________________
ಪ್ರಥಮಾಶ್ವಾಸಂ | ೯೭ ವ|ಅಂತವರ್ಗೆ ಜಾತಕರ್ಮ ನಾಮಕರಣಾನ್ನಪ್ರಾಶನ ಚಾಲೋಪನಯನಾದಿ ಷೋಡಶಯಗಳಂ ಗಾಂಗೇಯಂ ತಾಂ ಮುಂತಿಟ್ಟು ಮಾಡಿ ಶಸ್ತ್ರ ಶಾಸ್ತ್ರಂಗಳೊಳತಿ ಪರಿಣತರಂ ಮಾಡಿ ಮದುವೆಯಂ ಮಾಡಲೆಂದು ಧೃತರಾಷ್ಟಂಗೆ ಗಾಂಧಾರರಾಜ ಸೌಬಲನ ಮಗಳಪ್ಪ ಗಾಂಧಾರಿಯಂ ಶಕುನಿಯೊಡವುಟ್ಟಿದಳಂ ತಂದುಕೊಟ್ಟುಕಂ || ಮತ್ತಿತ್ತ ನೆಗಟಿಯ ಪುರು
ಷೋತ್ತಮನ ಪಿತಾಮಹಂಗೆ ಶ್ರಂಗೆ ಮಗಳ್ | ಮತ್ತಗಜಗಮನೆ ಯದುವಂ ಶೋತ್ತಮೆಯೆನೆ ಕುಂತಿ ಕುಂತಿಭೋಜನ ಮನೆಯೊಳ್ || ಬಳೆಯುತ್ತಿರ್ಪನ್ನೆಗಮಾ ನಳಿನಾಸ್ಯೆಯ ಗುದೊಂದು ಶುಶೂಷೆ ಮನಂ | ಗೊಳೆ ಕೊಟ್ಟಂ ದುರ್ವಾಸಂ |
ವಿಳಸಿತ ಮಂತ್ರಾಕ್ಷರಂಗಳಂ ದಯೆಯಿಂದಂ ||
ವ|| ಅಂತು ಕೊಟ್ಟು ಮಂತ್ರಾಕ್ಷರಂಗಳನಾಹ್ವಾನಂಗೆಯ್ದು ನಿನ್ನ ಬಗೆಗೆ ಬಂದ ಪೋಲ್ವೆಯ ಮಕ್ಕಳು ಪಡವೆಯೆಂದು ಬೆಸಸಿದೊಡೊಂದು ದಿವಸಂ ಕೊಂತಿ
ಕಂ | ಪುಶ್ರವಣಂ ನೋಡುವೆನೆ - ನ್ನಿಚ್ಚೆಯೊಳೀ ಮುನಿಯ ವರದ ಮಹಿಮೆಯನೆನುತಂ ||
ದುಚಸ್ತನಿ ಗಂಗೆಗೆ ಶಫ * ರೋಚಳಿತ ತರತ್ತರಂಗಗೊರ್ವಳೆ ಬಂದಳ್ ||
SE
ಅಂದರೆ ಆ ಮೂವರನ್ನೂ ತ್ರಿಮೂರ್ತಿಗಳೆಂದೇ ಕರೆಯುತ್ತಾರೆ ವ ಹಾಗೆ ಅವರಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಲ, ಉಪನಯನವೇ ಮೊದಲಾದ ಹದಿನಾರು ಕರ್ಮಗಳನ್ನು ಪ್ರಧಾನವಾಗಿ ಭೀಷ್ಮನು ತಾನೇ ಮುಂದೆ ನಿಂತು ಮಾಡಿ ಅವರನ್ನು ಶಸ್ತ್ರವಿದ್ಯೆಯಲ್ಲಿಯೂ ಶಾಸ್ತ್ರವಿದ್ಯೆಯಲ್ಲಿಯೂ ಪಂಡಿತರನ್ನಾಗಿ ಮಾಡಿದನು. ಧೃತರಾಷ್ಟ್ರನಿಗೆ ಗಾಂಧಾರರಾಜನಾದ ಸೌಬಲನ ಮಗಳೂ ಶಕುನಿಯ ಒಡಹುಟ್ಟಿದವಳೂ ಆದ ಗಾಂಧಾರಿಯನ್ನು ಮದುವೆ ಮಾಡಿದನು. ೮೮-೮೯. ಈ ಕಡೆ ಪ್ರಸಿದ್ಧನಾದ ಶ್ರೀಕೃಷ್ಣನ ತಾತನಾದ ಶೂರನೆಂಬ ಯದುವಂಶದ ರಾಜನಿಗೆ ಮದಗಜಗಮನೆಯೂ ಯದುವಂಶಶ್ರೇಷ್ಠಳೂ ಆದ ಕುಂತಿಯೆಂಬ ಮಗಳು ಕುಂತಿಭೋಜನ ಮನೆಯಲ್ಲಿ ಬೆಳೆಯುತ್ತಿರಲು ಆ ಕಮಲಮುಖಿಯಾದ ಕುಂತಿಯು ಮಾಡಿದ ಶುಶೂಷೆಯಿಂದ ಮೆಚ್ಚಿದ ದುರ್ವಾಸನೆಂಬ ಋಷಿಯು ಪ್ರಕಾಶಮಾನವಾದ ಅಯ್ದು ಮಂತ್ರಾಕ್ಷರಗಳನ್ನು ದಯಮಾಡಿ ಕೊಟ್ಟನು. ವ|| ಹಾಗೆ ಕೊಟ್ಟು ಈ ಅಯ್ದುಮಂತ್ರಗಳನ್ನು ನೀನು ಉಚ್ಚರಿಸಿ ಕರೆದರೆ ನಿನ್ನ ಮನಸ್ಸಿಗೆ ಬಂದ ಹೋಲಿಕೆಯ ಮಕ್ಕಳನ್ನು ಪಡೆಯುತ್ತೀಯೆ ಎಂದು ಅಪ್ಪಣೆ ಮಾಡಿದನು. ಒಂದು ದಿನ ಕುಂತಿಯು ೯೦. ಈ ಋಷಿಯು ಕೊಟ್ಟ ವರದ ಮಹಿಮೆಯನ್ನು ನನಗೆ ಇಷ್ಟ ಬಂದಂತೆ ಪರೀಕ್ಷೆ ಮಾಡಿ ನೋಡುತ್ತೇನೆಂದು ಮೀನುಗಳಿಂದ ಮೇಲಕ್ಕೆ ಹಾರಿಸಲ್ಪಟ್ಟ ಚಂಚಲವಾದ