________________
೯೮ / ಪಂಪಭಾರತಂ.
ಬಂದು ಸುರನದಿಯ ನೀರೊಳ? ಮಿಂದಿನನಂ ನೋಡಿ ನಿನ್ನ ದೊರೆಯನೆ ಮಗನ | ಕೈಂದಾಹ್ವಾನಂಗೆಯ್ಯಿ
ಡಂ ದಲ್ ಧರೆಗಿಚಿದನಂದು ದಶಶತಕಿರಣಂ || ವ|| ಅಂತು ನಭೋಭಾಗದಿಂ ಭೂಮಿಭಾಗಕ್ಕಿಟೆದು ತನ್ನ ಮುಂದೆ ನಿಂದರವಿಂದ ಬಾಂಧವನ ನೋಡಿ ನೋಡಿಕಂ 11 ಕೊಡಗೂಸುತನದ ಭಯದಿಂ
ನಡುಗುವ ಕನ್ನಿಕೆಯ ಬೆಮರ ನೀರ್ಗಳ ಪೊನಿ | ಬೀುಡಿಯಲೊಡಗೂಡೆ ಗಂಗೆಯ
ಮಡು ಕರೆಗಣಿದುದು ನಾಣ ಪಂಪೇಂ ಪಿರಿದೊ || ವ!| ಆಗಳಾದಿತ್ಯನಾಕೆಯ ಮನದ ಶಂಕೆಯುಮಂ ನಡುಗುವ ಮೆಯ್ಯ ನಡುಕಮುಮಂ ಕಿಡೆನುಡಿದಿಂತೆಂದಂಕಂ | ಬರಿಸಿದ ಕಾರಣವಾವುದೊ
ತರುಣಿ ಮುನೀಶ್ವರನ ಮಂತ್ರಮೇ ದೊರೆಯೆಂದಾಂ | ಮರುಳಿಯನೆಯದುಮಣಿಯದೆ ಬರಿಸಿದೆನಿನ್ನೇಟಿಮೆಂದೊಡಾಗದು ಪೋಗಲ್ || ಮುಂ ಬೇಡಿದ ವರಮಂ ಕುಡ ದಂಬುಜಮುಖಿ ಪುತ್ರನನ್ನ ದೊರೆಯಂ ನಿನಗ || ಕೆಂಬುದುಮೊದವಿದ ಗರ್ಭದೊ ಳಂಬುಜಮಿತ್ರನನ ಪೋಲ್ವ ಮಗನೊಗೆತಂದಂ ||
ಅಲೆಗಳನ್ನುಳ್ಳ ಗಂಗಾನದಿಗೆ ಉನ್ನತಸ್ತನಿಯಾದ ಅವಳು ಒಬ್ಬಳೇ ಬಂದಳು. ೯೧. ಬಂದು ಗಂಗಾನದಿಯ ನೀರನಲ್ಲಿ ಸ್ನಾನಮಾಡಿ ಸೂರ್ಯನನ್ನು ನೋಡಿ ನಿನಗೆ ಸಮನಾದ ಮಗನಾಗಲಿ ಎಂದು ಕರೆದಾಗಲೇ ಸೂರ್ಯನು ಪ್ರತ್ಯಕ್ಷವಾದನು. ೯೨. ತಾನು ಇನ್ನೂ ಕನೈಯಲ್ಲಾ ಎಂಬ ಭಯದಿಂದ ನಡುಗುವ ಆ ಕನ್ಯಯ ಬೆವರಿನ ನೀರಿನ ಪ್ರವಾಹವು ತುಂಬಿ ಹರಿದು ಒಟ್ಟುಗೂಡಲು ಗಂಗಾನದಿಯ ಮಡುವೂ ದಡವನ್ನು ಮೀರಿ ಹರಿಯಿತು. ಆಕೆಯ ನಾಚಿಕೆಯ ಆಧಿಕ್ಯವು ಎಷ್ಟು ಹಿರಿದೊ! ವ|| ಆಗ ಸೂರ್ಯನು ಅವಳ ಮನಸ್ಸಿನ ಸಂದೇಹವೂ ನಡುಗುತ್ತಿರುವ ಶರೀರದ ನಡುಕವೂ ಹೋಗುವ ಹಾಗೆ (ನಯದಿಂದ) ಮಾತನಾಡಿ ೯೩-೯೪. ಎಲೆ ತರುಣಿ ನನ್ನನ್ನು ಬರಿಸಿದ ಕಾರಣವೇನು (ಎಂದು ಸೂರ್ಯನು ಪ್ರಶ್ನಿಸಲು ಕುಂತಿಯು) ಆ ಋಷಿಶ್ರೇಷ್ಠನು ಕೊಟ್ಟ ಮಂತ್ರವು ಎಂಥಾದ್ದು ಎಂದು ಪರೀಕ್ಷಿಸಲು (ಬರಿಸಿದೆನು) ನಾನು ಅರಿಯದವಳೂ ಭ್ರಮೆಗೊಂಡವಳೂ ಆಗಿದ್ದೇನೆ. ತಿಳಿದೂ ತಿಳಿಯದೆ ಬರಮಾಡಿದೆನು. ಇನ್ನು ಎದ್ದುಹೋಗಿ ಎಂದಳು. (ಸೂರ್ಯನು) ಎಲ್ ಕಮಲಮುಖಿಯೇ ನೀನು ಮೊದಲು ಬೇಡಿದ ವರವನ್ನು ಕೊಡದೆ ನಾನು