________________
ಪ್ರಥಮಾಶ್ವಾಸಂ | ೯೯ ಒಡವುಟ್ಟಿದ ಮಣಿಕುಂಡಲ ಮೊಡವುಟ್ಟಿದ ಸಹಜಕವಚಮಮರ್ದಿರೆ ತನ್ನೊಳ್ | ತೊಡರ್ದಿರೆಯುಂ ಬಂದಾಕೆಯ ನಡುಕಮನೊಡರಿಸಿದನಾಗಳಾ ಬಾಲಿಕೆಯಾ ||
೯೫
ವಗ ಅಂತು ನಡನಡನಡುಗಿ ಜಲದೇವತೆಗಳಪೊಡಂ ಮನಂಗಾಣರಂದು ನಿಧಾನಮ ನೀಡಾಡುವಂತೆ ಕೂಸಂ ಗಂಗೆಯೊಳೀಡಾಡಿ ಬಂದಳಿತ ಗಂಗಾದೇವಿಯುಮಾ ಕೂಸಂ ಮುಲುಗಲೀಯದೆ ತನ್ನ ತೆರೆಗಳೆಂಬ ನಳಿತೋಳಿನೊಯ್ಯನೊಯ್ಯನೆ ತುಸಿ ತರೆ ಗಂಗಾತೀರ ದೂಳಿರ್ಪ ಸೂತನೆಂಬಂ ಕಂಡು
ಉll ಬಾಳದಿನೇಶಬಿಂಬದ ನೆಟಲ್ ಜಲದೊಳ್ ನೆಲಸಿ ಮಣ್ ಫಣೀಂ
ದ್ರಾಳಯದಿಂದಮುರ್ಚದ ಫಣಾಮಣಿ ಮಂಗಳರಶಿಯೋ ಕರಂ | ಮೇಳಿಸಿದಪ್ಪುದೆನ್ನೆರ್ದಯನಂದು ಬೋದಿಲ್ಲನೆ ಪಾಯ್ತು ನೀರೊಳಾ ಬಾಳನನಾದಮಾದರದ ಕೊಂಡೊಸೆದಂ ನಿಧಿಗಂಡನಂತೆವೋಲ್ | ೯೬
ವ|| ಅಂತು ಕಂಡು ಮನಂಗೊಂಡೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ನಲ್ಗಳ ಸೋಂಕಿಲೊಳ್ ಕೂಸನಿಟ್ಟೋಡಾಕ ರಾಗಿಸಿ ಸುತನ ಸೂತಕಮಂ ಕೊಂಡಾಡ
ಹೋಗಲಾಗುವುದಿಲ್ಲ. ನಿನಗೆ ನನ್ನ ಸಮಾನನಾದ ಮಗನಾಗಲಿ ಎಂದನು. ಆಗ ಉಂಟಾದ ಗರ್ಭದಲ್ಲಿ ಕಮಲಸಖನಾದ ಸೂರ್ಯನನ್ನು ಹೋಲುವ ಮಗನು ಹುಟ್ಟಿದನು. ೯೫. ಜೊತೆಯಲ್ಲಿಯೇ ಹುಟ್ಟಿದ ಮಣಿಕುಂಡಲಗಳೂ (ರತ್ನಖಚಿತವಾದ - ಕಿವಿಯಾಭರಣ) ಜೊತೆಯಲ್ಲಿಯೇ ಹುಟ್ಟಿದ ಕವಚವೂ ತನ್ನಲ್ಲಿ ಸೇರಿ ಅಮರಿಕೊಂಡಿರಲು ಹುಟ್ಟಿದ ಆ ಮಗನು ಆಗ ಆ ಬಾಲಿಕೆಗೆ ನಡುಕವನ್ನುಂಟು ಮಾಡಿದನು. ವ! ಹಾಗೆ ವಿಶೇಷವಾಗಿ ನಡುಗಿ ಜಲದೇವತೆಗಳಾದರೂ ನನ್ನ ಮನಸ್ಸನ್ನು ತಿಳಿದುಕೊಳ್ಳುತ್ತಾರೆ ಎಂದು ತನ್ನ ನಿಧಿಯನ್ನೇ (ಐಶ್ವರ್ಯ) ಬಿಸಾಡುವಂತೆ ಕೂಸನ್ನು ಗಂಗೆಯಲ್ಲಿ ಎಸೆದು ಬಂದಳು. ಈ ಕಡೆ ಗಂಗಾದೇವಿಯು ಆ ಕೂಸನ್ನು ಮುಳುಗುವುದಕ್ಕೆ . . ಅವಕಾಶಕೊಡದೆ ತನ್ನ ಅಲೆಗಳೆಂಬ ಸುಂದರವಾದ ತೋಳುಗಳಿಂದ ನಿಧಾನವಾಗಿ ತಬ್ಬಿಕೊಂಡು ತರಲು ಗಂಗಾತೀರದಲ್ಲಿದ್ದ ಸೂತನೆಂಬುವನು ಕಂಡು ೯೬. ಬಾಲ ಸೂರ್ಯಮಂಡಲದ ನೆರಳು ನೀರಿನಲ್ಲಿ ನೆಲೆಸಿದೆಯೋ ಅಥವಾ ನಾಗಲೋಕ ದಿಂದ ಭೇದಿಸಿಕೊಂಡು ಬಂದ ಹೆಡೆವಣಿಗಳ ಮಂಗಳಕಿರಣಗಳೋ ! ಇದು ನನ್ನ ಹೃದಯವನ್ನು ವಿಶೇಷವಾಗಿ ಆಕರ್ಷಿಸುತ್ತಿದೆ ಎಂದು ಗಂಗೆಯ ನೀರಿನಲ್ಲಿ ದಿಲ್ ಎಂದು ಶಬ್ದವಾಗುವ ಹಾಗೆ ಥಟ್ಟನೆ ಹಾರಿ ಅತ್ಯಂತ ಪ್ರೇಮಾತಿಶಯದಿಂದ ಕಂಡು ನಿಧಿಯನ್ನು ಕಂಡವನಂತೆ ವ ಉತ್ಸಾಹದಿಂದೆತ್ತಿಕೊಂಡು ಮನೆಗೆ ತಂದು ರಾಧೆಯೆಂಬ ತನ್ನ ಪ್ರಿಯಳ ಮಡಲಿನಲ್ಲಿ ಕೂಸನ್ನು ಇಡಲಾಗಿ ಆಕೆ ಪ್ರೀತಿಸಿ ಮಗನು ಹುಟ್ಟಿದ