಧೈರ್ಯವು ಕ್ಷತ್ರಿಯನಲ್ಲದವನಿಗಾಗುವುದಿಲ್ಲ. ಬ್ರಾಹ್ಮಣನೆಂದು ನನ್ನಲ್ಲಿ ಸುಳ್ಳು ಹೇಳಿ ವಿದ್ಯೆಯನ್ನು ಸ್ವೀಕಾರಮಾಡಿದುದಕ್ಕೆ ದಂಡ ಬೇರೇನಿಲ್ಲ, ನಿನಗೆ ನಾನು ಕೊಟ್ಟ ಬ್ರಹ್ಮಾಸ್ತ್ರವೆಂಬ ದಿವ್ಯಾಸ್ತ್ರವು ನಿನ್ನ ಕಡೆಯ ಕಾಲದಲ್ಲಿ ನಿನ್ನ ಆಜ್ಞೆಯನ್ನು ಪಾಲಿಸದಿರಲಿ ಎಂದು ಶಾಪ ಕೊಟ್ಟನು. ಹಾಗೆ ಕರ್ಣನು ಶಾಪಹತನಾಗಿ ಪುನಃ ಬಂದು ಸೂತನ ಮನೆಯಲ್ಲಿರಲು ಈಕಡೆ ಕುಂತಿಗೆ ಅವರ ಮಾವನಾದ ಕುಂತೀಭೋಜನು ಸ್ವಯಂವರಕ್ಕೆ ಏರ್ಪಡಿಸಿದನು. ೧೦೬. ಸೊಗಸಾಗಿರುವ ತಮ್ಮಯವ್ವನ, ಐಶ್ವರ್ಯ, ಸೌಂದರ್ಯ ಮತ್ತು ಶೃಂಗಾರಚೇಷ್ಟೆಗಳ ಆಧಿಕ್ಯದಿಂದ ನಾವು ಕುಂತಿಯನ್ನು ನಮ್ಮವಳನ್ನಾಗಿ ಮಾಡಿಕೊಳ್ಳುತ್ತೇವೆ ಎಂಬುದಾಗಿ ಬಂದಿದ್ದ ಸೌಂದರ್ಯಶಾಲಿಗಳನ್ನೂ ಕಾಮುಕರನ್ನೂ ಬಯಸದೆ ಕುಂತಿಯು ಪಾಂಡುವಿನ ಸುಂದರವಾದ ರೂಪವು ತನ್ನ ಕಣ್ಣಿಗೆ ಹಿತವಾಗಿದ್ದು ಮನಸ್ಸನ್ನು ಪ್ರವೇಶಿಸಲು ಪಾಂಡುರಾಜನಿಗೇ ವರಣಮಾಲೆಯನ್ನು ತೊಡಿಸಿದಳು (ಹಾಕಿದಳು). ವ ಹಾಗೆ ಸ್ವಯಂವರದಲ್ಲಿ ತುಂಬಿದ್ದ ರಾಜಕುಮಾರರಲ್ಲಿ ಪಾಂಡುವನ್ನೇ ಆಯ್ದುಕೊಂಡ ಕುಂತಿಯೊಡನೆ ಮದ್ರರಾಜನ ಮಗಳೂ ಶಲ್ಯನೊಡನೆ ಹುಟ್ಟಿದವಳೂ ಆದ ಮಾದ್ರೀದೇವಿಯನ್ನೂ ಒಂದೇ ಹಸೆಮಣೆಯಲ್ಲಿರಿಸಿ ಭೀಷ್ಮನು, ಬ್ರಹ್ಮನೆ ಮೆಚ್ಚಿ ಮುದ್ದಾಡುವಂತೆ ತಾನೇ ಮದುವೆಯನ್ನು ಮಾಡಿದನು. ೧೦೭. ಚಿಗುರಿನಿಂದ ಕೂಡಿದ ಕಳಶ, ತಮಟೆಯ ಧ್ವನಿ (ಮಂಗಳವಾದ್ಯ) ಎತ್ತರವಾಗಿ ಕಟ್ಟಿದ ಮಂಟಪ, ಮನೋಹರ ವಾಗಿರುವ ಮೇಲುಕಟ್ಟಿನ ಸಾಲುಗಳು, ಹಸಿರುವಾಣಿಯ ಚಪ್ಪರ, ಪ್ರೀತಿಯಿಂದ